Composer : Shri Prasannavenkata dasaru
ಕರವಮುಗಿದು ಕರೆದವರ ಮನೆಗೆ |
ಬರಲಾರೆಯೆ ಮುಕುಂದ ಪ್ರೀಯೆ [ಪ]
ಪರಿಪರಿ ಕೂಗಿದರರಘಳಿಗೆಯೂ ಈ |
ತರಳನ ಮ್ಯಾಲೇಕೆ ಕರುಣಬಾರದೆ [ಅ.ಪ]
ದುರುಳ ಹಿರಣ್ಯನ ಕರುಳನ್ ಹರಿಯಲು |
ಅರಮನೆ ಕಂಬವನ್ ಹರಿದು ಬಂದಾಗ |
ಸುರಾಸುರರೆಲ್ಲ ಹೆದರುತ ಮೊರೆಯಿಡೆ |
ಹರಿತೊಡೆಯನೇರಿ ಪೊರೆದವಳಲ್ಲವೆ [೧]
ಸುರಚರ ಹಿಮಕರಣ ತೇಜೆ ಸ್ಫುರಣಶ್ರೀ |
ಹರಿಚರಣ ಪಂಕೇರುಹಯುಗಳ ಶ್ರೇಣಿ |
ಆರುನಾಲಕು ತತ್ವಕಭಿಮಾನಿ ಸಂಪನ್ನೆ |
ದೂರಿರದೆ ನೋಡೀಕಡೆ ಅಂಬುಜಪಾಣಿ [೨]
ಸರಸಿಜೋದ್ಭವ ಜನನಿ ವರಸುಜನಾವಳಿ ಪಾಲನಿ |
ಹರನ ಕಪಾಲವ ಭರಿಸಿದ ಅನ್ನಪೂರಣಿ |
ಧರೆಗಧಿಕ ಕರವೀರಪುರ ನೆಲೆವಾಸಿನಿ |
ಸಿರಿ ಪ್ರಸನ್ವೆಂಕಟರಮಣನ್ನರಮಣಿ [೩]
karavamugidu karedavara manege |
baralAreye mukuMda prIye [pa]
paripari kUgidararaGaLigeyU I |
taraLana myAlEke karuNabArade [a.pa]
duruLa hiraNyana karuLan hariyalu |
aramane kaMbavan haridu baMdAga |
surAsurarella hedaruta moreyiDe |
haritoDeyanEri poredavaLallave [1]
suracara himakaraNa tEje sphuraNaSrI |
haricaraNa paMkEruhayugaLa SrENi |
ArunAlaku tatvakaBimAni saMpanne |
dUrirade nODIkaDe aMbujapANi [2]
sarasijOdbhava janani varasujanAvaLi pAlani |
harana kapAlava Barisida annapUraNi |
dharegadhika karavIrapura nelevAsini |
siri prasanveMkaTaramaNannaramaNi [3]
Leave a Reply