Sharanu surasura vandita

Composer : Shri Prasannavenkata dasaru

By Smt.Shubhalakshmi Rao

ಶರಣು ಸುರಾಸುರ ವಂದಿತ ಚರಣೆ [ಪ]
ಸ್ವರಮಣನ ರಮಣಿ ಪೊರೆ ಅನ್ನಪೂರಣೆ [ಅ.ಪ]

ಹಲವು ಆಭರಣಗಳಾಗಿ ಶ್ರೀಹರಿಗೆ |
ವಲಿಸಿಕೊಂಡ ಮಹಾನಂದ ನಿಲಯಳೆ (೧)

ಬೊಮ್ಮನಮ್ಮ ನಿನ್ನ ಸುಮ್ಮನದಲ್ಲಿ ನೆನೆ |
ಸಮ್ಯಕ್ ಜ್ಞಾನವ ಮನನಿಸಿಕೊಡುವಳೆ (೨)

ಸಮಯವರಿತು ಸುರ ಹರ ಬೊಮ್ಮರಿಗೆ |
ಸಮಸಾಮರ್ಥ್ಯವ ನೀವ ಸಮರ್ಥಳೆ (೩)

ಖ್ಯಾತಿಸುತಳೆ ಅಗಣಿತ ಗುಣಖ್ಯಾತಳೆ |
ಅತೀ ದುರ್ಲಭ ದೇವನ ಸತಿ ಸನ್ಮತೆ (೪)

ಶಂಖ ಕಂಠದಕಳಂಕ ಚರಿತಳೆ |
ಶಂಖ ಪಿಡಿದ ಪ್ರಸನ್ವೆಂಕಟನರಸಿಯೆ (೫)


SaraNu surAsura vaMdita caraNe [pa]
svaramaNana ramaNi pore annapUraNe [a.pa]

halavu ABaraNagaLAgi SrIharige |
valisikoMDa mahAnaMda nilayaLe (1)

bommanamma ninna summanadalli nene |
samyak j~jAnava mananisikoDuvaLe (2)

samayavaritu sura hara bommarige |
samasAmarthyava nIva samarthaLe (3)

KyAtisutaLe agaNita guNaKyAtaLe |
atI durlaBa dEvana sati sanmate (4)

SaMKa kaMThadakaLaMka caritaLe |
SaMKa piDida prasanveMkaTanarasiye (5)

Leave a Reply

Your email address will not be published. Required fields are marked *

You might also like

error: Content is protected !!