Composer : Shri Prasannavenkata dasaru
ಜಲ ಜಲಂಗಿರ ಅನಿಲ ದೇವನ |
ಕಾಲಿಗೆರಗುತ ಕೇಳಿ ವರವನು [ಪ]
ಆರು ಮೂರ್ಮ್ಯಾಲ್ಮೂರು ಸಾವಿರ |
ಆರು ನೂರ್ಜಪ ಜೀವಗತಿಕ್ರಮ ||
ತೋರಿ ಮೂರ್ಬಗೆ ಜೀವರಿಗೆ ದಿನ |
ಸಿರಿರಮಣ ಖರೆಯೆಂದು ಸಾರುವ [೧]
ಲೋಲೆಲಕುಮಿಪತಿಗೆ ಎಡ |
ಬಲನೆನಿಸಿ ಮೂಲೋಕದಿ ಮೆರೆವನ ||
ಪೌಲಮಿಗತ ಜೀವಲೋಕಕೆ |
ಮೂಲ ಶ್ವಾಸನು ಜೀವರೋತ್ತಮ [೨]
ವ್ಯಾಸರಾಜರ ತಪಸಿಗೊಲಿದು |
ವಿಶೇಷ ರೂಪದಿ ನೆಲಿಸಿಯಿಲ್ಲಿಯೆ ||
ಶ್ರೀಶ ಸಿರಿ ಪ್ರಸನ್ವೆಂಕಟನ ನಿಜ |
ದಾಸನೆಂದ್-ಹೆಸರಾದ ಧೀಷಣ [೩]
jala jalaMgira anila dEvana |
kAligeraguta kELi varavanu [pa]
Aru mUrmyAlmUru sAvira |
Aru nUrjapa jIvagatikrama ||
tOri mUrbage jIvarige dina |
siriramaNa KareyeMdu sAruva [1]
lOlelakumipatige eDa |
balanenisi mUlOkadi merevana ||
paulamigata jIvalOkake |
mUla SvAsanu jIvarOttama [2]
vyAsarAjara tapasigolidu |
viSESha rUpadi nelisiyilliye ||
SrISa siri prasanveMkaTana nija |
dAsaneMd-hesarAda dhIShaNa [3]
Leave a Reply