Composer : Shri Uragadrivasa vittala
ಉರಗಾದ್ರಿವಾಸವಿಠಲದಾಸರ ಲಯ ಪ್ರಕರಣ ||
ಧೇನಿಸೊ ಶ್ರೀಹರಿಯ ಮಹಿಮೆಯ ||ಪ||
ಧೇನಿಸು ಲಯದ ವಿಸ್ತಾರ ಚತುರಾ
ನಾನಕಲ್ಪದ ವಿವರಾ ||ಆಹಾ||
ಧೇನಿಸೆ ಶತಾನಂದಗೆ ಶತ-
ಮಾನಕಾಲದಲ್ಲಿ ಇದ್ದು ನಡೆಸುವ ಹರಿಕಾರ್ಯ ||ಅ.ಪ ||
ಮೊದಲರ್ಧ ಶತಮಾನ ