Palise Krishna ramani

Composer : Shri Gurugovinda dasaru

By Smt.Shubhalakshmi Rao

ಪಾಲೀಸೆ ಕೃಷ್ಣ ರಮಣೀ | ರುಕ್ಮಿಣಿ
ಪಾಲೀಸೆ ಕೃಷ್ಣ ರಮಣಿ [ಪ]

ಲೋಲಾ ಲೋಚನೆ ಸೀತೆ | ಕೀಲಾಲ ಜಾತನುತೆ ವಾಲೀ
ಭಂಜನ ಪ್ರೀತೆ | ಫಾಲಾಕ್ಷಪಿತ ಮಾತೆ [ಅ.ಪ.]

ಆರೀಗುಸುರಲಿ ನಾನೂ | ಕಳೆಯಲಿ ಭಾರಿ ಭವಣೆಗಳನ್ನೂ ||
ಸಾರಸಾಕ್ಷಿ ನಿನ್ನ | ಚಾರು ಚರಣ ಸರೋರುಹ ಕೆರಗುವೆ |
ಚಾರುಮತಿಯ ಕೊಡೆ [೧]

ಮೂರು ಗುಣಾಭಿಮಾನೀ | ಮಾಳ್ಪುದು ಮೂರು ಗುಣಗಳ ಹಾನೀ ||
ವಾರೀಸಿ ತ್ರೈಗುಣ | ಪಾರು ಮಾಡಿಸು ಭವತಾರಕೆ ನೀ ನೆಂದು |
ಬಾರಿ ಬಾರಿಗೆ ಪೇಳ್ವ [೨]

ಗುರು ಗೋವಿಂದ ವಿಠ್ಠಲಾ | ನಿನ್ನೊಡವೆರಸಿ ಸೃಜಿಪ ಜಗಗಳಾ ||
ಎರಡೆರಡು ವ್ಯೂಹಕಾಗಿ | ಎರಡೆರಡು ರೂಪ ತಾಳೆ
ಎರಡೆರಡು ನೀನು ಆಗಿ | ಹರಿ ಕಾರ್ಯಕನುವಾದೆ [೩]


pAlIse kRuShNa ramaNI | rukmiNi
pAlIse kRuShNa ramaNi [pa]

lOlA lOcane sIte | kIlAla jAtanute vAlI
BaMjana prIte | PAlAkShapita mAte [a.pa.]

ArIgusurali nAnU | kaLeyali BAri BavaNegaLannU ||
sArasAkShi ninna | cAru caraNa sarOruha keraguve |
cArumatiya koDe [1]

mUru guNABimAnI | mALpudu mUru guNagaLa hAnI ||
vArIsi traiguNa | pAru mADisu BavatArake nI neMdu |
bAri bArige pELva [2]

guru gOviMda viThThalA | ninnoDaverasi sRujipa jagagaLA ||
eraDeraDu vyUhakAgi | eraDeraDu rUpa tALe
eraDeraDu nInu Agi | hari kAryakanuvAde [3]

Leave a Reply

Your email address will not be published. Required fields are marked *

You might also like

error: Content is protected !!