Composer : Shri Tandegopalavittala
ಶ್ರೀಗೋಪಾಲದಾಸರ ಅನುಜರೂ, ಶಿಷ್ಯರೂ,
ಶ್ರೀತಂದೆಗೋಪಾಲವಿಠಲದಾಸಾರ್ಯ
(ರಂಗಪ್ಪ ದಾಸರು) ವಿರಚಿತ
ಶ್ರೀಗೋಪಾಲದಾಸರ ಚರಿತ್ರೆ ಪದ
ರಾಗ ಆನಂದಭೈರವಿ, ಆದಿತಾಳ
ಭಜಿಸಿ ಬದುಕಿರೊ ಅಜನಪಿತ ಶ್ರೀವಿಜಯವಿಟ್ಠಲರಾಯನಾ |
ಭಜನಿ ಮಾಡುವ ವಿಜಯರಾಯರೆ ನಿಜಗುರುಗಳೆಂದೆನಿಪನಾ||ಪ||
ಮೂಲ ಪೇಳ್ವೆ ವಿಶಾಲ ಮಹಿಮ ಸುಶೀಲ ವಿಜಯರಾಯರ |
ಕಾಲಕಾಲಕೆ ಸ್ಮರಿಪ ಶ್ರೀಗೋಪಾಲದಾಸರಾಯರಾ || ೧ ||
ದಧಿಪಾಷಾಣದಧಿಪನೆನಿಸುವ ಮುದಗಲಾಖ್ಯ ಪುತ್ರನಾ |
ಉದರದಲಿ ಉದುಭವಿಸಿದರು ನಾಲ್ವರದರೊಳಗೆ ಬುಧವರ್ಯನಾ|| ೨ ||
ಪುಟ್ಟಿದಾಗಲೆ ಪಿತ ಮುರಾರಿಯ ಶಿಷ್ಟ ಶಿಶುವೆಂದೆನುತಲಿ |
ಇಟ್ಟ ಈ ವಸುಧಿಯೊಳು ಪೆಸರನು ಧಿಟ್ಟ ಭಾಗಣ್ಣನೆನುತಲಿ || ೩ ||
ಪಂಚವತ್ಸರ ಬರಲು ಮನೆಯೊಳು ಸಂಚಿತದ ಸಂಪತ್ತನು |
ಪಂಚಬಾಣನ ಪಿತನ ಆಜ್ಞದಿ ಕೊಂಚವಾಗೆ ವೆಂಕಮ್ಮನು || ೪ ||
ವೇಂಕಟರಮಣನ್ನ ಸ್ಮರಿಸುತ ಮಂಕುಮಗುಗಳ ಸಹಿತದಿ |
ಸಂಕಟಾಬಡುತಲ್ಲೇ ನಿಂತರಾ ಸುಂಕಪುರದಾ ಸ್ಥಳದಲಿ || ೫ ||
ಉದರಗೋಸುವಾಗಿ ಮತ್ತೆ ಸದನಗಳು ಬಲು ತಿರುಗುತಾ |
ವಿಧಿಲಿಖಿತ ತಪ್ಪದುಯೆನುತಾ ಕೃಷಿ ಅದರ ವ್ಯಾಪಾರ ನಡಿಸುತಾ || ೬ ||
ಏಳು ವರ್ಷವು ಸಾಗಿಸಿ ಶ್ರಮ ತಾಳದಲೆ ವಟ ವೃಕ್ಷದಾ |
ಮೂಲದಲಿ ಮಲಗಿರಲು ದೇಹದ ಮ್ಯಾಲೆ ಸರ್ಪನಂದದಿ || ೭ ||
ಆಡುತಿರಲದು ಕಂಡು ಮಕ್ಕಳು ಓಡಿ ಪೇಳ್ದರು ಜನನಿಗೆ |
ನೋಡಬಂದರು ಜನನಿ ಜನರು ಕೊಂಡಾಡಿದರು ಈ ಮಹಿಮಿಗೆ || ೮ ||
ವೃಕ್ಷವೇರಲು ಸರ್ಪ ಚಿಂತಿಸಿ ರಕ್ಷಕತ್ವವು ಇವರನೆ |
ಲಕ್ಷ್ಮಿರಮಣನೆ ರಕ್ಷಿಸುವನೆಂದೀಕ್ಷಿಸಿ ಉತ್ತನೂರಿಗೆ || ೯ ||
ಬಂದು ದೇವರ ಗುಡಿಪ್ರವೇಶಿಸಿ ನಿಂದು ನಲಿನಲಿದಾಡುತಾ |
ಮಂದಿಗಳು ನೋಡಲ್ಕೆ ಮೌನದಿ ಮಂದಮತಿಯಂತೆ ತೋರುತಾ || ೧೦ ||
ನಿರುತ ಸೇವೆಯ ಮಾಡೆ ಪುರಜನ ಹರಿಯ ಮಂದಿರ ದ್ವಾರವ |
ಭರದಿ ಬಂಧಿಸಿ ತೆರಳಲಾಕ್ಷಣ ಕರವ ಬಾರಿಸಿ ತುತಿಸುವಾ || ೧೧ ||
ವೇಣುಗಾಯನಪ್ರಿಯನು ಎದುರಿಲಿ ಕುಣಿವ ನೂಪುರ ಶಬ್ದವು |
ಮನಿಗಳಲ್ಲಿಹ ಮನುಜರಾಲಿಸೆ ಮನಕೆ ಕೇವಲ ಮೋದವು || ೧೨ ||
ಮೌನ ವ್ರತವನು ಮಾಡುತಿರುವ ಮನುಜನಾ ಮಾತಾಳ್ಪೆನೊ |
ಏನಿದಚ್ಚರವೆನುತ ಬಾಧಿಸೆ ನಾನಾ ಕ್ಲೇಶವ ಬಟ್ಟನು || ೧೩ ||
ಶೈವ ಪಣವನ್ನು ಮಾಡಿ ಕೇಳುತ ಇವರ ಜಯಪತ್ರ ಕೇಳಿದಾ |
ತವಕ ಲಿಖಿಸಿ ಕೊಡೆನಲು ಪ್ರಾರ್ಥಿಸೆ ಕವನ ಪೇಳಲು ತೆರಳಿದಾ || ೧೪ ||
ಸುತರ ಸ್ವಸ್ಥಿಯಗೋಸುಗದಿ ಭೂಪತಿಯ ಸೇವೆಯೊಳಿಟ್ಟರೆ |
ಚತುರದಲಿ ಚೋರತ್ವ ಕಲ್ಪಿಸಿ ಅತಿದುರುಳ ಬಾಧಿಸುತಿರೆ || ೧೫ ||
ಹರಿಯ ಧ್ಯಾನದೊಳಿರಲು ತರುಳರ ಘೋರ ಬಾಧೆಯ ತಿಳಿದನು |
ಭರದಿ ಇಲ್ಲಿಂದತುಳ ಮಹಿಮೆಯ ತೋರಲವರನು ಬಿಟ್ಟನು || ೧೬ ||
ಅಂದು ವೇಗದಿ ಮಂದಿರಕೆ ಬಂದು ನಿಂದು ಮಾತೆಯ ಕರೆದರು |
ಮಂದಹಾಸದಿ ಅನುಜರೀರ್ವರು ಬಂದ ಸ್ಥಿತಿಯನು ಪೇಳಲು || ೧೭ ||
ಇನಿತು ಪರಿದ್ವಯ ವತ್ಸರದೊಳು ಜನನಿಘರುಷವ ತೋರಿದಾ |
ವನಜನಾಭನ ಕೃಪೆಯು ಇಂದಿನ ದಿನ ಪ್ರವೇಶೆಂದು ಪೇಳಿದಾ || ೧೮ ||
ಹರಿಯ ಕರುಣ ಉಣಲಿ ಇಲ್ಲವು ನಿರುತ ಭಿಕ್ಷವ ಬೇಡಲು |
ಎರಡು ವತ್ಸರ ಮೌನ ವೊಹಿಸಿ ಸರಸ ವಚನಗಳಾಡಲು || ೧೯ ||
ಇಂದಿರೇಶನ ಕರುಣದಿಂದಲಿ ಬಂದ ಸಾಮಗ್ರಿ ನೋಡುತಾ |
ಒಂದು ನಾಳಿಗೆ ಬೇಡವೆನ್ನಲು ಸುಂದರಾಂಗಿಯು ಲೋಭದಿ || ೨೦ ||
ಗಡಿಗಿ ಏಳನು ತುಂಬಿ ಭೂಮಿಯೊಳಗಿಸೆರಡನೆ ದಿನದಲಿ |
ನೋಡಿ ಕ್ರಿಮಿರಾಸಿಯನು ಇವರ ಬೇಡಿಕೊಂಡಳು ಕರುಣದಿ || ೨೧ ||
