Composer : Shri Prasannavenkata dasaru
Shri Satyapoorna Tirtharu 1648-1726,
Aradhane – Jyeshta Krishna Dvitiya,
Vrundavana- Kolpur
|| satyAbhinavadugdAbdheH sa~njAtaH sakaleShTadaH
shrIsatyapUrNatIrthenduH santApAn hantu santatam ||
सत्याभिनवदुग्दाब्धेः सञ्जातः सकलेष्टदः।
श्रीसत्यपूर्णतीर्थेन्दुः सन्तापान् हन्तु सन्ततम्॥
ಗುರುಸತ್ಯಪೂರ್ಣ ಶ್ರೀಪಾದುಕಿಗಳೆಂಬ |
ಸುರತರುವನಾಶ್ರಯಿಸಿ ಸುಖಿಸಿರೋ ಸುಜನರು [ಪ]
ರತ್ನಮಯ ಆಲಾವಲದಲ್ಲಿದ್ದು ಅಮಿತ ನವ |
ರತ್ನ ಫಲಪುಷ್ಪ ಭಾರದಲಿ ಮೆರೆದು |
ಭಕ್ತರಿಗ್ಯನೇಕಿಷ್ಟಾನೀವ ವಿಟಪಗಳೆಸಿಯೇ |
ಪೃಥ್ವಿ ನರೇಂದ್ರ ಸತ್ಯ ವಿಜಯ ಸೇವ್ಯಾ (೧)
ನಾಕಕಿಮ್ಮಡಿಸಿ ವೈಭವ ತೋರಿ ದಶದಿಶದಿ |
ಲೋಕಗಳು ಸಕುಟುಂಬ ನೋಡಬಂದು |
ಶ್ರೀಕರ ಮುದ್ರೆಯಂ ಕಂಡು ಸ್ತೋತ್ರವನು ಮಾಡುತಿರೆ |
ಬೇಕಾದ ಭಾಗ್ಯವನು ಕೊಟ್ಟು ಮೆರೆವಾ (೨)
ಮುತ್ತಿನಾತಪತ್ರ ವಿಂಜ್ಯಾವರದ ಬೆಳಿಗಿಂ |
ವಿತ್ತ ವಸ್ತ್ರಾಭರಣ ಅಕ್ಷಿತಿಗಳಿಂ |
ಮೊತ್ತದುಂದುಭಿಯು ಬಿರಿದಿನ ಕಾಹಳಿ ವಾದಿತ್ರಯ |
ತುತ್ತುರಿಯು ಶಂಖರವ ಬಿತ್ತರಿಸುವಾ (೩)
ಝಗಝಗಿಪ ದೀಪ ಮಣಿ ದೀಪ ಶುಭಗೀತದಿಂ |
ಜಗದೊಳಪ್ರತಿಯಾದ ಉತ್ಸಾಹದಲೀ |
ಬಗಿ ಬಗಿ ಭೂಕವಿ ಪಾಡಕರ ಮೇಳದಲಿ |
ಸೊಗಸಾದ ಶಿಷ್ಯ ಕೋಟಿಗಳಲೀಪಾ (೪)
ವಿಜಯರವ ಕರಿನಿಕರ ಬೆದರೋಡೆ ವಿಬುಧರಿಗೆ
ಭಜನೀಯಲಿ ಭಕ್ತಿರಸ ತುಂಬಿ ತುಳುಕೇ |
ತ್ರಿಜಗದೊಡಿಯ ಪ್ರಸನ್ನ ವೇಂಕಟಪ ಪ್ರಿಯ ಸತ್ಯ |
ವಿಜಯ ಗುರು ಭಕ್ತಿಲತಿಗ್-ಆಶ್ರೇಯದಾ (೫)
gurusatyapUrNa SrIpAdukigaLeMba |
surataruvanASrayisi suKisirO sujanaru [pa]
ratnamaya AlAvaladalliddu amita nava |
ratna PalapuShpa BAradali meredu |
BaktarigyanEkiShTAnIva viTapagaLesiyE |
pRuthvi narEMdra satya vijaya sEvyA (1)
nAkakimmaDisi vaiBava tOri daSadiSadi |
lOkagaLu sakuTuMba nODabaMdu |
SrIkara mudreyaM kaMDu stOtravanu mADutire |
bEkAda BAgyavanu koTTu merevA (2)
muttinAtapatra viMjyAvarada beLigiM |
vitta vastrABaraNa akShitigaLiM |
mottaduMduBiyu biridina kAhaLi vAditraya |
tutturiyu SaMKarava bittarisuvA (3)
JagaJagipa dIpa maNi dIpa SuBagItadiM |
jagadoLapratiyAda utsAhadalI |
bagi bagi BUkavi pADakara mELadali |
sogasAda SiShya kOTigaLalIpA (4)
vijayarava karinikara bedarODe vibudharige
BajanIyali Baktirasa tuMbi tuLukE |
trijagadoDiya prasanna vEMkaTapa priya satya |
vijaya guru Baktilatig-ASrEyadA (5)
Leave a Reply