Composer : Shri Prasannavenkata dasaru
ಸಾಗರ ಶಯನನ ರಾಣಿ ತ್ರಿವೇಣಿ |ಪ|
ಬಾಗುವೆ ಚರಣಕೆ ಕಾಯೆ ಕಲ್ಯಾಣಿ |ಅ.ಪ|
ನೀಗತಿಯೆಂದಗತಾಗತ ನಂಬಲು |
ಬೇಗನೆ ಬಂದು ಪೊರೆದವಳು |
ಈಗೇತಕೆ ತಾಯ್ ಮಗನ ಸಲುಹಲು |
ಮೊಗವೆತ್ತದೆ ಈ ಪರಿ ಕುಳಿತಿರುವಿ [೧]
ಶ್ರೀಭೂದುರ್ಗೆಯ ರೂಪ ತಳೆದು ಹರಿ |
ಈ ಭವಜರಿಗೆ ಕಾಣದ ತೆರದಲಿ
ಅಭುಜೆಗೈದ ಮಹಾಮಾಯೆ ವಿಭಾವರಿ |
ಭೂಭಾರ್ಗವಿಯೆ ಜಾಂಬೂನದಾಂಬರಿ [೨]
ಆರು ಮೂರು ಪ್ರಖರಾಗಮ ಕ್ಷೇತ್ರದೆ |
ಸಾರ ಶಾಸ್ತ್ರಕ್ರಮ ಪೂಜೆಗೊಳ್ಳುವೆ
ಆರುನಾಲಕು ತತ್ವಾಧಿಕ ದೇವಿಯೆ |
ಸ್ಮರಪಿತ ಶ್ರೀಪ್ರಸನ್ವೆಂಕಟನ ರಾಣಿಯೆ [೩]
sAgara Sayanana rANi trivENi |pa|
bAguve caraNake kAye kalyANi |a.pa|
nIgatiyeMdagatAgata naMbalu |
bEgane baMdu poredavaLu |
IgEtake tAy magana saluhalu |
mogavettade I pari kuLitiruvi [1]
SrIBUdurgeya rUpa taLedu hari |
I Bavajarige kANada teradali
aBujegaida mahAmAye viBAvari |
BUBArgaviye jAMbUnadAMbari [2]
Aru mUru praKarAgama kShEtrade |
sAra SAstrakrama pUjegoLLuve
ArunAlaku tatvAdhika dEviye |
smarapita SrIprasanveMkaTana rANiye [3]
Leave a Reply