ಮಂದಹಾಸದಿ ಮೂರು ಮ್ಯಾಲಕೆ ತಂದು ವಿಪ್ರರಿಗುಣಿಸಿದ |
ಅಂದವಾದೀ ನಾಲ್ಕು ಘಟಗಳು ಮುಂದಕಿರಲೆಂದು ಪೇಳಿದಾ || ೨೨ ||
ಭಾನು ಉದಯದಲೆದ್ದು ಶ್ರೀಹರಿ ಧ್ಯಾನದಲ್ಲಿರೆ ಜನರಿಗೆ |
ಶ್ರೀನಿವಾಸನ ಕೃಪೆಯು ಪೇಳಿದ ನಾನಾ ಬಗೆ ಕೇಳ್ವವರಿಗೆ || ೨೩ ||
ಈ ಮಹತ್ಮರ ಕೂಡ ವಿಪ್ರನು ಪ್ರೇಮವಚನಗಳಾಡುತಾ |
ಯಾಮ ರಾತ್ರಿಯು ಗಮಿಸಿ ಪೋಗಲು ತಾ ಮನದಿ ಚಿಂತೆ ಮಾಡುತಾ || ೨೪ ||
ಮರಳೆ ಸಂಧ್ಯಾವಂದನೆಯ ಮಾಡಿ ಕರದಿಂದರ್ಘ್ಯವ ಕೊಡುತಿರೆ |
ತರಣಿಯನು ಅಸ್ತಾದ್ರಿಯಲಿ ಕಂಡು ಪರಮ ಹರುಷವ ಬಡುತಿರೆ || ೨೫ ||
ಪರಿ ಪರೀ ಚರ್ಯ ಕಂಡು ರಾಜನು ದರ್ಶನಾದೀತೆಂದನು |
ಹರಿಯ ಸನ್ನಿಧಿ ಕ್ಲುಪ್ತ ದ್ರವ್ಯವು ಕರಿಯ ಕುದರಿಯ ಕೊಡುವನು || ೨೬ ||
ಈ ಪರಿಂದಲಿ ಪೇಳಿ ಹವಿಕನ ಭೂಪ ತಾ ಕಂಡಾಕ್ಷಣ |
ಈ ಪೃಥಿವಿಪತಿ ಪದವು ನಿನಗೆ ತಪ್ಪದೆಂದ ಸುಲಕ್ಷಣಾ || ೨೭ ||
ಧಾತ್ರಿಯೊಳು ಯಾದವಗಿರಿಯ ಸತ್ಪಾತ್ರ ತಿಮ್ಮಣ್ಣನೆಂಬನಾ |
ತೀರ್ಥಯಾತ್ರೆಯ ನೆವನದಿಂದಾ ಕ್ಷೇತ್ರದಲಿ ವಾಸ ಮಾಡ್ದನಾ || ೨೮ ||
ದೇಶದೇಶದ ಜನರುಗಳು ಬಂದು ವಾಸವಾಗಿ ಇಪ್ಪರೋ |
ಶ್ರೀಶನಾಜ್ಞದಿ ಅವರವರ ಅಭಿಲಾಷೆ ಪೊರೈಸುತಿಪ್ಪರೊ || ೨೯ ||
ವೇಂಕಟಕೃಷ್ಣೆಂದು ಪದಗಳಿಗಂಕಿತವು ನೀಡುತಲಿರೆ |
ವೇಂಕಟೇಶನ ದಾಸವರ್ಯರು ಸೋಂಕಿ ವಿಜಯದಿಂ ಬರುತಿರೆ ||೩೦||
ದಾಸವರ್ಯರು ಕಂಡು ಇವರಿಗುಪದೇಶವನು ಕೊಡಲಾಕ್ಷಣ |
ಏಸು ಜನ್ಮದ ಸುಕೃತವೆನುತಲಿ ಲೇಸುಲೇಸೆಂದು ಮೆರದನಾ || ೩೧ ||
ಉಡುಪಿಕೃಷ್ಣನ ದರುಶನಕ್ಕೆ ಆಜ್ಞಾ ಕೊಡಬೇಕೆನುತಲಿ ಕೇಳ್ದನು |
ತಡವ್ಯಾಕೆನುತಲಿ ಹರಿಸ್ತುತಿಯ ಮಾಡಿ ಕೊಡುತ ಪೋಗಿಬಾರೆಂದನು || ೩೨ ||
ಮಂಡಗದ್ದಿಯ ಭೀಮನೆಂಬುವ ಕಂಡು ಪೂಜಿಸಿ ಕಳುಹಿದ |
ಗಂಡಿ ತ್ರಯದಲಿ ಸುಲಿಯೆ ಶಿಗದಿರೆ ದಂಡ ನಮಿಸಲುದ್ಧರಿಸಿದ || ೩೩ ||
ಗೋಪಬಾಲಕನಾದ ಕೃಷ್ಣನ ವ್ಯಾಪಾರಂಗಳ ಸ್ಮರಿಸಿದಾ |
ತಾ ಪುರಕೆ ಬರುತೋರ್ವ ಮನುಜಗಪಾರ ಭಾಗ್ಯವ ತೋರಿದಾ || ೩೪ ||
ಉದರ ಶೂಲಿಯು ಬಾಧಿಸಲು ಶ್ರೀಪದುಮನಾಭನ ಷಡ್ರಸಾ |
ಐದು ತಾಸಿಗೆ ಭುಂಜಿಸುವದೆನೆ ಮುದದಿ ನಡೆಸಿದ ಮಾನಿಸಾ || ೩೫ ||
ವಿಜಯರಾಯರ ಪಾದ ನಿರುತದಿ ತ್ಯಜಿಸದಲೆ ಭಜಿಸುವರೊ |
ವಿಜಯವಿಟ್ಠಲ ಪ್ರತಿಮೆಯನು ಕೊಡೆ ಭಜಿಸಿ ಪೂಜಿಸಿ ನಲಿವರೊ || ೩೬ ||
ರಾಜವಳಿಯ ಗ್ರಾಮದಲಿ ಹರಿ ಪೂಜೆ ಮಾಡುತ ಗಿರಿಯಲಿ |
ಮೂಜಗತ್ಪತಿ ರಥದೊಳಿಹನೆಂದು ನೈಜದಲಿ ಪೇಳುತ್ತಲಿ || ೩೭ ||
ಕ್ಷಾಮ ಪರಿಹರ ಮಾಳ್ಪದೆನುತಲಿ ಗ್ರಾಮಿಕರು ಕರ ಮುಗಿಯಲು |
ಆ ಮಹಾಮೂಢ ಮನುಜನಿಂದಲಿ ಕ್ಷೇಮವಾಗೆ ಕೊಂಡಾಡಲು || ೩೮ ||
ಇವರ ಸ್ತುತಿಸಲು ಸೂತ ಶಾಖದಿ ಲವಣವಧಿಕ ಮಾಡಲು |
ಲವಣಮಾನಿ ಜನಾರ್ದನನಿಗರ್ಪಿಸೆ ಸವಿದು ಭುಂಜಿಸಿ ಪೊಗಳಲು || ೩೯ ||
ವೀರಗರ್ವದಲಿದ್ದ ಧೊರೆಗಳು ಘೋರಿಸಲು ತನ್ನನುಜರಾ |
ವಾರಿ ನೋಟದಿ ನೋಡಿ ಪ್ರಾರ್ಥಿಸೆ ಸೇರಿದರು ಸ್ವಪುರವನಾ || ೪೦ ||
ಪುನಹ ಕೃಷ್ಣನ ದರುಶನಕೆ ತಮ್ಮನುಜರಿಂದಲಿ ನಡೆದರು |
ಜನನ ರಹಿತನು ವನುತೆ ಗರ್ಭದಿ ಜನಿಸೆ ದೃಶ್ಯನಾದನು || ೪೧ ||
ಕ್ಷಿತಿಯೊಳಗೆ ತನಗಾದ ಅನುಭವ ಅತಿಶಯವನು ಪೇಳುತಾ |
ರತಿಪತಿಪಿತನನ್ನು ತನ್ನಯ ಸುತನ ತೆರದಲಿ ಶೆಳವುತಾ || ೪೨ ||
ಕ್ಷಿತಿಯೊಳಗೆ ಶ್ರೀರಂಗ ರಾಜನ ಅತಿ ವಿಭವ ನೋಡೂವರೊ |
ಕೃತಿಪತಿ ನಿಂದಾ ಸ್ತುತಿಯ ಮಾಡುತತಿ ಮುದವ ಬಡುತಿಹರೊ || ೪೩ ||
ಭೂಸುರರು ನದಿಯಲ್ಲಿ ಬರುತಿರೆ ಲೇಸು ಭೋಜನ ಬಯಸಲೂ |
ದಾಸವರ್ಯರು ಅವರ ಮನೊ ಅಭಿಲಾಷೆಯಂತಲಿ ಸಲಿಸಲು || ೪೪ ||
