Composer : Shri Shripadarajaru
ನಲಿದಾಡೆ ಎನ್ನ ನಾಲಿಗೆ ಮ್ಯಾಲೆ, ಶಾರದಾ ದೇವಿ
ಕುಣಿದಾಡೆ ಎನ್ನ ನಾಲಿಗೆ ಮ್ಯಾಲೆ |ಪ|
ಘಿಲು ಘಿಲು ಘಿಲು ಗೆಜ್ಜೆಯ ನಾದ
ಹೊಳೆವ ಅಂದುಗೆ,
ರುಳಿ ಪೈಜಣವಿಟ್ಟ ಪುಟ್ಟ ಪಾದ
ಸುರವರನುತ ಪಾದ,
ಸರಸಿಜೋದ್ಭವನ ವದನ ನಿಲಯಳೇ ,
ಕರುಣದಿಂದ ಪರಿಪಾಲಿಸು ಮಾತೇ (೧)
ನಸುನಗೆ ಮುಖವು ನಾಸಾಭರಣಾ
ಯೆಸೆವ ಕಪೋಲ ,
ಹೊಸ ಮುತ್ತಿನ ಚಲು ತುಂಬಿಟ್ಟ ಶ್ರವಣ
ತಿಲಕವು ಹಸನ,
ಶಶಿ ಸೂರ್ಯರ ಆಭರಣ ಶೊಭಿತಳೆ,
ಕುಸುಮ ಮುಡಿದ ಮೂರ್ಧ್ವಜ ವುಳ್ಳವಳೆ (೨)
ಶೃಂಗಾರವಾದ ಜಡೆ ಭಂಗಾರ
ರಾಗುಟಿ ಚೌರಿ ,
ಹೊಂಗ್ಯಾದಿಗೆ ಮುತ್ತಿನ ಹಾರ
ರಂಗು ಮನೊಹರಾ,
ಮಂದಗಮನೆ ಅರವಿಂದ ನಯನೆ
ಸಿರಿರಂಗ ವಿಠಲನ ತೋರೇ ಶುಭಾಂಗಿ (೩)
nalidADe enna nAlige myAle, SAradA dEvi
kuNidADe enna nAlige myAle |pa|
Gilu Gilu Gilu gejjeya nAda
hoLeva aMduge,
ruLi paijaNaviTTa puTTa pAda
suravaranuta pAda,
sarasijOdBavana vadana nilayaLE ,
karuNadiMda paripAlisu mAtE (1)
nasunage muKavu nAsABaraNA
yeseva kapOla ,
hosa muttina calu tuMbiTTa SravaNa
tilakavu hasana,
SaSi sUryara ABaraNa SoBitaLe,
kusuma muDida mUrdhvaja vuLLavaLe (2)
SRuMgAravAda jaDe BaMgAra
rAguTi cauri ,
hoMgyAdige muttina hAra
raMgu manoharA,
maMdagamane araviMda nayane
siriraMga viThalana tOrE SuBAMgi (3)
Leave a Reply