Composer : Shri Amba bai
ದುರ್ಗೆ ಪಾಲಿಸೆ ಕರುಣದಿ | ಮಹಾ ಲಕುಮಿ
ದುರ್ಗೆ ಪಾಲಿಸೆ ಕರುಣದಿ (ಪ.)
ದುರ್ಗೆ ಪಾಲಿಸೆ ಅಪವರ್ಗ ಪದವಿ ಇತ್ತು
ದುರ್ಗಮವಾಗಿಹ ದುಃಖವ ಬಿಡಿಸಿ
ಭಾರ್ಗವಿರಮಣನ ಮಾರ್ಗವ ತೋರೆ
ಭೋರ್ಗರೆಯುತ ಖಳರ ನಿಗ್ರಹಿಸುವಳೆ (ಅ.ಪ.)
ಕ್ಷೀರವಾರಿಧಿ ತನಯೆ | ಶ್ರೀ ರಮಣನ ಜಾಯೆ
ನಾರಸಿಂಹನ ಅರಸಿಯೆ
ಸಾರಿದೆ ನಿನ ಪದ ತೋರಿಸೆ ಹರಿಪದ
ಕಾರುಣ್ಯಾತ್ಮಳೆ ಕರುಣವ ಬೀರೆ
ವಾರವಾರಕೆ ನಿನ್ನ ಆರಾಧಿಸುವಂಥ
ಚಾರುಮತಿಯ ನೀಡೆ ನಾರಿರನ್ನಳೆ (೧)
ಪದ್ಮಾವತಿಯೆ ಪದ್ಮಿನಿ | ಪದ್ಮಾಕ್ಷಿದೇವಿ
ಪದ್ಮಸಂಭವೆ ಕಾಮಿನಿ
ಪದ್ಮನಾಭ ಶ್ರೀ ಶ್ರೀನಿವಾಸನ
ಪದ್ಮಪಾದವ ಹೃತ್ಪದ್ಮದಿ ತೋರೆ
ಪದ್ಮಸರೋವರ ತೀರವಾಸಿ ಕರ
ಪದ್ಮಯುತಳೆ ಮುಖಪದ್ಮವ ತೋರೆ ( ೨)
ರೂಪತ್ರಯಳೆ ಕಾಮಿನಿ | ಕಾಮಪೂರಿಣೀ
ತಾಪಹರಿಸೆ ಭಾಮಿನಿ
ಪಾಪಗಲ್ಲೆಲ್ಲವ ನೀ ಪರಿಹರಿಸುತ
ಗೋಪಾಲಕೃಷ್ಣವಿಠ್ಠಲನನು ತೋರುತ ನೀ
ಕೃಪೆಗೈಯ್ಯೆಂದೀ ಪರಿ ನುಡಿವೆನೆ
ನೀ ಪಾಲಿಸುವುದು ಅಪವರ್ಗದಲಿ (೩)
durge pAlise karuNadi | mahA lakumi
durge pAlise karuNadi (pa.)
durge pAlise apavarga padavi ittu
durgamavAgiha duHKava biDisi
BArgaviramaNana mArgava tOre
BOrgareyuta KaLara nigrahisuvaLe (a.pa.)
kShIravAridhi tanaye | SrI ramaNana jAye
nArasiMhana arasiye
sAride nina pada tOrise haripada
kAruNyAtmaLe karuNava bIre
vAravArake ninna ArAdhisuvaMtha
cArumatiya nIDe nArirannaLe (1)
padmAvatiye padmini | padmAkShidEvi
padmasaMBave kAmini
padmanABa SrI SrInivAsana
padmapAdava hRutpadmadi tOre
padmasarOvara tIravAsi kara
padmayutaLe muKapadmava tOre ( 2)
rUpatrayaLe kAmini | kAmapUriNI
tApaharise BAmini
pApagallellava nI pariharisuta
gOpAlakRuShNaviThThalananu tOruta nI
kRupegaiyyeMdI pari nuDivene
nI pAlisuvudu apavargadali (3)
Leave a Reply