ವಸುಧಿಪತಿ ಕಂಚೀವರದರಾಜನ ವಸನಕೆ ದೀಪ ಸೋಂಕಲೂ |
ಮುಸುಕು ತೊರದು ತುಂಗ ನದಿಯೊಳು ನಸುನಗುತ ಕರನೊರಸಲು || ೪೫ ||
ಅರೆ ಮಾತುಗಳಾಡುತಲಿ ಹಯವೇರಿ ಬಂದನು ಬಳಿಯಲಿ |
ಸೂರಿಜನ ಸಂಪ್ರೀಯನೆಂದು ಸಾರಿದನು ಸಜ್ಜನರಲಿ || ೪೬ ||
ತರುಣಿ ಕ್ಷೀರವು ತಂದು ಕೊಡುತಿರೆ ಭರದಿ ಮರಳೊಳಗೆರದನು |
ಮರಳಿ ಗುಡಿಯೊಳು ಕಂಡು ಬರುತಿರೆ ಕರುಣನಿಧಿಯನು ತೋರ್ದನು || ೪೭ ||
ಕುಂಡಲಾಗಿರಿಯಲ್ಲಿ ವಿಪ್ರನು ಕಂಡು ವಿಜಯರಾಯರಾ |
ದಂಡ ನಮನವ ಮಾಡಿ ಕೇಳ್ದನುದ್ದಂಡ ಕ್ಷಯರೋಗ ಕಳಿತ್ವರಾ || ೪೮ ||
ಹರುಷದಿಂದುತ್ತನೂರು ಸೇರಲು ಪರಿಹರಾಗುವದೆಂದನೂ |
ಬರಲು ಭಕ್ರಿಯ ವೊಳಗೆ ನಾಲ್ವತ್ತೊರುಷ ಆಯುವನಿತ್ತನು || ೪೯ ||
ಸುಧೆ ಸುಪಾತ್ರದಿ ಪಿಡಿದ ಹರಿಯನು ಮುದದಿ ಸ್ಮರಿಸುತ ಕೊಟ್ಟನು |
ಪದುಮನಾಭನು ಕೋಪದಿಂದಿರೆ ಶ್ರೀದಬಾರೆಂದು ಕರೆದನು || ೫೦ ||
ಕರವೀರಪುರನಿಲಯ ಲಕುಮಿಯ ಪರಮ ಹರುಷದಿ ತುತಿಸಿದಾ |
ಶರಣರಿಗೆ ಆ ಪದವನೊದಗಲು ಗುರುದಯದಿ ಪರಿಹರಿಸಿದಾ || ೫೧ ||
ಮಂದಹಾಸದಿ ರಾಘವೇಂದ್ರರ ವೃಂದಾವನಕಭಿನಮಿಸಿದಾ |
ಮುಂದೆ ನಡೆವ ವಿಚಿತ್ರಚರ್ಯಾನಂದದಲಿ ಸಂಸ್ತುತಿಸಿದಾ || ೫೨ ||
ಅನುಜ ಹರಿಯನು ಕಾಣದಲೆ ತನ ಮನದಿ ಸ್ಮರಿಸುತ ನಿಲ್ಲಲು |
ಕನಕಗಿರೀಶನ ಪ್ರಾರ್ಥಿಸುತ ಶ್ರೀವನಿತೆಯರಸನ ತೋರಲು || ೫೩ ||
ತೇರಿನುತ್ಸಹ ನೋಡಿ ಹರುಷದಿ ಬಾರೊ ಮನಕೆಂದು ಸ್ತುತಿಸಿದ |
ಪುರಕೆ ಬರುವ ಕಾಲದಲಿ ಹರಿ ಕರುಣವಿರಲೆಂದು ಪೇಳಿದಾ || ೫೪ ||
ಪ್ರಾಣಸಖಗಪಮೃತ್ಯು ವೊದಗಿರೆ ವೇಣುಗೋಪಾಲ ಕೃಷ್ಣನಾ |
ನಾನಾ ಪರಿಯಲಿ ಪ್ರಾರ್ಥಿಸಿನ್ನು ಹಾನಿ ಹಿಂದಕೆ ಮಾಡ್ದನಾ || ೫೫ ||
ದುರುಳ ಮಾಯ್ಗಳ ಪುರಕೆ ಪೋಗಿ ಹರಿಯೆ ಪರನೆಂದು ಪೊಗಳುವ |
ಭರದಿ ಬಂದವರೆಲ್ಲ ವಾದಿಸೆ ಹರುಷದಿಂದಲಿ ಜೈಸುವಾ || ೫೬ ||
ದ್ವಿಜನು ವಿಜಯರಾಯರನು ತನ್ನ ನಿಜಸ್ವರೂಪವ ಕೇಳ್ದನು |
ಸುಜನ ಶಿರೋಮಣಿ ಮುಕ್ತಿಯಲಿ ಕಾಕ ನಿಜವೆನುತ ಸ್ತುತಿ ಮಾಡ್ದನು || ೫೭ ||
ನುಡಿದ ವಚನವ ಕೇಳಿ ವಿಪ್ರನು ಮಿಡುಕಿದನು ಬಲು ಮನದಲಿ |
ಸಡಗರದಿ ಗುರು ವಿಜಯರಾಯರು ದೃಢ ಪೇಳಿಹೆ ನಿಜವೆನುತಲಿ || ೫೮ ||
ಭವ ವಿಮೋಚನ ಮಾಳ್ಪ ನದಿಯೊಳು ಅವಗಹನ ಸ್ನಾನ ಮಾಡುತಾ |
ಪವನಪಿತ ಅಹೋಬಲ ನೃಸಿಂಹನ ಕವನರೂಪದಿ ಸ್ಮರಿಸುತ || ೫೯ ||
ಹರುಷದಲಿ ಸತ್ಯಬೋಧರಾಯರ ದರುಶನಕೆ ಪೋಗಿ ನಿಲ್ಲಲು |
ತ್ವರದಿ ಮೂವರು ಸ್ತುತಿಯ ಮಾಡೆನೆ ಸರಸದಿಂದಲಿ ಪಾಡಲು || ೬೦ ||
ಭರದಿ ವೇಂಕಟನೃಸಿಂಹಾರ್ಯರು ಬರಲು ಚರಣಕೆ ನಮಿಸುತಾ |
ಅರಸಿ ಆಜ್ಞವೆ ಮುಖ್ಯ ನಿಮಗೆಂದು ಸರಸ ವಚನಗಳಾಡುತಾ || ೬೧ ||
ಬಂದ ಬಗಿಯನು ತಿಳಿದು ನಿಮಗಿಷ್ಟೊಂದು ಚಿಂತ್ಯಾಕೆಂದನು |
ಮುಂದೆ ತರುಳನು ಮಾಳ್ಪ ಚರಿತೆಯ ಮಂದಹಾಸದಿ ಪೇಳ್ದನು || ೬೨ ||
ಮಂಗಳಪ್ರದವಾದ ನಿವೃತ್ತಿಸಂಗಮದಿ ಸ್ನಾನ ಮಾಡಿದ |
ಗಂಗೆ ಮೊದಲಾದಖಿಳ ನದಿಗುತ್ತುಂಗ ಸ್ಥಳಯೆಂದು ಪೇಳಿದ || ೬೩ ||
ಮೋದದಲಿ ತತ್ವಸಾರ ಪದ ಸುಳಾದಿಗಳು ಉಗಭೋಗವಾ |
ಬೋಧಪೂರ್ಣರ ಶಾಸ್ತ್ರಸಮ್ಮತವಾದ ಕವನವ ಪೇಳುವಾ || ೬೪ ||
ತನಯ ಅನುಜರ ಧನದಗೋಸುಗ ವಿನಯದಿಂದಲಿ ಕಳುಹಿದಾ |
ಅನುಜನೋರ್ವಗೆ ಮುಂದಿನಾ ಸ್ಥಿತಿ ಕನಸಿನಂದದಿ ಪೇಳಿದಾ || ೬೫ ||
ಸಣ್ಣವರ ಉದುಸಾಗಿ ಶ್ರೀಹರಿಯನ್ನು ಬಿನ್ನೈಸೀದನೂ |
ಎನ್ನ ಸ್ವಾಮಿಯ ಮಹಿಮೆ ಧರೆಯೊಳಗಿನ್ನೂರೊರುಷೆಂದು ಪೇಳ್ದನು || ೬೬ ||
ಹಿಂದೆ ಅನುಭವ ಜನ್ಮ ಚತುರ್ದಶ ಇಂದು ಈ ಜನುಮೆಂದನು |
ಮುಂದೆರಡು ಜನ್ಮದ ಸುಚರಿಯಾನಂದದಲಿ ಕೇಳೆಂದನು || ೬೭ ||
