Composer : Shri Pranesha dasaru
ಗುರುವೆ ಭಾರತಿನಾಥ | ಶರಣು ಲಾಲಿಸೋ ಮಾತ |
ಹರಿ ಪದಾರ್ಚನೆ ಕೊಟ್ಟು ಪೊರೆಯೋ ದಯೆಯಿಟ್ಟು [ಪ]
ರಾಮ ಸೇವಕನಾಗಿ ವಾನರ ಕಟಕ ನೆರಹಿ |
ನೀಂ ಮುದದಿ ಲವಣಾಬ್ಧಿ ದಾಟಿ ಪೋಗಿ ||
ಭೂಮಿ ತನುಜೆಳಿಗೆ ವಾರ್ತೆಯನೆ ಪೇಳಿ |
ರಾಗಟಿಯ ಸ್ವಾಮಿಗರ್ಪಿಸಿದ ಬಲವಂತ ಹನುಮಂತ |೧|
ರಾಜಸೂಯವ ಮಾಡುವದಕೆ ಮಾಗಧನ ಕೊಂದೆ |
ಮಾಜಿಸಿದೆ ಕುರುಪತಿಯ ಸಂತತಿಯನು ||
ಸೋಜಿಗವು ನಿನ್ನ ಲೀಲೆಯು ಆಯುಜಾತ ಬಿ |
ಡೌಜ ರಕ್ಷಕ ದ್ರೌಪದೀಶ ಬಲವಂತ |೨|
ಬುಧ ಮಧ್ಯಗೇಹನಲಿ ಅವತರಿಸಿ ಕುಮತಗಳ |
ಬೆದರಿಸಿ ತ್ರಿದಶ ಸಪ್ತ ಗ್ರಂಥ ಮಾಡಿ ||
ಸುದಯದಿಂದುತ್ತಮರಿಗಿತ್ತು ಮತವನು ನಿಲಿಸಿ |
ಬದರಿಯೋಳ್ ಪ್ರಾಣೇಶ ವಿಠ್ಠಲನಲ್ಲಿರುವೆ |೩|
guruve BAratinAtha | SaraNu lAlisO mAta |
hari padArcane koTTu poreyO dayeyiTTu [pa]
rAma sEvakanAgi vAnara kaTaka nerahi |
nIM mudadi lavaNAbdhi dATi pOgi ||
BUmi tanujeLige vArteyane pELi |
rAgaTiya svAmigarpisida balavaMta hanumaMta |1|
rAjasUyava mADuvadake mAgadhana koMde |
mAjiside kurupatiya saMtatiyanu ||
sOjigavu ninna lIleyu AyujAta bi |
Dauja rakShaka draupadISa balavaMta |2|
budha madhyagEhanali avatarisi kumatagaLa |
bedarisi tridaSa sapta graMtha mADi ||
sudayadiMduttamarigittu matavanu nilisi |
badariyOL prANESa viThThalanalliruve |3|
Leave a Reply