Potana paliso pavamana

Composer : Shri Shyamasundara dasaru

By Smt.Shubhalakshmi Rao

ಪೋತನ ಪಾಲಿಸೋ ಪವಮಾನಾ | ಈ
ಭೂತಳದೊಳು ನಿನ್ನ ಖ್ಯಾತಿ ಘನಾ [ಪ]

ಒದಗಿದ ವ್ಯಾಧಿಯ ಪರಿಹರಿಸೊ ನಿನ್ನ
ಪದರಿಗೆ ಬಿದ್ದವನೆಂದು ಗ್ರಹಿಸೋ (೧)

ತಾಯಿಯು ಇಲ್ಲದ ಬಾಲಕನು | ಇವನ
ಕಾಯಲು ನೀ ದಯಾ ಸಾಗರನು (೨)

ಶ್ವಾಸದೊಡಿಯ ನೀನೆಂತೆಂದು | ಶೃತಿ
ಘೋಷಿಸುವದು ಆನತ ಬಂಧು (೩)

ಶಿಶುವಿಗೊಲಿದು ನೀ ಸಲಹಿದರೆ | ದೇವ
ಅಸುನಾಯಕನೆಂಬ ಬಿರುದು ಖರೆ (೪)

ಗ್ರಾಮ ಬಲ್ಲಿಟಗಿ ಕೃತವಾಸ |
ಶಿರಿಶಾಮಸುಂದರನ ಪ್ರಿಯದಾಸ (೫)


pOtana pAlisO pavamAnA | I
BUtaLadoLu ninna KyAti GanA [pa]

odagida vyAdhiya parihariso ninna
padarige biddavaneMdu grahisO (1)

tAyiyu illada bAlakanu | ivana
kAyalu nI dayA sAgaranu (2)

SvAsadoDiya nIneMteMdu | SRuti
GOShisuvadu Anata baMdhu (3)

SiSuvigolidu nI salahidare | dEva
asunAyakaneMba birudu Kare (4)

grAma balliTagi kRutavAsa |
SiriSAmasuMdarana priyadAsa (5)

Leave a Reply

Your email address will not be published. Required fields are marked *

You might also like

error: Content is protected !!