ಕ್ಷಿತಿಯೊಳಗೆ ಗುರುವ್ಯಾಸತತ್ವಜ್ಞರ ಸುತನೆನಿಸಿ ಸಚ್ಛಾಸ್ತ್ರವಾ |
ಪ್ರತಿದಿನದಿ ಪ್ರವಚನ ಮಾಡುತ ಹುತಭುಜನ ಮುದ ಬಡಿಸುವಾ || ೬೮ ||
ಎನ್ನ ಸ್ಥಾನಕೆ ಸೇರುವೆಯೋ ನೀ ನಿನ್ನ ವಂಶವು ಎನ್ನದು |
ನಿನ್ನ ವಂಶದಿ ಘನ್ನನೆನಿಸುವೆ ಇನ್ನು ಸಂಶಯ ಸಲ್ಲದು || ೬೯ ||
ಅನುಜ ಕೇಳ ಪಾಚಕನು ಜಲಧರ ಗಣಿಕಜ್ಞಾನಿ ಚಿಕಿತ್ಸಕಾ |
ಮುನಿಯ ಪ್ರಮುಖರು ನಿನ್ನ ವಂಶದಿ ಜನಿಸಲು ಘನ ಬಾಲಕಾ || ೭೦ ||
ಮಾತೃಗರ್ಭದೊಳಿರಲು ಮೃಣ್ಮಯ ಪಾತ್ರಿಯಲಿ ಜಲಪಾನವ |
ಧಾತ್ರಿಯೊಳು ಇಚ್ಛೈಸುವವಳಾ ಪುತ್ರ ಭಾವವನೈದುವಾ || ೭೧ ||
ಪುಟ್ಟಿ ದ್ವಾದಶ ವತ್ಸರದೊಳುತ್ಕೃಷ್ಟ ಮಹದಾರಿದ್ರವಾ |
ಅಟ್ಟುಳಿಗೆ ಬಾಯ್ಬಿಡುವ ಜನಕನ ಕಷ್ಟ ಪರಿಹರ ಮಾಡುವಾ || ೭೨ ||
ಊರ್ವಿಯೊಳು ನಾನಿಟ್ಟ ನಾಲಕು ಉರ್ವರಿತ ಭಾಂಡಗಳನು |
ಗುರ್ವನುಗ್ರಹದಿಂದ ತೆಗೆದು ಸರ್ವರಿಗೆ ಸುಖ ಕೊಡುವನು || ೭೩ ||
ಅವನೆ ಧನ್ಯನು ಎನ್ನ ಧನ ತೆಗದವನೆ ವೆಚ್ಚ ಮಾಳ್ಪನು |
ಅವನೆ ಎನ್ನಸ್ಥಿಗಳನೊಯಿದು ದೇವನದಿಗರ್ಪಿಸುವನು || ೭೪ ||
ಎಷ್ಟು ಪೇಳಲಿ ಎನ್ನ ವಂಶದಿ ಪುಟ್ಟಿದವರಿಗೆ ಪೇಳ್ವದು |
ಧಿಟ್ಟ ಗುರುಗಳು ಕೊಟ್ಟ ಅಂಕಿತವಿಟ್ಟು ಪದಗಳ ಮಾಳ್ಪದು || ೭೫ ||
ಭಕ್ತಿಯಲಿ ಇವಗ್ಯಾರು ಸರಿಯೆಂಬ ಉಕ್ತಿ ಗುರುಗಳ ವಾಕ್ಯವು |
ಮುಕ್ತಿಸುಖ ವಿಚಿತ್ರ ಪೇಳ್ವೆ ವಿರಕ್ತರಾ ಯುಕ್ತಿ ದ್ವಾರವು || ೭೬ ||
ಮಂದಮತಿ ನಾನಿವರ ಗುಣಗಳ ಒಂದನಾದರು ಅರಿಯೆನು |
ಇಂದಿರೇಶನು ನುಡಿಸಿದದು ಆನಂದದಲಿ ಸಂಸ್ತುತಿಪೆನು || ೭೭ ||
ಭಾ ಎನಲು ಭಕುತಿಯನು ಪುಟ್ಟಿಸಿ ಕಾಯಕ್ಲೇಶವ ಕಳವನೂ |
ಗ ಎನಲು ಭವದೂರ ಮಾಳ್ಪನು ಣ್ಣಾ ಎನಲು ಮುಕ್ತಿ ಕೊಡುವನು||೭೮||
ಇವರ ನಾಮ ಓಂಕಾರ ಪೂರ್ವಕ ಸ್ತವನ ಮಾಡಲು ಪವನನು |
ತ್ರಿವಿಧ ಲಿಂಗವ ವಿರಜೆಯಲಿ ಕಳೆದವರ ಮುಕ್ತರೊಳಿಡುವನು || ೭೯ ||
ಉದಯಕಾಲದಿ ಪದವ ಪಠಿಸಲು ಮದಡಗಾದರು ಜ್ಞಾನವ |
ಒದಗುವದು ಸಂದೇಹವಿಲ್ಲದು ಪದುಮನಾಭನ ಕರುಣವಾ || ೮೦ ||
ಏಕದಂತನೆ ಅಂಶದಲಿ ಭೂಲೋಕದಲಿ ಅವತರಿಸಿದಾ |
ತಾ ಕಳೇವರವನ್ನು ಧರಿಸಿ ಶ್ರೀಕಳತ್ರನ ತುತಿಸಿದಾ || ೮೧ ||
ಎರಡು ವಿಂಶತಿ ವರುಷಕೆ ಈ ಚರಿಯವ ಮಾಡಿದಾ |
ಪರಮ ಹರುಷದಿ ಶ್ವಾಸ ಬಂಧಿಸಿ ಕರಣ ಮಾರ್ಗದಿ ತೆರಳಿದಾ || ೮೨ ||
ಸೃಷ್ಟಿಯೊಳು ಚಿತ್ರಭಾನು ಪುಷ್ಯ ಕೃಷ್ಣಾಷ್ಟಮಿ ರವಿವಾರದಿ |
ಬಿಟ್ಟು ದೇಹವ ತಂದೆಗೋಪಾಲವಿಟ್ಠಲನ ಪದಧ್ಯಾನದಿ || ೮೩ ||
SrIgOpAladAsara anujarU, SiShyarU,
SrItaMdegOpAlaviThaladAsArya
(raMgappa dAsaru) viracita
SrIgOpAladAsara caritre pada
rAga AnaMdaBairavi, AditALa
Bajisi badukiro ajanapita SrIvijayaviTThalarAyanA |
Bajani mADuva vijayarAyare nijagurugaLeMdenipanA||pa||
mUla pELve viSAla mahima suSIla vijayarAyara |
kAlakAlake smaripa SrIgOpAladAsarAyarA || 1 ||
dadhipAShANadadhipanenisuva mudagalAKya putranA |
udaradali uduBavisidaru nAlvaradaroLage budhavaryanA|| 2 ||
puTTidAgale pita murAriya SiShTa SiSuveMdenutali |
iTTa I vasudhiyoLu pesaranu dhiTTa BAgaNNanenutali || 3 ||
paMcavatsara baralu maneyoLu saMcitada saMpattanu |
paMcabANana pitana Aj~jadi koMcavAge veMkammanu || 4 ||
