Composer : Shri Prasannavenkata dasaru
ಪಾಲಿಪುದೆಮ್ಮ ಪದುಮಾಲಯೆ ತಾಯೆ [ಪ]
ಪಾಲವಾರುಧಿ ತನಯೆ ಕಾಯೆ [ಅ.ಪ]
ಬೊಮ್ಮನಮ್ಮ ರುಗ್ಮಿಣಿ ಜಾಂಬವತಿಯೆ |
ಪೆರ್ಮೆಯ ಹೆಮ್ಮಗ ಅಜನ ಜನನಿ |
ಹಮ್ಮಿನ ಮೊಮ್ಮಗ ರುದ್ರಾದಿ ಸುರರೆಲ್ಲರ |
ಪ್ರೇಮದಿ ಪೊರೆದ ಮಹಾಮಹಿಮಳೆ [೧]
ಮಾತರಿಶ್ವಪ್ರಿಯ ಮಾತುಳಾಂತಕ ಹರಿ |
ಕೃತ್ತಿವಾಸಾದ್ಯರಿಂದ ನಿತ್ಯವೂ ಸ್ತುತ್ಯನಾ |
ವೀತ ಶೋಕ ಭಯನಾ ಶ್ರೀನಿವಾಸನಾ |
ಇತ್ತ ದಯಮಾಡಿ ತೋರ್ ತನ್ನುರವ ಪ್ರಮೆಯೆ [೨]
ಕೋಮಲ ಚರಣಯುಗ್ಮಕಭಿನಮಿಪೆನಿನ್ನ |
ನಾಮಕೊಂಡಾಡುವ ನಿರ್ಮಲ ಮನವಿತ್ತು |
ಸ್ವಾಮಿ ಶ್ರೀ ಪ್ರಸನ್ವೆಂಕಟನೊಲುಮೆಯ |
ಕಮ್ಮಲರ್ಸೂಸುವ ತೆರ ಇಮ್ಮಡಿಗೊಳಿಸಮ್ಮಾ [೩]
pAlipudemma padumAlaye tAye [pa]
pAlavArudhi tanaye kAye [a.pa]
bommanamma rugmiNi jAMbavatiye |
permeya hemmaga ajana janani |
hammina mommaga rudrAdi surarellara |
prEmadi poreda mahAmahimaLe [1]
mAtariSvapriya mAtuLAMtaka hari |
kRuttivAsAdyariMda nityavU stutyanA |
vIta SOka BayanA SrInivAsanA |
itta dayamADi tOr tannurava prameye [2]
kOmala caraNayugmakaBinamipeninna |
nAmakoMDADuva nirmala manavittu |
svAmi SrI prasanveMkaTanolumeya |
kammalarsUsuva tera immaDigoLisammA [3]
Leave a Reply