Composer : Shri Jagannatha dasaru
Shri Bhuvanendra Tirtha : Info.courtesy: Shri Nagaraju Haveri
Period : 1785 – 1799
Ashrama Gurugalu : Sri Varadendra Teertharu
Ashrama Shishyaru : Sri Subhodhendra Teertharu
Aradhana Tithi : Vaishaka Krishna Saptami..
Vrindavana Situated at : Rajoli
भूदॆववंद्यपादाब्जं भूतिमंतमभीष्टदं ।
भूतलॆ सादु विख्यातं भुवनॆंद्र गुरुं भजॆ ॥
ಭೂದೇವವಂದ್ಯಪಾದಾಬ್ಜಂ ಭೂತಿಮಂತಮಭೀಷ್ಟದಂ |
ಭೂತಲೇ ಸಾಧು ವಿಖ್ಯಾತಂ ಭುವನೇಂದ್ರಗುರುಂ ಭಜೇ ||
ಭುವನೇಂದ್ರ ಮುನಿಪ ನಿನ್ನವನೋ, ಎನ್ನ
ಅವಗುಣಗಳೆಣಿಸದಲೆ ಅನುದಿನದ ಪಾಲಿಪುದು ||ಪ||
ಸಾಧುಜನ ಸಂಪೂಜ್ಯ ಸತತ ನೀ ಎನ್ನ-
ಪರಾಧಗಳೆಣಿಸದಲೆ ಸಂತೈಪುದು
ವೇದ ಪದಯೋಗ್ಯ ಸುಮನಸರ ಗುರು ಶ್ರೀ ಪೂರ್ಣ
ಬೋಧ ಮತ ವಾರಿನಿಧಿ ಚಂದ್ರ ಸದ್ಗುಣ ಸಾಂದ್ರ [೧]
ಶ್ರೀ ಮೂಲ ದಿಗ್ವಿಜಯ ರಾಮ ವ್ಯಾಸಾಂಘ್ರಿ ಯುಗ
ತಾಮರಸ ಭಜಕ ಈ ಭೂಮಿಯೊಳಿಹ
ಪಾಮರನ ಉದ್ಧರಿಸು ರವಿ ಸಾರ್ವ
ಭೌಮ ನೀ ಸಂಚರಿಪೆ ಈ ಮಹೀತಳದಿ [೨]
ವರದೇಂದ್ರ ಯತಿವರ್ಯ ಕರ ಕಮಲ ಸಂಜಾತ
ನಿರುಪಮ ಜಗನ್ನಾಥ ವಿಠಲ ದೂತ
ನೆರೆ ನಂಬಿದೆನೋ ನಿನ್ನ ಪರಿಪಾಲಿಸುವುದೆನ್ನ
ಮರೆಯಲಾಗದು ಜಿತಸ್ಮರ ಭೂವರ ಪ್ರವರಾ [೩]
BuvanEMdra munipa ninnavanO, enna
avaguNagaLeNisadale anudinada pAlipudu ||pa||
sAdhujana saMpUjya satata nI enna-
parAdhagaLeNisadale saMtaipudu
vEda padayOgya sumanasara guru SrI pUrNa
bOdha mata vArinidhi caMdra sadguNa sAMdra [1]
SrI mUla digvijaya rAma vyAsAMGri yuga
tAmarasa Bajaka I BUmiyoLiha
pAmarana uddharisu ravi sArva
Bauma nI saMcaripe I mahItaLadi [2]
varadEMdra yativarya kara kamala saMjAta
nirupama jagannAtha viThala dUta
nere naMbidenO ninna paripAlisuvudenna
mareyalAgadu jitasmara BUvara pravarA [3]
Leave a Reply