vEMkaTaramaNanna smarisuta maMkumagugaLa sahitadi |
saMkaTAbaDutallE niMtarA suMkapuradA sthaLadali || 5 ||
udaragOsuvAgi matte sadanagaLu balu tirugutA |
vidhiliKita tappaduyenutA kRuShi adara vyApAra naDisutA || 6 ||
ELu varShavu sAgisi Srama tALadale vaTa vRukShadA |
mUladali malagiralu dEhada myAle sarpanaMdadi || 7 ||
ADutiraladu kaMDu makkaLu ODi pELdaru jananige |
nODabaMdaru janani janaru koMDADidaru I mahimige || 8 ||
vRukShavEralu sarpa ciMtisi rakShakatvavu ivarane |
lakShmiramaNane rakShisuvaneMdIkShisi uttanUrige || 9 ||
baMdu dEvara guDipravESisi niMdu nalinalidADutA |
maMdigaLu nODalke maunadi maMdamatiyaMte tOrutA || 10 ||
niruta sEveya mADe purajana hariya maMdira dvArava |
Baradi baMdhisi teraLalAkShaNa karava bArisi tutisuvA || 11 ||
vENugAyanapriyanu edurili kuNiva nUpura Sabdavu |
manigaLalliha manujarAlise manake kEvala mOdavu || 12 ||
mauna vratavanu mADutiruva manujanA mAtALpeno |
Enidaccaravenuta bAdhise nAnA klESava baTTanu || 13 ||
Saiva paNavannu mADi kELuta ivara jayapatra kELidA |
tavaka liKisi koDenalu prArthise kavana pELalu teraLidA || 14 ||
sutara svasthiyagOsugadi BUpatiya sEveyoLiTTare |
caturadali cOratva kalpisi atiduruLa bAdhisutire || 15 ||
hariya dhyAnadoLiralu taruLara GOra bAdheya tiLidanu |
Baradi illiMdatuLa mahimeya tOralavaranu biTTanu || 16 ||
aMdu vEgadi maMdirake baMdu niMdu mAteya karedaru |
maMdahAsadi anujarIrvaru baMda sthitiyanu pELalu || 17 ||
initu paridvaya vatsaradoLu jananiGaruShava tOridA |
vanajanABana kRupeyu iMdina dina pravESeMdu pELidA || 18 ||
hariya karuNa uNali illavu niruta BikShava bEDalu |
eraDu vatsara mauna vohisi sarasa vacanagaLADalu || 19 ||
iMdirESana karuNadiMdali baMda sAmagri nODutA |
oMdu nALige bEDavennalu suMdarAMgiyu lOBadi || 20 ||
gaDigi ELanu tuMbi BUmiyoLagiseraDane dinadali |
nODi krimirAsiyanu ivara bEDikoMDaLu karuNadi || 21 ||
maMdahAsadi mUru myAlake taMdu viprariguNisida |
aMdavAdI nAlku GaTagaLu muMdakiraleMdu pELidA || 22 ||
BAnu udayadaleddu SrIhari dhyAnadallire janarige |
SrInivAsana kRupeyu pELida nAnA bage kELvavarige || 23 ||
I mahatmara kUDa vipranu prEmavacanagaLADutA |
yAma rAtriyu gamisi pOgalu tA manadi ciMte mADutA || 24 ||
