ಶ್ರೀ ಶ್ರೀಪಾದರಾಜ ವಿರಚಿತ ಆತ್ಮನಿವೇದನೆ ಸುಳಾದಿ
ರಾಗ: ಪಂತುವರಾಳಿ
ಧ್ರುವತಾಳ
ಅನಂತ ಕಾಲದಲ್ಲಿ ನಿನ್ನ ನಾ
ನರಿಯದೆ ಭವಗಳಲ್ಲಿ ಬಂದೆನೊ
ಅನಂತ ಕಾಲದಲ್ಲಿ ನಿನ್ನನೇ
ನೆನಿಸದೆ ಮೂರುಖನಾದೆನೊ
ಅನಂತ ಕಾಲದಲ್ಲಿ ನಿನ್ನ ಚರಣ
ರತಿಯಿಲ್ಲದೆ ನೊಂದೆನೊ
ಅನಂತ ಕಾಲದಲ್ಲಿ ದಾವ ಪುಣ್ಯ
ದಿಂದ ಬಂದು ಇಂದೂ
ನಿನ್ನವ ನೆನಿಸಿದೆ ಆವ ಪುಣ್ಯವೆನ್ನ ಮನ
ನಿನ್ನಲ್ಲೆರಗಿತು ನೋಯದಂತೆ
ಎನ್ನ ಪೊರೆದು ಪಾಲಿಸೊ
ದೀನನಾಥ ಸಿರಿ ರಂಗವಿಟ್ಠಲಾ || ೧ ||
ಮಠ್ಯತಾಳ
ಅನ್ನಕೆ ಪ್ರದ್ರಾವಣ ದೇಹ ನಿಮಿತ್ಯ
ಅನ್ನಕೆ ಶೋಕಾಸಿ ಎನೆ ಮಾಡಿ
ಅನ್ನದ ಲೋಭ ಆಶುಭದ ಲಾಭ
ಅನ್ನಕೆ ನನ್ನದು ನಾನೆಂಬ ಹಮ್ಮು
ಅನ್ನಕೆ ಯಾವನ್ನಕ ನಿನ್ನ ಚರಣರತಿ ದೊರಕೊಳ್ಳದೊ
ಉನ್ನತ ಗುಣ ಪರಿಪೂರ್ಣ ರಂಗವಿಟ್ಠಲಾ || ೨ ||
ರೂಪಕತಾಳ
ತೊಳಲಿ ಸಂಸಾರ ಚಕ್ರದಲಿ ಸಿಲುಕಿ
ಬಳಲಿದ ಜೀವಗಣಕೆ ಸಂತತ
ನಳಿನನಾಭ ನಿನ್ನ ಪಾದಾಂಬುಜ
ನೆಳಲು ನೆಮುಗೆ ಯಲ್ಲವೆ
ಉಳವೆ ಜಗದೊಳು ಪರಮ ಸುಖಂಗಳ
ಕಳವಳಿಸುವರಾರು ರಂಗವಿಟ್ಠಲ
ನಳಿನನಾಭ ನಿನ್ನ ಪಾದಾಂಬುಜ || ೩ ||
ಝಂಪೆತಾಳ
ನೀ ಕರುಣಿಯೆಂದು ನಿನ್ನನೆ ನಾನು ನಂಬಿದೆನೊ
ನೀ ಕರಿಸದೆ ಎನ್ನ ಶ್ರೀಕಾಂತ ಕಾಯಯ್ಯ
ನಿನ್ನವನೆಂಬೆ ನಾನು ಮ –
ತ್ತನ್ಯ ಪರಿಯೇನೋ ಇಂದಿರೇಶಾ
ಕಂದರ್ಪನೆಂದೆಂದು ಕಾಣದಂತೆ ಮಾಡೊ
ವೃಂದಾರಕಾಧೀಶ ರಂಗವಿಟ್ಠಲ ನಿನ್ನವನೆಂಬೆ ನಾನು || ೪ ||
ತ್ರಿಪುಟತಾಳ
ವ್ರತ ಜಪತಪ ಹೋಮ ಮಾಡುವೆನೆಂದು
ತಪ್ಪದೆ ಮನೆಮನೆ ತಿರುಗಿ ಬಳಲುವೆ
ಬೆಲೆಗೆ ಹೋಗದು ಸರಕು ಸುಡಲಿದವೈಯ್ಯಾ
ಹರಿಯೆ ಕೊಂಬುವರಿಲ್ಲ ಬೆಲೆ ಹೋಗದು
ಸರಕು ಸಡಲದಂತೆ ಕಡೆಗೆ ತೆಗೆದು ನಿನ್ನ
ಚರಣದಡಿಯಲ್ಲಿಟ್ಟು ಕಾಯೊ ರಂಗವಿಟ್ಠಲಾ || ೫ ||
ಅಟ್ಟತಾಳ
ಎನ್ನ ಮನ ಹರಿ ನಿನ್ನ ಚರಣದೊಳೊಮ್ಮೆ ಎರಗದು
ದುರಿತ ದುಷ್ಕೃತ ಎಂತು ಸೈರಿಪೆನೊ
ನಂದನಂದನ ಮುಕುಂದ ನಾನೆಂತು
ಎನ್ನ ಮನ ಹರಿ ನಿನ್ನ ಚರಣದೊಳೊಮ್ಮೆ
ಎರಗಿಸು ರಂಗವಿಟ್ಠಲಯ್ಯಾ ಎಂತು || ೬ ||
ಆದಿತಾಳ
ಭವವೆಂಬಟವಿಯಲ್ಲಿ ಭಯ ಕೊಳದಲಿ ಸಿಕ್ಕಿ
ತಾಪತ್ರಯವೆಂಬುದು ದಾವಾ ನತಿ
ತಪ್ಪೆ ನವರಿಗೆ ಹರಿ ನಿನ್ನ
ನಾಮತ್ರಯವಲ್ಲದೆ ಮತ್ತುಂಟೆ
ಅಪರಿಮಿತವಾದ ಪಾದಪದುಮ ಮನೆ
ನೆಳಲಲ್ಲಿ ನಿಲಿಸೆನ್ನ ರಂಗವಿಟ್ಠಲಾ || ೭ ||
ಜತೆ
ಬೆಂದಾ ಸಂಸಾರದಿ ಬಂದು ಬಂದು ನೊಂದೆನಯ್ಯಾ
ನಂದ ನಂದನ ಕಾಯೊ ರಂಗವಿಟ್ಠಲರೇಯಾ ||
SrI SrIpAdarAja viracita AtmanivEdane suLAdi
rAga: paMtuvarALi
dhruvatALa
anaMta kAladalli ninna nA
nariyade BavagaLalli baMdeno
