Composer : Shri Vijaya dasaru
ಎಲ್ಲಮ್ಮ ನೆನಬೇಡವೆ ಸಿರಿದೇವಿ
ಎಲ್ಲಾರಮ್ಮನಲ್ಲವೇ ||ಪ||
ಬಲ್ಲಿದರಾಗಿಪ್ಪ ಬ್ರಹ್ಮಾದ್ಯರಿಗೆಲ್ಲ
ಶ್ರೀ ಲಕುಮಿಯೇ ಅಮ್ಮನಲ್ಲದೆ ಮತ್ತಿಲ್ಲ ||ಅ.ಪ||
ಆಲದಲೆಯ ಮೇಲೆ ಪರಮ ಪುರುಷನಂದು
ಕಾಲವರಿತು ಬಂದು ಪವಡಿಸಲು
ವಾಲಗವನು ಮಾಡಿ ಕೊಂಡಾಡಿ ಜೀವರ, ಮೂಲ
ಕರ್ಮಂಗಳಂತಿರುವಂತೆ ಮಾಡಿದ ||೧||
ಅಮೋಘ ವಿರ್ಯವ ಗರ್ಭದಿ ಧರಿಸಿ ತಾ
ಬ್ರಹ್ಮಾಂಡವನು ಪೆತ್ತ ಲೋಕ ಮಾತಾ
ಸುಮನಸರಿಗೆ ಕಡೆಗಣ್ಣ ನೋಟದಿ ಆ
ಮಹಾ ಪದವಿಯನು ಕೊಡುವ ಭಾಗ್ಯವಂತೆ ||೨||
ಎರಡೊಂದು ಗುಣದಿಂದ ಪ್ರವಿಷ್ಠಳಾಗಿ
ಜೀವರ ಯೋಗ್ಯತೆಯಂತೆ ಪಾಲಿಪಳು
ಪರಮ ಪರುಷ ನಮ್ಮ ವಿಜಯ ವಿಠಲನ
ಕರುಣದಿಂದಲಿ ಅನಂತ ಕಲ್ಪಕೆ ನಿತ್ಯ ||೩||
ellamma nenabEDave siridEvi
ellArammanallavE ||pa||
ballidarAgippa brahmAdyarigella
SrI lakumiyE ammanallade mattilla ||a.pa||
Aladaleya mEle parama puruShanaMdu
kAlavaritu baMdu pavaDisalu
vAlagavanu mADi koMDADi jIvara, mUla
karmaMgaLaMtiruvaMte mADida ||1||
amOGa viryava garBadi dharisi tA
brahmAMDavanu petta lOka mAtA
sumanasarige kaDegaNNa nOTadi A
mahA padaviyanu koDuva BAgyavaMte ||2||
eraDoMdu guNadiMda praviShThaLAgi
jIvara yOgyateyaMte pAlipaLu
parama paruSha namma vijaya viThalana
karuNadiMdali anaMta kalpake nitya ||3||
Leave a Reply