maraLe saMdhyAvaMdaneya mADi karadiMdarGyava koDutire |
taraNiyanu astAdriyali kaMDu parama haruShava baDutire || 25 ||
pari parI carya kaMDu rAjanu darSanAdIteMdanu |
hariya sannidhi klupta dravyavu kariya kudariya koDuvanu || 26 ||
I pariMdali pELi havikana BUpa tA kaMDAkShaNa |
I pRuthivipati padavu ninage tappadeMda sulakShaNA || 27 ||
dhAtriyoLu yAdavagiriya satpAtra timmaNNaneMbanA |
tIrthayAtreya nevanadiMdA kShEtradali vAsa mADdanA || 28 ||
dESadESada janarugaLu baMdu vAsavAgi ipparO |
SrISanAj~jadi avaravara aBilAShe poraisutipparo || 29 ||
vEMkaTakRuShNeMdu padagaLigaMkitavu nIDutalire |
vEMkaTESana dAsavaryaru sOMki vijayadiM barutire ||30||
dAsavaryaru kaMDu ivarigupadESavanu koDalAkShaNa |
Esu janmada sukRutavenutali lEsulEseMdu meradanA || 31 ||
uDupikRuShNana daruSanakke Aj~jA koDabEkenutali kELdanu |
taDavyAkenutali haristutiya mADi koDuta pOgibAreMdanu || 32 ||
maMDagaddiya BImaneMbuva kaMDu pUjisi kaLuhida |
gaMDi trayadali suliye Sigadire daMDa namisaluddharisida || 33 ||
gOpabAlakanAda kRuShNana vyApAraMgaLa smarisidA |
tA purake barutOrva manujagapAra BAgyava tOridA || 34 ||
udara SUliyu bAdhisalu SrIpadumanABana ShaDrasA |
aidu tAsige BuMjisuvadene mudadi naDesida mAnisA || 35 ||
vijayarAyara pAda nirutadi tyajisadale Bajisuvaro |
vijayaviTThala pratimeyanu koDe Bajisi pUjisi nalivaro || 36 ||
rAjavaLiya grAmadali hari pUje mADuta giriyali |
mUjagatpati rathadoLihaneMdu naijadali pELuttali || 37 ||
kShAma parihara mALpadenutali grAmikaru kara mugiyalu |
A mahAmUDha manujaniMdali kShEmavAge koMDADalu || 38 ||
ivara stutisalu sUta SAKadi lavaNavadhika mADalu |
lavaNamAni janArdananigarpise savidu BuMjisi pogaLalu || 39 ||
vIragarvadalidda dhoregaLu GOrisalu tannanujarA |
vAri nOTadi nODi prArthise sEridaru svapuravanA || 40 ||
punaha kRuShNana daruSanake tammanujariMdali naDedaru |
janana rahitanu vanute garBadi janise dRuSyanAdanu || 41 ||
kShitiyoLage tanagAda anuBava atiSayavanu pELutA |
ratipatipitanannu tannaya sutana teradali SeLavutA || 42 ||
kShitiyoLage SrIraMga rAjana ati viBava nODUvaro |
kRutipati niMdA stutiya mADutati mudava baDutiharo || 43 ||
BUsuraru nadiyalli barutire lEsu BOjana bayasalU |
dAsavaryaru avara mano aBilASheyaMtali salisalu || 44 ||
