Composer : Shri Prasannavenkata dasaru
ಕರುಣವಿರಲೆ ಯೆನ್ನ ಮ್ಯಾಲೆ ಕಮಲೆ [ಪ]
ಹರಿಯ ತೋರಿ ಪೊರೆ ವರಾಗ್ರವಾಸಳೆ [ಅ.ಪ]
ಮಂದ ಮತಿಯಿವನೆಂದೆಣಿಸದಿರಮ್ಮಾ |
ನೊಂದಿಹೆ ಭವ ಬಂಧನಗಳಿಂದಲೀ ನಾ |
ಕಂದನ ಕರೆ ಕೇಳಿ ಜನನಿ ಬಂದಪ್ಪುವಂತೆ |
ಇಂದೆನ್ನೋಳ್ ನಿನ್ನಾನಂದ ಮೊಗ ತೋರು [೧]
ಮಾನಗುಣಾಂಬುಧಿಯೇ ಮಾನ್ಯಳೆ |
ನಿನ್ನಂಘ್ರಿದ್ವಯವ ಪೂಜಿಪೆನೆಂದಿಗೂ |
ಜೊನ್ನೊಡಲೊಳ್ ನೆಲಸಿಹ ನಿನ್ನ ಪತಿಯಾ |
ಅನುದಿನಾತುಮದೊಳ್ ಪೊಳೆವಂದದಿ ಮಾಡು [೨]
ಲೀಲೆ ಶರಧಿ ನೀಲಾಂಗ ರಂಗನ ರಾಣಿ |
ನೀಲಾಬ್ದಿ ಜನ್ನೆ ಅಘ ಕುಲಾಪ ಹರಿಣಿ |
ಚೆಲುವ ಶ್ರೀಪ್ರಸನ್ವೆಂಕಟನ ಗೃಹಖಣಿ |
ಲೋಲೆ ಸಲಹು ಎಂದಿಗೊಲ್ಲೆನ್ನದಲೆ [೩]
karuNavirale yenna myAle kamale [pa]
hariya tOri pore varAgravAsaLe [a.pa]
maMda matiyivaneMdeNisadirammA |
noMdihe Bava baMdhanagaLiMdalI nA |
kaMdana kare kELi janani baMdappuvaMte |
iMdennOL ninnAnaMda moga tOru [1]
mAnaguNAMbudhiyE mAnyaLe |
ninnaMghridvayava pUjipeneMdigU |
jonnoDaloL nelasiha ninna patiyA |
anudinAtumadoL poLevaMdadi mADu [2]
lIle Saradhi nIlAMga raMgana rANi |
nIlAbdi janne aGa kulApa hariNi |
celuva SrIprasanveMkaTana gRuhaKaNi |
lOle salahu eMdigollennadale [3]
Leave a Reply