Kaayo Pranesha

Composer : Shri Vishwendra teertharu

By Smt.Shubhalakshmi Rao

ಕಾಯೋ ಪ್ರಾಣೇಶ ಕೀಶಕುಲೇಶ
ವಾಯುಸುತನೆಂದು ಮೆರೆವ ಜೀವೇಶ [ಪ]

ಅಂಜನಾದೇವಿಯೊಳ್ ಜನಿಸಿಕೊಂಡಿರುವಿ
ಅಂಜದೆ ಲಂಕೆಗೆ ಬೆಂಕಿ ಹಚ್ಚಿರುವಿ
ಸಂಜೀವನವ ತಂದು ಕಪಿಗಳನುಳಿಸಿದಿ
ಕಂಜಾಕ್ಷಿ ಸೀತೆಗುಂಗುರವ ತಂದಿತ್ತೆ [೧]

ಕುಂತಿದೇವಿಯ ಗರ್ಭದೊಳಗುದ್ಭವಿಸಿದಿ
ಪಾರ್ಥರೊಳ್ – ನೀನಗ್ರಗಣ್ಯನೆಂದೆನಿಸಿ
ಪಂಥದಿ ಮಗದಾಧಿಪತಿಯ ಸಂಹರಿಸಿ
ಕಾಂತೆಯ ತಲೆಯ ಕೂದಲನೆ ಕಟ್ಟಿಸಿದಿ [೨]

ಪಾಜಕ ಕ್ಷೇತ್ರದೊಳ್ ನೀನವತರಿಸಿ
ರಾಜತಾಸನದಿ ಶ್ರೀಕೃಷ್ಣನನಿರಿಸಿ
ರಾಜೇಶ ಹಯಮುಖ ಕಿಂಕರನೆನಿಸೀ
ಮೂಜಗದಲಿ ಶ್ರೇಷ್ಠಗುರು ನೀನೆಂದೆನಿಸಿ [೩]


kAyO prANESa kISakulESa
vAyusutaneMdu mereva jIvESa [pa]

aMjanAdEviyoL janisikoMDiruvi
aMjade laMkege beMki hacciruvi
saMjIvanava taMdu kapigaLanuLisidi
kaMjAkShi sIteguMgurava taMditte [1]

kuMtidEviya garBadoLagudBavisidi
pArtharoL – nInagragaNyaneMdenisi
paMthadi magadAdhipatiya saMharisi
kAMteya taleya kUdalane kaTTisidi [2]

pAjaka kShEtradoL nInavatarisi
rAjatAsanadi SrIkRuShNananirisi
rAjESa hayamuKa kiMkaranenisI
mUjagadali SrEShThaguru nIneMdenisi [3]

Leave a Reply

Your email address will not be published. Required fields are marked *

You might also like

error: Content is protected !!