vasudhipati kaMcIvaradarAjana vasanake dIpa sOMkalU |
musuku toradu tuMga nadiyoLu nasunaguta karanorasalu || 45 ||
are mAtugaLADutali hayavEri baMdanu baLiyali |
sUrijana saMprIyaneMdu sAridanu sajjanarali || 46 ||
taruNi kShIravu taMdu koDutire Baradi maraLoLageradanu |
maraLi guDiyoLu kaMDu barutire karuNanidhiyanu tOrdanu || 47 ||
kuMDalAgiriyalli vipranu kaMDu vijayarAyarA |
daMDa namanava mADi kELdanuddaMDa kShayarOga kaLitvarA || 48 ||
haruShadiMduttanUru sEralu pariharAguvadeMdanU |
baralu Bakriya voLage nAlvattoruSha Ayuvanittanu || 49 ||
sudhe supAtradi piDida hariyanu mudadi smarisuta koTTanu |
padumanABanu kOpadiMdire SrIdabAreMdu karedanu || 50 ||
karavIrapuranilaya lakumiya parama haruShadi tutisidA |
SaraNarige A padavanodagalu gurudayadi pariharisidA || 51 ||
maMdahAsadi rAGavEMdrara vRuMdAvanakaBinamisidA |
muMde naDeva vicitracaryAnaMdadali saMstutisidA || 52 ||
anuja hariyanu kANadale tana manadi smarisuta nillalu |
kanakagirISana prArthisuta SrIvaniteyarasana tOralu || 53 ||
tErinutsaha nODi haruShadi bAro manakeMdu stutisida |
purake baruva kAladali hari karuNaviraleMdu pELidA || 54 ||
prANasaKagapamRutyu vodagire vENugOpAla kRuShNanA |
nAnA pariyali prArthisinnu hAni hiMdake mADdanA || 55 ||
duruLa mAygaLa purake pOgi hariye paraneMdu pogaLuva |
Baradi baMdavarella vAdise haruShadiMdali jaisuvA || 56 ||
dvijanu vijayarAyaranu tanna nijasvarUpava kELdanu |
sujana SirOmaNi muktiyali kAka nijavenuta stuti mADdanu || 57 ||
nuDida vacanava kELi vipranu miDukidanu balu manadali |
saDagaradi guru vijayarAyaru dRuDha pELihe nijavenutali || 58 ||
Bava vimOcana mALpa nadiyoLu avagahana snAna mADutA |
pavanapita ahObala nRusiMhana kavanarUpadi smarisuta || 59 ||
haruShadali satyabOdharAyara daruSanake pOgi nillalu |
tvaradi mUvaru stutiya mADene sarasadiMdali pADalu || 60 ||
Baradi vEMkaTanRusiMhAryaru baralu caraNake namisutA |
arasi Aj~jave muKya nimageMdu sarasa vacanagaLADutA || 61 ||
baMda bagiyanu tiLidu nimagiShToMdu ciMtyAkeMdanu |
muMde taruLanu mALpa cariteya maMdahAsadi pELdanu || 62 ||
maMgaLapradavAda nivRuttisaMgamadi snAna mADida |
gaMge modalAdaKiLa nadiguttuMga sthaLayeMdu pELida || 63 ||
