Composer : Shri Vijaya dasaru
ರಾಗ: ಮಧ್ಯಮಾವತಿ , ಆದಿತಾಳ
ಜಗಪತಿಯ ತೋರಮ್ಮ ಎನಗೆ ಕರುಣಾ ಮಾಡಮ್ಮ ॥ ಪ ॥
ಅಘಗಳ ಕಳೆವ ಅಮೋಘದೇವನ
ನಿನ್ನಯ ಜೀವನ ಭಕುತರ ಕಾವನ ॥ ಅ ಪ ॥
ಮೃಗಲಾಂಛನ ವದನೆ ಮೃದು ಸರಸಿಜ ಸದನೆ ।
ಹಗಲು ಇರುಳು ನಿನ್ನ ಸಂಯೋಗನ್ನ ಅನಂತಭೋಗನ್ನ
ಕಿರೀಟಿಯ ಬೀಗನ್ನ ॥ 1 ॥
ಭ್ರಮರ ಕುಂತಳೆ ಜಾಣೆ ಸುಮನೆ ಕೋಕಿಲಗಾನೆ ।
ಕಮಲ ತುಲಸಿಮಣಿ ಹಾರನ್ನ ಜಗದಾಧಾರನ್ನ
ದಶಾವತಾರನ್ನ ॥ 2 ॥
ಅಜರಾಮರಣ ಸಿದ್ಧೆ ತ್ರಿಜಗದೊಳು ಪ್ರಸಿದ್ಧೆ ।
ವಿಜಯವಿಟ್ಠಲ ಶ್ರೀನಿವಾಸನ
ತಿರುವೆಂಗಳೇಶನ ವೈಕುಂಠವಾಸನಾ ॥ 3 ॥
jagapatiya tOramma enage karuNA mADamma || pa ||
aGagaLa kaLeva amOGadEvana
ninnaya jIvana Bakutara kAvana || a.pa ||
mRugalAMCana vadane mRudu sarasija sadane |
hagalu iruLu ninna saMyOganna anaMtaBOganna
kirITiya bIganna || 1 ||
Bramara kuMtaLe jANe sumane kOkilagAne |
kamala tulasimaNi hAranna jagadAdhAranna
daSAvatAranna || 2 ||
ajarAmaraNa siddhe trijagadoLu prasiddhe |
vijayaviTThala SrInivAsana
tiruveMgaLESana vaikuMThavAsanA || 3 ||
Leave a Reply