Composer : Shri Prasannavenkata dasaru
ಕಾಯೆ ಕಮಲಾಲಯೆ ತಾಯೆ |
ತೋಯಜಾಕ್ಷೆ ಹರಿಕಾಯ ನಿವಾಸೆ [ಪ]
ಆರುಹತ್ತುತಮ ಆರ್ಹುಲಿಗೊಳಗಾಗಿ |
ಆರತ ಬಡುತೆ ಆರಿಹರೆನ್ನುತೆ |
ಆರೈದುಕೊ ಆರಯಿಸಿ ಕರುಣದಿ |
ಆರಾಭಾರವು ನಿನ್ನದೇ ಆರ್ಯಳೆ [೧]
ಇಂಗಡಲಾತ್ಮಜೆ ಅಂಗನಾ ಕುಲಮಣಿ |
ಇಂಗಡಲಳಿಯ ರಂಗನ ರಾಣಿ |
ಸಂಗಗೊಳಿಸಿ ಭವಘಂಗಳಳಿಸು |
ಇಂಗಿತಜ್ಞೆ ಪದಂಗಳಿಗೆರಗುವೆ [೨]
ಭಕುತಿ ಗಂಧವರಿಯದ ಮಂದಮತಿಗೆ |
ಯುಕುತಿಲಿ ಗೋವಿಂದನ ಭಜಿಪುದಕೆ ||
ಶಕುತಿಯಿತ್ತು ಸತ್ಕಥಾ ಶ್ರವಣ ಪ್ರೀಯ |
ಮುಕುತಪತಿ ಪ್ರಸನ್ವೆಂಕಟನ ತೋರಿಸಿ [೩]
kaaye kamalAlaye tAye |
tOyajAkShe harikAya nivAse [pa]
Aruhattutama ArhuligoLagAgi |
Arata baDute Ariharennute |
Araiduko Arayisi karuNadi |
ArABAravu ninnadE AryaLe [1]
iMgaDalAtmaje aMganA kulamaNi |
iMgaDalaLiya raMgana rANi |
saMgagoLisi BavaGaMgaLaLisu |
iMgitaj~je padaMgaLigeraguve [2]
Bakuti gaMdhavariyada maMdamatige |
yukutili gOviMdana Bajipudake ||
Sakutiyittu satkathA SravaNa prIya |
mukutapati prasanveMkaTana tOrisi [3]
Leave a Reply