Deva devana Rani

Composer : Shri Prasannavenkata dasaru

By Smt.Shubhalakshmi Rao

ದೇವದೇವನ ರಾಣಿ ತ್ರಿವೇಣಿ [ಪ]
ಭಾವುಕ ಜನರಭಿಮಾನಿ ಜನನಿ [ಅ.ಪ]

ಪ್ರಯಾಗಮಾಧವನ ರಮಣಿ ನೀ |
ಶ್ರೇಯೆ ಅತಿತನಾನುಗ್ರಹಕಾರಿಣಿ ||
ಮಾಯಗೊಂಡ ಮಹಿಧರನ ಕಾಣೋವು |
ಪಾಯ ಮುಕುತಿ ಯೋಗ್ಯಗಭಿದಾತೆ [೧]

ವನಜಸಂಭವನನಲಾಕ್ಷ ಸುರರ ಕಡೆ- |
ಗಣ್ಣನೋಟದಿಂ ಸ್ಥಾನ ಬದಲಿಪೆ ||
ತನ್ನುರದ ಮೋಹದರಸಿ ಹರಿಯಾ |
ಚೆನ್ನ ಚೆಲುವ ಸರಸಗಳಿಂ ಸೆಳೆವಾ [೨]

ಸನಕಸನಂದನ ನಾರದಾದಿ ಘನ |
ಮುನಿಜನವೃಂದಕೆ ಸನ್ನುತವೂ ನೀ
ಚೆನ್ನಿಗ ಸಿರಿ ಪ್ರಸನ್ವೆಂಕಟರೇಯನ |
ಸನಿಹ ತಂದು ತೋರಿದ ಗುಣಪೂರ್ಣಿ [೩]


dEvadEvana rANi trivENi [pa]
BAvuka janaraBimAni janani [a.pa]

prayAgamAdhavana ramaNi nI |
SrEye atitanAnugrahakAriNi ||
mAyagoMDa mahidharana kANOvu |
pAya mukuti yOgyagaBidAte [1]

vanajasaMBavananalAkSha surara kaDe- |
gaNNanOTadiM sthAna badalipe ||
tannurada mOhadarasi hariyA |
cenna celuva sarasagaLiM seLevA [2]

sanakasanaMdana nAradAdi Gana |
munijanavRuMdake sannutavU nI
cenniga siri prasanveMkaTarEyana |
saniha taMdu tOrida guNapUrNi [3]

Leave a Reply

Your email address will not be published. Required fields are marked *

You might also like

error: Content is protected !!