Sagara raja tanaya

Composer : Shri Prasannavenkata dasaru

By Smt.Shubhalakshmi Rao

ಸಗರರಾಜ ತನಯಾ ಕಾಯೆಯಾ [ಪ]
ಅಗಣಿತ ಗುಣಾನಂದ ಸುದಯಾ [ಅ.ಪ]

ಭಾಗ್ಯದರಸಿ ನಿನ್ನ ಬಗೆ ಬಗೆ ಪೂಜಿಸಿ |
ಪೊಗಳಲು ಗುಣನಾಮಂಗಳ ಸ್ಮರಿಸಿ
ಬೇಗದಿ ಬಂದು ಸಲಹುವಳೆಂದು |
ಆಗಮ ಸಾರಿದ ಕೇಳಿ ಬಂದೆನೆ [೧]

ವಿಗತದೋಷ ಹರಿಯಗಲಿರದೆ ಸದಾ |
ಜಗಕಾರ್ಯದೊಳ್ ಜತೆಗೂಡಿ ವಿರಮಿಸುವ |
ಭಾಗವತರ ಭವರೋಗಗಳಳಿಸಿ ತವ |
ಭಾಗೀರಥಿ ಪಿತನ ಮೊಗ ತೋರುವಳೆ [೨]

ಸ್ವಗತಾನನ ತವ ಸ್ವಯಂಶಕ್ತಿ ಘನ |
ಸ್ವರ್ಗಪವರ್ಗಾದಿ ಭೂಸುರ ಪಾಲನ |
ತ್ರಿಗುಣಧಾಮ ಪ್ರಸನ್ವೆಂಕಟರಾಯನ |
ಈಗ ತೋರಿ ಪೊರೆ ಜಗದಘಹರಳೆ [೩]


sagararAja tanayA kAyeyA [pa]
agaNita guNAnaMda sudayA [a.pa]

BAgyadarasi ninna bage bage pUjisi |
pogaLalu guNanAmaMgaLa smarisi
bEgadi baMdu salahuvaLeMdu |
Agama sArida kELi baMdene [1]

vigatadOSha hariyagalirade sadA |
jagakAryadoL jategUDi viramisuva |
BAgavatara BavarOgagaLaLisi tava |
BAgIrathi pitana moga tOruvaLe [2]

svagatAnana tava svayaMSakti Gana |
svargapavargAdi BUsura pAlana |
triguNadhAma prasanveMkaTarAyana |
Iga tOri pore jagadaGaharaLe [3]

Leave a Reply

Your email address will not be published. Required fields are marked *

You might also like

error: Content is protected !!