anaMta kAladalli ninnanE
nenisade mUruKanAdeno
anaMta kAladalli ninna caraNa
ratiyillade noMdeno
anaMta kAladalli dAva puNya
diMda baMdu iMdU
ninnava neniside Ava puNyavenna mana
ninnalleragitu nOyadaMte
enna poredu pAliso
dInanAtha siri raMgaviTThalA || 1 ||
maThyatALa
annake pradrAvaNa dEha nimitya
annake SOkAsi ene mADi
annada lOBa ASuBada lABa
annake nannadu nAneMba hammu
annake yAvannaka ninna caraNarati dorakoLLado
unnata guNa paripUrNa raMgaviTThalA || 2 ||
rUpakatALa
toLali saMsAra cakradali siluki
baLalida jIvagaNake saMtata
naLinanABa ninna pAdAMbuja
neLalu nemuge yallave
uLave jagadoLu parama suKaMgaLa
kaLavaLisuvarAru raMgaviTThala
naLinanABa ninna pAdAMbuja || 3 ||
JaMpetALa
nI karuNiyeMdu ninnane nAnu naMbideno
nI karisade enna SrIkAMta kAyayya
ninnavaneMbe nAnu ma –
ttanya pariyEnO iMdirESA
kaMdarpaneMdeMdu kANadaMte mADo
vRuMdArakAdhISa raMgaviTThala ninnavaneMbe nAnu || 4 ||
tripuTatALa
vrata japatapa hOma mADuveneMdu
tappade manemane tirugi baLaluve
belege hOgadu saraku suDalidavaiyyA
hariye koMbuvarilla bele hOgadu
saraku saDaladaMte kaDege tegedu ninna
caraNadaDiyalliTTu kAyo raMgaviTThalA || 5 ||
aTTatALa
enna mana hari ninna caraNadoLomme eragadu
durita duShkRuta eMtu sairipeno
naMdanaMdana mukuMda nAneMtu
enna mana hari ninna caraNadoLomme
eragisu raMgaviTThalayyA eMtu || 6 ||
AditALa
BavaveMbaTaviyalli Baya koLadali sikki
tApatrayaveMbudu dAvA nati
tappe navarige hari ninna
nAmatrayavallade mattuMTe
aparimitavAda pAdapaduma mane
neLalalli nilisenna raMgaviTThalA || 7 ||
jate
beMdA saMsAradi baMdu baMdu noMdenayyA
naMda naMdana kAyo raMgaviTThalarEyA ||
Leave a Reply