Jaya mangalam Satyadheera

Composer : Shri Hanumesha vittala

By Smt.Shubhalakshmi Rao

Shri Satyadheera Tirtharu : 1886-1906
Aradhane : Jyeshtha Bahula Navami
Brindavana : Atkur
ಸತ್ಯವೀರಾಲವಾಲೋತ್ಥ: ವಿದುಷಾಂ ಚಿಂತಿತಪ್ರದ: |
ಸತ್ಯಧೀರಾಖ್ಯಕಲ್ಪದ್ರು: ಭೂಯಾದಿಷ್ಟಾರ್ಥ ಸಿದ್ದಯೇ |
सत्यवीरालवालोत्थ: विदुषां चिंतितप्रद: ।
सत्यधीराख्यकल्पद्रु: भूयादिष्टार्थ सिद्दये ।


ಜಯ ಮಂಗಳಂ ಸತ್ಯಧೀರತೀರ್ಥರಿಗೆ
ಶುಭಮಂಗಳಂ ಯತೀ ಗುಣಮಣಿಗೆ [ಪ]

ಜಗದುದರಧರನಾದ ಜಗವ ಸೃಷ್ಟಿಸಿದಂಥ
ಜಗವ ಪಾಲಿಸುವ ಶ್ರೀ ಜಗದೀಶನಾ
ತ್ರಿಗುಣಮಾನಿಯಳಿಂದ ಬಗೆ ಬಗೆಯ ಸ್ತುತಿಗೋಳ್ವ
ರಘುವರನ ದಿವ್ಯ ಚರಣಗಳ ಸೇವಿಪಗೆ (೧)

ಜಗದೀಶನಾಜ್ಞೆಯಿಂ ಜಗಕೆ ಗುರುವೆನಿಸಿ ನಾ-
ಲ್ಮೊಗನೈಯ್ಯ ಸರ್ವ ಪರಿಹಾರ-ನೆನಿಸಿದವಗೆ
ಜಗದೊಳಿರುವ ಅಜ್ಞ ಜನರುಗಳಿಗೆ ಪಂಚಮು-
ದ್ರೆಗಳನೇ ಇತ್ತು ಪಾಪಗಳ ತರಿದವಗೆ (೨)

ಸತ್ಯವೀರರು ಕರಗಳೆತ್ತಿ ಉತ್ತಮ ಪದವ
ಇತ್ತದ್ದೆ ಪುಸಿಯೆಂದು ನುಡಿದವರ ಮುಖಕೆ
ಮೃತ್ತಿಕೆಯನು ಹಚ್ಚಿ ಹತ್ತುಯೆಂಟೋ ರೂಪ ಸ-
ರ್ವೋತ್ತಮನ ಪೂಜಿಸಿದ ಸತ್ಯಧೀರರಿಗೆ (೩)

ಪುರ ಕಾಶಿಯಿಂದ ರಾಮೇಶ್ವರದ ಪರಿಯಂತ
ಇರುವ ಕ್ಷೇತ್ರಗಳಲ್ಲಿಯ ಮಹಿಮೆಯಾ
ದುರುಳ ಕಲಿಯಲಿ ಕಡಿಮೆಯಾಗ ಬಾರದು ಮನುಜ
ಸಿರಿ ರಾಮನಾಶ್ರಯದಿ ಜನಿಸಿ ಬಂದವಗೆ (೪)

ಕರುಣಾ ಸಾಗರನಿಗೆ ಕರೆದಲ್ಲಿ ಬರುವಗೆ
ಶರಣುಬಂದವರ ಪರಿಪಾಲಿಸುವಗೆ
ವರಗುರು ಮಧ್ವರಾಯರ ಪೀಠಪಾತ್ರಗೆ
ಧೀರ ಹನುಮೇಶವಿಠಲಗೆ (೫)


jaya maMgaLaM satyadhIratIrtharige
SuBamaMgaLaM yatI guNamaNige [pa]

jagadudaradharanAda jagava sRuShTisidaMtha
jagava pAlisuva SrI jagadISanA
triguNamAniyaLiMda bage bageya stutigOLva
raGuvarana divya caraNagaLa sEvipage (1)

jagadISanAj~jeyiM jagake guruvenisi nA-
lmoganaiyya sarva parihAra-nenisidavage
jagadoLiruva aj~ja janarugaLige paMcamu-
dregaLanE ittu pApagaLa taridavage (2)

satyavIraru karagaLetti uttama padava
ittadde pusiyeMdu nuDidavara muKake
mRuttikeyanu hacci hattuyeMTO rUpa sa-
rvOttamana pUjisida satyadhIrarige (3)

pura kASiyiMda rAmESvarada pariyaMta
iruva kShEtragaLalliya mahimeyA
duruLa kaliyali kaDimeyAga bAradu manuja
siri rAmanASrayadi janisi baMdavage (4)

karuNA sAgaranige karedalli baruvage
SaraNubaMdavara paripAlisuvage
varaguru madhvarAyara pIThapAtrage
dhIra hanumESaviThalage (5)

Leave a Reply

Your email address will not be published. Required fields are marked *

You might also like

error: Content is protected !!