mOdadali tatvasAra pada suLAdigaLu ugaBOgavA |
bOdhapUrNara SAstrasammatavAda kavanava pELuvA || 64 ||
tanaya anujara dhanadagOsuga vinayadiMdali kaLuhidA |
anujanOrvage muMdinA sthiti kanasinaMdadi pELidA || 65 ||
saNNavara udusAgi SrIhariyannu binnaisIdanU |
enna svAmiya mahime dhareyoLaginnUroruSheMdu pELdanu || 66 ||
hiMde anuBava janma caturdaSa iMdu I janumeMdanu |
muMderaDu janmada sucariyAnaMdadali kELeMdanu || 67 ||
kShitiyoLage guruvyAsatatvaj~jara sutanenisi sacCAstravA |
pratidinadi pravacana mADuta hutaBujana muda baDisuvA || 68 ||
enna sthAnake sEruveyO nI ninna vaMSavu ennadu |
ninna vaMSadi Gannanenisuve innu saMSaya salladu || 69 ||
anuja kELa pAcakanu jaladhara gaNikaj~jAni cikitsakA |
muniya pramuKaru ninna vaMSadi janisalu Gana bAlakA || 70 ||
mAtRugarBadoLiralu mRuNmaya pAtriyali jalapAnava |
dhAtriyoLu icCaisuvavaLA putra BAvavanaiduvA || 71 ||
puTTi dvAdaSa vatsaradoLutkRuShTa mahadAridravA |
aTTuLige bAybiDuva janakana kaShTa parihara mADuvA || 72 ||
UrviyoLu nAniTTa nAlaku urvarita BAMDagaLanu |
gurvanugrahadiMda tegedu sarvarige suKa koDuvanu || 73 ||
avane dhanyanu enna dhana tegadavane vecca mALpanu |
avane ennasthigaLanoyidu dEvanadigarpisuvanu || 74 ||
eShTu pELali enna vaMSadi puTTidavarige pELvadu |
dhiTTa gurugaLu koTTa aMkitaviTTu padagaLa mALpadu || 75 ||
Baktiyali ivagyAru sariyeMba ukti gurugaLa vAkyavu |
muktisuKa vicitra pELve viraktarA yukti dvAravu || 76 ||
maMdamati nAnivara guNagaLa oMdanAdaru ariyenu |
iMdirESanu nuDisidadu AnaMdadali saMstutipenu || 77 ||
BA enalu Bakutiyanu puTTisi kAyaklESava kaLavanU |
ga enalu BavadUra mALpanu NNA enalu mukti koDuvanu||78||
ivara nAma OMkAra pUrvaka stavana mADalu pavananu |
trividha liMgava virajeyali kaLedavara muktaroLiDuvanu || 79 ||
udayakAladi padava paThisalu madaDagAdaru j~jAnava |
odaguvadu saMdEhavilladu padumanABana karuNavA || 80 ||
EkadaMtane aMSadali BUlOkadali avatarisidA |
tA kaLEvaravannu dharisi SrIkaLatrana tutisidA || 81 ||
eraDu viMSati varuShake I cariyava mADidA |
parama haruShadi SvAsa baMdhisi karaNa mArgadi teraLidA || 82 ||
sRuShTiyoLu citraBAnu puShya kRuShNAShTami ravivAradi |
biTTu dEhava taMdegOpAlaviTThalana padadhyAnadi || 83 ||
Leave a Reply