Composer : Shri Vyasarajaru
Shri Sripadarajaru: 1404-1502
kAle phalati surudrumaH chintAmaNir api yAchane daataa |
varshati sakalamabhIShTaM darshana mAtrAt shrIpAdarAn muni: ||
Ashrama Gurugalu : Sri Svarnavarna Tirtharu
Ashrama Shishyaru: Sri Hayagreeva Tirtharu
Aradhane : Jyeshta Shukla Chaturdashi
Ankita: Ranga vittala
Vrundavana: Mulabagilu
ಮಹಿಮೆ ಸಾಲದೆ ಇಷ್ಟೇ |
ಮಹಿಮೆ ಸಾಲದೆ || ಪ ||
ಅಹಿಶಯನನ ಒಲುಮೆಯಿಂದ |
ಮಹಿಯೊಳೆಮ್ಮ ಶ್ರೀಪಾದರಾಯರ || ಅ.ಪ ||
ಮುತ್ತಿನ ಕವಚ ಮೇಲ್ಕುಲಾಯಿ |
ನವರತ್ನ ಕೆತ್ತಿದ ಕರ್ಣ ಕುಂಡಲ |
ಕಸ್ತೂರಿ ತಿಲಕ ಶ್ರೀಗಂಧಲೇಪನ |
ವಿಸ್ತಾರದಿಂದ ಮೆರೆದು ಬರುವ || ೧ ||
ವಿಪ್ರಗೆ ಬ್ರಹ್ಮಹತ್ಯ ದೋಷ ಬರಲು |
ಕ್ಷಿಪ್ರ ಶಂಖೋದಕದಿ ಕಳೆಯೆ |
ಅಪ್ರಬುದ್ಧರು ದೂಷಿಸೆ ಗೇರೆಣ್ಣೆ |
ಕಪ್ಪು ವಸನ ಹಸನ ಮಾಡಿದ || ೨ ||
ಹರಿಗೆ ಸಮರ್ಪಿಸಿದ ನಾನಾ |
ಪರಿಯ ಶಾಕಗಳನು ಭುಂಜಿಸೆ |
ನರರು ನಗಲು ಶ್ರೀಶ ಕೃಷ್ಣನ |
ಕರುಣದಿಂದ ಹಸಿಯ ಮಾಡಿದ || ೩ ||
mahime sAlade iShTE |
mahime sAlade || pa ||
ahiSayanana olumeyiMda |
mahiyoLemma SrIpAdarAyara || a.pa ||
muttina kavaca mElkulAyi |
navaratna kettida karNa kuMDala |
kastUri tilaka SrIgaMdhalEpana |
vistAradiMda meredu baruva || 1 ||
viprage brahmahatya dOSha baralu |
kShipra SaMKOdakadi kaLeye |
aprabuddharu dUShise gEreNNe |
kappu vasana hasana mADida || 2 ||
harige samarpisida nAnA |
pariya SAkagaLanu BuMjise |
nararu nagalu SrISa kRuShNana |
karuNadiMda hasiya mADida || 3 ||
Leave a Reply