Composer : Shri Vijaya dasaru
ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ
ಈರೇಳು ಲೋಕನಾಯಿಕೆ ||ಪ||
ವಾರವಾರಕೆ ನಿನ್ನ ಆರಾಧಿಪುದಕೆ
ಚಾರುಮನಸು ಕೊಡು ದೂರ ನೋಡದಲೆ [ಅ.ಪ]
ಶ್ರೀಧರಾ ದುರ್ಗಿ ಆಂಭ್ರಣಿ ನಿತ್ಯ ಕಲ್ಯಾಣಿ
ವೇದವತಿಯೆ ರುಗ್ಮಿಣಿ
ವೇದ ವೇದಾಂತದಭಿಮಾನಿ ವಾರಿಜ ಪಾಣಿ
ಆದಿ ಮಧ್ಯಾಂತ ಗುಣಶ್ರೇಣಿ |
ಸಾಧು ಜನರ ಹೃದಯಾಬ್ಜ ವಿರಾಜಿತೆ
ಭೇದಗೊಳಿಪ ಕಾಮಕ್ರೋಧಗಳೋಡಿಸಿ
ನೀ ದಯದಲಿ ಮೇಲಾದ ಗತಿಗೆ ಪಂಚ
ಭೇದಮತಿಯ ಕೊಡು ಮಾಧವ ಪ್ರಿಯಳೆ ||೧||
ಶ್ರೀ ಮಾಯಾ ಜಯಾ ಕೃತಿ ಶಾಂತಿ
ದೇವಿ ಜಯಂತಿ ನಾಮದಲಿಪ್ಪ ಜಯವಂತಿ
ಕೋಮಲವಾದ ವೈಜಯಂತಿ ಧರಿಸಿದ ಶಾಂತಿ
ಸೋಮಾರ್ಕ ಕೋಟಿ ಮಿಗೆ ಕಾಂತಿ |
ತಾಮರಸಾಂಬಿಕೆ ರಮೆ ಲಕುಮಿ ಸತ್ಯ
ಭಾಮೆ ಭವಾರಣ್ಯ ಧೂಮಕೇತಳೆ
ಯಾಮ ಯಾಮಕೆ ಹರಿ ನಾಮವ
ನುಡಿಸೋತ್ತಮರೊಡನೆ ಪರಿಣಾಮವನೀವುದು ||೨||
ನಾನಾಭರಣ ಭೂಷಿತೆ ಧರುಣಿಜಾತೆ
ಜ್ಞಾನಿಗಳ ಮನೋಪ್ರೀತೆ
ಆನಂದಿಯಿಂದ ಪ್ರಖ್ಯಾತೆ ಆದಿದೇವತೆ
ಗಾನವಿಲೋಲೆ ಸುರಗೀತೇ |
ನೀನೆ ಗತಿ ಎನಗಾರೊಬ್ಬರ ಕಾಣೆ
ದಾನಿ ಇಂದಿರೆ ದೇವಿ ನಾನಾ ಪರಿಯಲ್ಲಿ
ಶ್ರೀನಿಧಿ ವಿಜಯವಿಠ್ಠಲನ ಮೂರುತಿಯನ್ನು
ಧ್ಯಾನದೊಳಿಡುವಂಥೆ ಜ್ಞಾನ ಭಕುತಿ ಕೊಡೆ ||೩||
kShIra vAridhi kannike mArajanake
IrELu lOkanAyike ||pa||
vAravArake ninna ArAdhipudake
cArumanasu koDu dUra nODadale [a.pa]
SrIdharA durgi AMBraNi nitya kalyANi
vEdavatiye rugmiNi
vEda vEdAMtadaBimAni vArija pANi
Adi madhyAMta guNashrENi |
sAdhu janara hRudayAbja virAjite
BEdagoLipa kAmakrOdhagaLODisi
nI dayadali mElAda gatige paMca
BEdamatiya koDu mAdhava priyaLe ||1||
SrI mAyA jayA kRuti SAMti
dEvi jayaMti nAmadalippa jayavaMti
kOmalavAda vaijayaMti dharisida SAMti
sOmArka kOTi mige kAMti |
tAmarasAMbike rame lakumi satya
BAme BavAraNya dhUmakEtaLe
yAma yAmake hari nAmava
nuDisOttamaroDane pariNAmavanIvudu ||2||
nAnABaraNa BUShite dharuNijAte
j~jAnigaLa manOprIte
AnaMdiyiMda praKyAte AdidEvate
gAnavilOle suragItE |
nIne gati enagArobbara kANe
dAni iMdire dEvi nAnA pariyalli
SrInidhi vijayaviThThalana mUrutiyannu
dhyAnadoLiDuvaMthe j~jAna Bakuti koDe ||3||
Leave a Reply