Composer : Shri Purandara dasaru
ಹನುಮಂತ ನೀ ಬಲವಂತ ಜಯವಂತನಯ್ಯಾ |
ಅನುಮಾನವಿಲ್ಲ ಆನಂದತೀರ್ಥ ರಾಯಾ || ಪ ||
ರಾಮ ಸೇವಕನಾಗಿರಾವಣನ ಪುರವ |
ನಿರ್ಧೂಮವನುಮಾಡಿದಿ ಮುಷದೊಳಗೆ |
ಭೂಮಿ ಪುತ್ರಿಗೆಮುದ್ರಿ ಉಂಗುರವಿತ್ತು |
ಪ್ರೇಮ ಕುಲವನು ಶ್ರೀ ರಾಮಪದಗರ್ಪಿಸಿದೆ || ೧ ||
ಕೃಷ್ಣಾವತಾರದಲಿ ಭೀಮನಾಗ್ ಅವತರಿಸಿ |
ದುಷ್ಟ ದೈತ್ಯರನೆಲ್ಲಸಂಹರಿಸೀದೀ |
ದುಷ್ಟ ಹೀನರಧೃತರಾಷ್ಟ್ರ ವಂಶವನ್ನು |
ಕಷ್ಟವಿಲ್ಲದೆ ಕೊಂದು ಶ್ರೀ ಕೃಷ್ಣ ಪದಗರ್ಪಿಸಿದೆ || ೨ ||
ಪತಿತ ಸಂಕರ ಹುಟ್ಟಿ ಮತವೆಲ್ಲ ಕೆಡಿಸಾಲು |
ಮತಿಹೀನರಾದ ಸಜ್ಜನರಿಗೆಲ್ಲಾ |
ಅತಿ ವೇಗದಲಿ ಮಧ್ವ ಯತಿ ರೂಪವ ಧರಿಸಿ |
ಸದ್ಗತಿಯ ಪಾಲಿಸಿದಪುರಂದರವಿಠಲ ದಾಸಾ || ೩ ||
hanumaMta nI balavaMta jayavaMtanayyA |
anumAnavilla AnaMdatIrtha rAyA || pa ||
rAma sEvakanAgi rAvaNana purava |
nirdhUmavanu mADidi muShadoLage |
BUmi putrige mudri uMguravittu |
prEma kulavanu SrI rAma padagarpiside || 1 ||
kRuShNAvatAradali BImanAg avatarisi |
duShTa daityaranella saMharisIdI |
duShTa hInara dhRutarAShTra vaMSavannu |
kaShTavillade koMdu SrI kRuShNa padagarpiside || 2 ||
patita saMkara huTTi matavella keDisAlu |
matihInarAda sajjanarigellA |
ati vEgadali madhva yati rUpava dharisi |
sadgatiya pAlisida puraMdaraviThala dAsA || 3 ||
Leave a Reply