Composer : Shri Purandara dasaru
ನಾರಾಯಣ ನಿಮ್ಮ ನಾಮವ ನೆನೆದು
ನಾಲಿಗೆ ತುದಿಯಲಿ ಅಮೃತವ ಸುರಿದು
ಖ್ಶೇಮ ನಾಮವ ಪುಣ್ಯ ಭಕ್ತಿಯ ಕೇಳಿ
ರಾಮನಾಮವ ಭಕ್ತಿಲಿ ನೆನೆದು
ಅಚ್ಯುತ ನಾಮವ ಭಕ್ತಿಯಿಂದ ನೆನೆದು
ಅನಂತ ನಾಮದ ಗುಣಕಥೆ ಕೇಳಿ
ಕುಸುಮನಾಭನ ಅಂಗಳದೊಳಗೆ
ಕುಂಕುಮ ಕಸ್ತೂರಿ ಥಲಿಗಳ ಹಾಕಿ
ವೃಂದಾವನಕೆ ಗೋಮಯತಂದು
ಸಾರಿಸಿ ಮುತ್ತಿನ ಚೌಕಳಿ ತುಂಬಿ
ಶಂಖ ಚಕ್ರ ಗದಾ ಪದ್ಮಗಳಿಂದಲಿ
ಅಲಂಕಾರ ಪಂಚಣಾಗಿ ತುಂಬಿ
ಸಕಲ ತೀರ್ಥಗಲೆಂಬೊ ಗಂಗೆಲಿ ಮಿಂದು
ದೇವಾಂಗ ಪಠವಾಲಿಯನೊಗೆದು
ಗಿಂಡೀಲಿ ಉದಕವ ಝಾರಿಲಿ ತುಂಬಿ
ನೇಮದಿಂದ ಶ್ರೀಕೃಷ್ಣ ತುಲಸೀಗೆರೆದು
ಅನೇಕ ಜನ್ಮದ ಪಾಪವ ಕಳೆದು ಪಠಾವಲಿಯಲಿ
ಬತ್ತಿಯ ಮಾದಿ
ಅಚ್ಚಕರಿ ಆಕಳ ತುಪ್ಪವ ತುಂಬಿ ಮುತ್ತು ಮಾಣಿಕ್ಯವೆಂಬೊ
ಠಾನಾದೀವಿಗೆ ದೇವರ ಜಗುಲಿಗೆ ಎದಿರಾಗಿಟ್ಟು ಗೊವಿಂದಗೆ
ಶ್ರೀಕೃಷ್ಣಾ ನಿನಗರ್ಪಿತವೆಂದು
ಪಂಚಾಮೃತದಭಿಶೇಕವ ಮಾಡಿ
ಆಚಮನಂಗಲ ಕೇಶವಗಿಟ್ಟು
ಆಭರನಂಗಳ ಶ್ರೀಹರಿಗಿಟ್ಟು
ಮುಂಗೈ ಮುರಾರಿ ಮುಕುಂದನಿಗಿಟ್ಟು
ಅಂದದಿ ಪಾಟಲಿ ಗೊವಿಂದನಿಗಿಟ್ಟು
ಮುತ್ತಿನ ವಂಕಿ ವಿಠ್ಠಲನಿಗಿಟ್ಟು
ಪಾರಿಜಾತ ಹೊನ್ನು ಹೂ ಮಲ್ಲಿಗೆ
ಸಂಪಿಗೆ ಕ್ಯಾದಿಗಿ ದವನ ಮುಂಗೈ
ಚೆಲುವ ಮಾಣಿಕ್ಯ ಹೊಳೆಯುವ
ಚಂದ್ರ ಸೂರ್ಯರಿಗಿಂತ ಹೆಚ್ಚಾಗಿ ಇರುವ
ಹೊನ್ನ ಹರಿವಾಣ ತಂದಿರಿಸಿ
ಶಾಲ್ಯಾನ್ನ ಸೂಪಗಲ ಬಡಿಸಿ
ಪರಮಾನ್ನ ಭಕ್ಶ-ಗಳ ಬಡಿಸಿ
ಗಾಯತ್ರಿ ಮಂತ್ರದಿಂದ ಪ್ರೋಕ್ಶಿಸಿ
ಜ್ಞಾನದಿಂದ ಪಂಚ ಪ್ರಾಣನ ಸ್ಮರಿಸಿ
ನೈವೇದ್ಯಂಗಲ ಆ ಕ್ರಮದಿಂದಲಿ ಬಡಿಸಿ
ಶ್ರೀಕೃಷ್ಣಾ ನಿನಗರ್ಪಿತವೆಂದು |
ಇತಿ ಶ್ರೀ ಮಾನಸ ಪೂಜೆ ಕೇಲಿ ಹೇಳಿದಂಥ ಸಜ್ಜನರಿಗೆ
ಅನಂದದಿಂದ ಮುಕ್ತಿಯ ಕೊಡುವ ಪುರಂದರ ವಿಠ್ಠಲ ||
nArAyaNa nimma nAmava nenedu
nAlige tudiyali amRutava suridu
KshEma nAmava puNya bhaktiya kELi
rAmanAmava bhaktili nenedu
achyuta nAmava bhaktiyiMda nenedu
anaMta nAmada guNakathe kELi
kusumanAbhana aMgaLadoLage
kuMkuma kastoori thaligaLa hAki
vRuMdAvanake gOmayataMdu
sArisi muttina choukaLi tuMbi
shaMkha cakra gadA padmagaLiMdali
alaMkAra paMchaNAgi tuMbi
sakala teerthagaleMbo gaMgeli miMdu
dEvAMga paThavAliyanogedu
giMDeeli udakava jhArili tuMbi
nEmadiMda shreekRuShNa tulasIgeredu
anEka janmada pApava kaLedu paThAvaliyali
battiya mAdi
acchakari AkaLa tuppava tuMbi muttu mANikyaveMbo
ThAnAdeevige dEvara jagulige edirAgiTTu goviMdage
shreekRuShNA ninagarpitaveMdu
paMchAmRutadabhishEkava mADi
AchamanaMgala kEshavagiTTu
AbharanaMgaLa shreeharigiTTu
muMgai murAri mukuMdanigiTTu
aMdadi pATali goviMdanigiTTu
muttina vaMki viThThalanigiTTu
pArijAta honnu hoo mallige
saMpige kyAdigi davana muMgai
cheluva mANikya hoLeyuva
chaMdra sooryarigiMta hecchAgi iruva
honna harivANa taMdirisi
shAlyAnna soopagala baDisi
paramAnna bhaksha-gaLa baDisi
gAyatri maMtradiMda prOkshisi
j~jAnadiMda paMcha prANana smarisi
naivEdyaMgala A kramadiMdali baDisi
shreekRuShNA ninagarpitaveMdu |
iti shrI mAnasa pooje kEli hELidaMtha sajjanarige
anaMdadiMda muktiya koDuva puraMdara viThThala ||
Leave a Reply