Manasijanayyana manadanne

Composer : Shri Prasannavenkata dasaru

By Smt.Shubhalakshmi Rao

ಮನಸಿಜನಯ್ಯನ ಮನದನ್ನೆ ಬರಬಾರದೆ ಯೆನ್ನ ಮಂದಿರಕೆ [ಪ]
ಮನನಿಸಿ ನಿನ್ನಯ ಧ್ಯಾನಗೈದು ಪದಸೇವಿಸಿ ಬದುಕುವ ಬಯಕೆ ||ಅ.ಪ.||

ಬನ್ನಬಡುತಿಹೆನು ಯಿನ್ನಿಲ್ಲದ ವಣ್ಣರಸಿ ಬಾಹೊ ಬಹು ಆಸೆಯಲಿ |
ಖಿನ್ನನಾಗಿ ಮನ ಯಿನ್ನೇನರಸುವುದ್ ಒಂದನರಿಯದೆ ಬಳಲಿ |
ಮುನ್ನಿನ ಗತಿಯೇನೊಂದು ಹೊಳೆಯದೆ ಕೊರಗುತಲಿಹೆ ದಿನದಿನದಿ |
ಬಿನ್ನಪ ಕೇಳಿನ್ನಾದರೂ ಯೆಮ್ಮನು ಆತುಕೊ ತಾಯೆ ದಯದಿ ||೧||

ತರತರ ಕುಸುಮ ಪರಿಮಳ ಬೀರುವ ರಾಶಿ ರಾಶಿ ಹೂತರಿಸಿ |
ಪರಿಪರಿ ತಾಂಬೂಲ ವಿಳ್ಯ ಘನ ವಸ್ತ್ರಾಭರಣಗಳಿರಿಸಿ |
ಕರೆ ಕರೆ ಭವದೋಳ್ ಬಿದ್ದು ಬಾಯ್ಬಿಡುವ ಭಕ್ತರೆಲ್ಲ ನಿನ್ನ |
ವಾರವಾರಕೆ ಪೂಜಿಸಿ ಕರೆವರು ಬಾ ಮನೆಗೆ ಭಾರ್ಗವಿಯೆ ||೨||

ಪತಿತರುದ್ಧರಿಸುವ ಬಿರುದು ಪೊತ್ತ ನೀನಿತ್ತನೋಡದಿರೆತ್ತಮ್ಮಾ |
ಗತಿಗಾಗುವ ಸುರತರುವೆ ಈ ಹೊತ್ತು ಬತ್ತಿ ಬರಡಾದರೆಂತಮ್ಮಾ ||
ವುತ್ತಮಳಲ್ಲವೇ ನೀ ಯಾವತ್ತೂ ಭೃತ್ಯರ ಪೊರೆದ ಪವಿತ್ತರಳು |
ರತಿಪತಿಪಿತ ಪ್ರಸನ್ವೆಂಕಟನ್ಹತ್ತಿರ ಯೆಮ್ಮ ಸ್ಥಿತಿಬಿತ್ತಿ ಪಾಲಿಪಳು ||೩||


manasijanayyana manadanne barabArade yenna maMdirake [pa]
mananisi ninnaya dhyAnagaidu padasEvisi badukuva bayake ||a.pa.||

bannabaDutihenu yinnillada vaNNarasi bAho bahu Aseyali |
KinnanAgi mana yinnEnarasuvud oMdanariyade baLali |
munnina gatiyEnoMdu hoLeyade koragutalihe dinadinadi |
binnapa kELinnAdarU yemmanu Atuko tAye dayadi ||1||

taratara kusuma parimaLa bIruva rASi rASi hUtarisi |
paripari tAMbUla viLya Gana vastrABaraNagaLirisi |
kare kare BavadOL biddu bAybiDuva Baktarella ninna |
vAravArake pUjisi karevaru bA manege BArgaviye ||2||

patitaruddharisuva birudu potta nInittanODadirettammA |
gatigAguva surataruve I hottu batti baraDAdareMtammA ||
vuttamaLallavE nI yAvattU bhRutyara poreda pavittaraLu |
ratipatipita prasanveMkaTanhattira yemma sthitibitti pAlipaLu ||3||

Leave a Reply

Your email address will not be published. Required fields are marked *

You might also like

error: Content is protected !!