Varamahalakumi deviye kaye

Composer : Shri Prasannavenkata dasaru

By Smt.Shubhalakshmi Rao

ವರಮಹಾಲಕುಮಿದೇವಿಯೆ ಕಾಯೆ [ಪ]

ಸೌರನಗರ ನೆಲೆವಾಸಿ ಮಹಾಮಾಯೆ [ಅ.ಪ]

ಸಗರಾಜನುದರದಲಿ ಜನಿಸಿ |
ಸಗ್ಗಿಗರರಸನ ತ್ವರದಲಿ ವರಿಸಿ |
ನಿಗಮಾಗಮಕತಿ ವೇದ್ಯಳೆನಿಸಿ |
ಜಗಕತಿ ಪಾವನ ನಗರ ನೆಲೆವಾಸಿಶ್ರೀ [೧]

ನಿತ್ಯ ಮುಕುತೆ ನಿಜ ಭಕುತ ಪ್ರೀಯಳೆ |
ಪುತ್ತಿಗೆ ರಾಮರ ಚಿತ್ತದಿ ಪೊಳೆವಳೆ ||
ತೆತ್ತೀಸ ಕೋಟಿ ದೇವರ್ಕಳ ಕಾಯ್ವಳೆ |
ನೃತ್ಯ ಮನೋಹರಿ ಸತ್ಕಥಾರ್ಥಿತಳೆ ಶ್ರೀ [೨]

ಮಹಿಜೆ ಮಹಾಮಂತ್ರರಾಜನ ರಾಣಿ |
ಮಹಾಮಹಾಂತರಭಿಮಾನಿ ಕನ್ಯಾಮಣಿ ||
ಶ್ರೀಹರಿ ಮಹೋರದಲ್ಲಿಹ ಹೃನ್ಮಣಿ |
ಮಹಿತ ಶ್ರೀಪ್ರಸನ್ನವೆಂಕಟನ ಗೃಹಖಣಿ ಶ್ರೀ [೩]


varamahAlakumidEviye kAye [pa]

sauranagara nelevAsi mahAmAye [a.pa]

sagarAjanudaradali janisi |
saggigararasana tvaradali varisi |
nigamAgamakati vEdyaLenisi |
jagakati pAvana nagara nelevAsiSrI [1]

nitya mukute nija Bakuta prIyaLe |
puttige rAmara cittadi poLevaLe ||
tettIsa kOTi dEvarkaLa kAyvaLe |
nRutya manOhari satkathArthitaLe shrI [2]

mahije mahAmaMtrarAjana rANi |
mahAmahAMtaraBimAni kanyAmaNi ||
SrIhari mahOradalliha hRunmaNi |
mahita SrIprasannaveMkaTana gRuhaKaNi shrI [3]

Leave a Reply

Your email address will not be published. Required fields are marked *

You might also like

error: Content is protected !!