Composer : Shri Vijayadasaru
ಮರುತಗಳ ನಾಮವನು ಉದಯದಲಿ ಯೆದ್ದು |
ಸ್ಮರಿಸಿದವರ ದುರಿತ ಪರಿಹಾರವಾಗುವದು || ಪ ||
ಪ್ರಾಣ ಅಪಾನನು ವ್ಯಾನ ಉದಾನ ಸ – |
ಮಾನ ಮತ್ತೆ ನಾಗ ಕೃಕಲ ಕೂರ್ಮ ||
ಏನೆಂಬೆ ದೇವದತ್ತನು ಧನಂಜಯ ಪ್ರವಾ – |
ಹನನು ವಿವಹ ಸಂಯಾ ಸಂವಾಹಾನೆಂದು || ೧ ||
ಶೀಲ ಪರಾವಹ ಉದ್ವಹಾವಹ ಶಂಕು |
ಕಾಲ ಶ್ವಾಸ ಅನಳ ಪ್ರತಿಯೂ ||
ಬಾಲಕುಮುದಾ ಕಾಂತಾ ಶುಚಿ ಅಜಿತ ಗುರು |
ಮೇಲಾಗಿ ಸಂಸಾ ಪ್ರವರ್ತಕಾ ಕಿಲ ರನ್ನ || ೨ ||
ತರುವಾಯ ಅಜಿತ ಸಂಯನು ಕಪಿ ಜಡ ದೇವ |
ಮರಳೆ ಮಂಡುಕ ಸತತ ಸಿದ್ಧ ರಕ್ತಾ ||
ಸರಸ ಕೃಷ್ಣ ಪಿಕ ಶುಕ ಯತಿ ಭೀಮ ಹನು |
ಮರಿಯದಲೆ ಪಿಂಗ ಅಹಂಪ್ರಾಣ ಕಂಪನಾ || ೩ ||
ಇವರ ಸಹಿತವಾಗಿ ಸೂತ್ರನಾಮಕ ಮೂಲ |
ಪವಮಾನನೊಡನೆ ಗಣನೆಯನು ಮಾಡಿ ||
ತವಕದಿಂದಲಿ ತಾರತಮ್ಯವನೆ ತಿಳಿದು |
ಶ್ರವಣದಲಿ ಕೇಳಿ ಸಾಕಲ್ಯವಾಗಿ ನಿತ್ಯ || ೪ ||
ಇದನೆ ಪಠಿಸಿದರೆ ಜನ್ಮ ಜನುಮದಾ ಪಾಪ |
ಉದರಿ ಪೋಗುವದು ಲೇಶ ವುಳಿಯದೆ ||
ಪದುಮನಾಭಾ ನಮ್ಮ ವಿಜಯವಿಟ್ಠಲರೇಯನ |
ಪದವ ಭಜಿಸುವದಕ್ಕೆ ಜ್ಞಾನವೆ ಪುಟ್ಟುವದು || ೫ ||
marutagaLa nAmavanu udayadali yeddu |
smarisidavara durita parihAravAguvadu || pa ||
prANa apAnanu vyAna udAna sa – |
mAna matte nAga kRukala kUrma ||
EneMbe dEvadattanu dhanaMjaya pravA – |
hananu vivaha saMyA saMvAhAneMdu || 1 ||
SIla parAvaha udvahAvaha SaMku |
kAla SvAsa anaLa pratiyU ||
bAlakumudA kAMtA Suci ajita guru |
mElAgi saMsA pravartakA kila ranna || 2 ||
taruvAya ajita saMyanu kapi jaDa dEva |
maraLe maMDuka satata siddha raktA ||
sarasa kRuShNa pika Suka yati BIma hanu |
mariyadale piMga ahaMprANa kaMpanA || 3 ||
ivara sahitavAgi sUtranAmaka mUla |
pavamAnanoDane gaNaneyanu mADi ||
tavakadiMdali tAratamyavane tiLidu |
SravaNadali kELi sAkalyavAgi nitya || 4 ||
idane paThisidare janma janumadA pApa |
udari pOguvadu lESa vuLiyade ||
padumanABA namma vijayaviTThalarEyana |
padava Bajisuvadakke j~jAnave puTTuvadu || 5 ||
Leave a Reply