Namo namo bhagavati

Composer : Shri Prasannavenkata dasaru

By Smt.Shubhalakshmi Rao

ನಮೋ ನಮೋ ಭಗವತೀ |
ಮಮ ಕುಲಾಪನ್ನ ಕೀರುತಿ [ಪ]

ನಮಿಪೆ ನಿನ್ನ ಪದಕಮಲಕನುದಿನಾ |
ಶ್ರೀಮನ್ನಾರಾಯಣನ ತೋರಮ್ಮಾ [ಅ.ಪ]

ಸಂತತ ಭವ ಚಿಂತೆಗಳನೆದುರಿಸಿ |
ಭ್ರಾಂತನಾದೆ ಕೊನೆಯಂತೂ ಕಾಣದೆ ||
ಅಂತರಂಗವನುಸುರೆ ಶಾಂತ ಚಿತ್ತದಿನಿ-
ಶ್ಚಿಂತ ಹರಿಗೆಮ್ಮಾಂತರ್ಯ ತಿಳಿಸು [೧]

ಕೇಸರಿಗಂಜದ ಮೃಗವುಂಟೇದಿ-
ನೇಶ ಹೊರ ಬರೆ ಕತ್ತಲಿರುವುದೆ ||
ವಿಸ್ತೃತಿ ಪರಿಯಲಿ ನಿನ್ನ ನಂಬಲುಯಿನ್ನು
ಕೇಶವಿಲ್ಲೆಂದು ವಾರ್ತೆ ಕೇಳಿ ಬಂದೆ [೨]

ನಾಕದರಸಿ ನಿನ್ನನೇಕ ಕಾರ್ಯದಲಿ |
ಶೋಕ ತರಿದ ಬಹು ಚರಿತಗಳಿವೆಯೆ ||
ತ್ವಕುವೇಂದ್ರಿಯವಾ ತುಳಿದು ನಿಂತನಮ್ಮ |
ಶ್ರೀಕರ ಪ್ರಸನ್ವೆಂಕಟನ ತೋರಮ್ಮ [೩]


namO namO BagavatI |
mama kulApanna kIruti [pa]

namipe ninna padakamalakanudinA |
SrImannArAyaNana tOrammA [a.pa]

saMtata Bava ciMtegaLanedurisi |
BrAMtanAde koneyaMtU kANade ||
aMtaraMgavanusure SAMta cittadini-
SciMta harigemmAMtarya tiLisu [1]

kEsarigaMjada mRugavuMTEdi-
nESa hora bare kattaliruvude ||
vistRuti pariyali ninna naMbaluyinnu
kESavilleMdu vArte kELi baMde [2]

nAkadarasi ninnanEka kAryadali |
SOka tarida bahu caritagaLiveye ||
tvakuvEMdriyavA tuLidu niMtanamma |
SrIkara prasanveMkaTana tOramma [3]

Leave a Reply

Your email address will not be published. Required fields are marked *

You might also like

error: Content is protected !!