Composer : Shri Purandara dasaru
ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ||ಪ||
ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡು ತಿಹಳು [ಅ.ಪ]
ಕೋಟಿ ಕೋಟಿ ಭೃತ್ಯರಿರಲು |
ಹಾಟಕಾಂಬರನ ಸೇವೆ |
ಸಾಟಿಯಿಲ್ಲದೆ ಮಾಡಿ | ಪೂರ್ಣ
ನೋಟದಿಂದ ಸುಖಿಸುತಿಹಳು ||೧||
ಛತ್ರ ಚಾಮರ ವ್ಯಜನ ಪರಿಯಂಕ |
ಪಾತ್ರ ರೂಪದಲ್ಲಿ ನಿಂತು |
ಚಿತ್ರ ಚರಿತನಾದ ಹರಿಯ |
ನಿತ್ಯ ಸೇವೆ ಮಾಡುತಿಹಳು ||೨||
ಸರ್ವ ಸ್ಥಳದಿ ವ್ಯಾಪ್ತನಾದ |
ಸರ್ವ ದೋಷರಹಿತನಾದ |
ಸರ್ವ ವಂದ್ಯನಾದ ಪುರಂದರ
ವಿಠ್ಠಲನ್ನ ಸೇವಿಸುವಳೋ ||೩||
Enu dhanyaLO lakumi eMtha mAnyaLO ||pa||
sAnurAgadiMda hariya
tAne sEve mADu tihaLu [a.pa]
kOTi kOTi BRutyariralu |
hATakAMbarana sEve |
sATiyillade mADi | pUrNa
nOTadiMda suKisutihaLu ||1||
Catra cAmara vyajana pariyaMka |
pAtra rUpadalli niMtu |
citra caritanAda hariya |
nitya sEve mADutihaLu ||2||
sarva sthaLadi vyAptanAda |
sarva dOSharahitanAda |
sarva vaMdyanAda puraMdara
viThThalanna sEvisuvaLO ||3||
Leave a Reply