Enu dhanyano hanuma

Composer: Shri Susheelendracharya ratti [Gurushyamasundara ankita]

By Smt.Shubhalakshmi Rao

ಏನು ಧನ್ಯನೊ ಹನುಮ ಎಂಥಾ ಮಾನ್ಯನೊ |
ವಾನರೋತ್ತಮನು ತಾನೆ ರಾಮ ಸೇವೆ ಮಾಡುತಿಹನು |ಅ.ಪ|

ಲಕ್ಷ ಲಕ್ಷ ಕಪಿಗಳಿರಲು ಯಕ್ಷ ಗಂಧರ್ವರಿರಲು
ಮೋಕ್ಶ ದಾಯಕ ರಾಮಚಂದ್ರನ ಈಕ್ಷಿಸುತ ಸೇವೆ ಮಾಡುವ [೧]

ಶಂಕಿಸುತ ಜಲಧಿ ದಾಟಾಲು, ಮಂಕು ಹಿಡಿಯೆ ವಾನರರೆಲ್ಲ
ಶಂಕೆಯಿಲ್ಲದೆ ಲಂಕೆಗೆ ಹೋಗಿ , ಶಶಾಂಕ ವದನೆ ಸೀತೆಯ ನೋಡಿದ [೨]

ಶರಧಿ ಸುತೆಗೆ ಉಂಗುರ ನೀಡಿ , ಭರದಿ ರಾಮನ ವಾರ್ತೆ ಪೇಳಿ
ಧರ್ಮ ಮೀರದೆ ದಶ ಶಿರನ ಪುರವ ದಹಿಸಿ ತಿರುಗಿ ಬಂದ [೩]

ರಾಮ ಪಾದ ನಿರುತ ಜಪಿಸಿ , ಕಾಮ ಕ್ರೋಧ ಎಲ್ಲ ತ್ಯಜಿಸಿ
ಆ ಮಹಾ ಮಂತ್ರ ನಿಲಯ ಗುರುಶ್ಯಾಮಸುಂದರನ್ನ ವಲಿಸಿ [೪]

Enu dhanyano hanuma eMthA mAnyano |
vAnarOttamanu tAne rAma sEve mADutihanu |a.pa|

lakSha lakSha kapigaLiralu yakSha gaMdharvariralu
mOksha dAyaka rAmachaMdrana eekShisuta sEve mADuva [1]

shaMkisuta jaladhi dATAlu, maMku hiDiye vAnararella
shaMkeyillade laMkege hOgi , shashAMka vadane sIteya nODida [2]

sharadhi sutege uMgura nIDi , bharadi rAmana vArte pELi
dharma meerade dasha shirana purava dahisi tirugi baMda [3]

rAma pAda niruta japisi , kAma krOdha ella tyajisi
A mahA maMtra nilaya gurushyAmasuMdaranna valisi [4]

Leave a Reply

Your email address will not be published. Required fields are marked *

You might also like

error: Content is protected !!