Composer : Shri Shripadarajaru
ಮರುದಂಶರ ಮತ ಪಿಡಿಯದೆ ಇಹ –
ಪರದಲ್ಲಿ ಸುಖವಿಲ್ಲವಂತೆ ||ಪ||
ಅರಿತು ವಿವೇಕದಿ ಮರೆಯದೆ ನಮ್ಮ
ಗುರುರಾಯರ ನಂಬಿ ಬದುಕಿರೋ ||ಅ.ಪ.||
ಕ್ಷೀರವ ಕರೆದಿಟ್ಟ ಮಾತ್ರದಿ
ಸಂಸ್ಕಾರವಿಲ್ಲದೆ ಘೃತವಾಗದಂತೆ
ಸೂರಿಜನರ ಸಂಗವಿಲ್ಲದೆ ಸಾರ
ವೈರಾಗ್ಯ ಭಾಗ್ಯ ಪುಟ್ಟದಂತೆ [೧]
ಉಪದೇಶವಿಲ್ಲದ ಮಂತ್ರ ಏಸು
ಜಪಿಸಲು ಫಲಗಳ ಕೊಡದಂತೆ
ಉಪವಾಸ ವ್ರತಗಳಿಲ್ಲದೆ ಜೀವ
ತಪಸಿ ಯೆನಿಸಿ ಕೊಳ್ಳಲರಿಯನಂತೆ [೨]
ಸಾರ ಮಧ್ವ ಶಾಸ್ತ್ರವೋದದೆ
ಗುರು ತಾರತಮ್ಯ ಜ್ಞಾನ ಪುಟ್ಟದಂತೆ
ಶ್ರೀರಂಗವಿಠಲನ ಭಜಿಸದೆ
ಮುಂದೆ ಪರಮಗತಿ ದೊರಕೊಳ್ಳದಂತೆ [೩]
marudaMSara mata piDiyade iha –
paradalli suKavillavaMte ||pa||
aritu vivEkadi mareyade namma
gururAyara naMbi badukirO ||a.pa.||
kShIrava karediTTa mAtradi
saMskAravillade GRutavAgadaMte
sUrijanara saMgavillade sAra
vairAgya BAgya puTTadaMte [1]
upadESavillada maMtra Esu
japisalu PalagaLa koDadaMte
upavAsa vratagaLillade jIva
tapasi yenisi koLLalariyanaMte [2]
sAra madhva SAstravOdade
guru tAratamya j~jAna puTTadaMte
SrIraMgaviThalana Bajisade
muMde paramagati dorakoLLadaMte [3]
Leave a Reply