Ramaa samudrana

Composer : Shri Bagepalli Shesha dasaru

By Smt.Viraja

ರಮಾಸಮುದ್ರನ ಕುಮಾರಿ ನಿನ್ನ ಸರಿ
ಸಮಾನರ್ಯಾರಮ್ಮ [ಪ]

ಉಮೇಶ ಮೊದಲಾದ ಅಮರ ನಿಕರರು
ಭ್ರಮಿಸಿ ನಿನ್ನ ಪದ ಕಮಲ ಭಜಿಪರು [ಅ.ಪ]

ಅಪಾರ ಮಹಿಮನ ವ್ಯಾಪಾರಗಳ ತಿಳಿದು
ಕಾಪಾಡುವೇ ಜಗವಾ
ಕೋಪ ರಹಿತಳಾಗಿ ಶ್ರೀಪತಿಯೊಳು ನಮ್ಮ
ತಾಪತ್ರಯವ ಪೇಳಿ ಪೋಷಿಸಬೇಕಮ್ಮ [೧]

ಕರುಣಾವಾರಿಧಿಯೆಂದು ಶರಣ ಜನರು ನಿನ್ನ
ಸ್ಮರಣೆಯ ಮಾಡುವರೆ
ಹರಿಣಾಕ್ಷಿ ಕೇಳಲೆ ಹರುಷದಿಂದಲಿ ಹರಿ
ಚರಣಾವ ತೋರಿ ಅಘ ಹರಣವ ಮಾಡಿಸೆ [೨]

ವಾಸವನುತ ಸಿರಿ ಶೇಷವಿಠ್ಠಲನೊಳು
ವಾಸವ ಮಾಡುವಳೆ
ಘಾಸೀ ಗೊಳಿಸದಳೆ ಈ ಸಮಯದಿ ಹರಿ
ವಾಸುದೇವಗೆ ಪೇಳಿ ಪೋಷಿಸಬೇಕಮ್ಮ [೩]


ramAsamudrana kumAri ninna sari
samAnaryAramma [pa]

umESa modalAda amara nikararu
Bramisi ninna pada kamala Bajiparu [a.pa]

apAra mahimana vyApAragaLa tiLidu
kApADuvE jagavA
kOpa rahitaLAgi SrIpatiyoLu namma
tApatrayava pELi pOShisabEkamma [1]

karuNAvAridhiyeMdu SaraNa janaru ninna
smaraNeya mADuvare
hariNAkShi kELale haruShadiMdali hari
caraNAva tOri aGa haraNava mADise [2]

vAsavanuta siri SEShaviThThalanoLu
vAsava mADuvaLe
GAsI goLisadaLe I samayadi hari
vAsudEvage pELi pOShisabEkamma [3]

Leave a Reply

Your email address will not be published. Required fields are marked *

You might also like

error: Content is protected !!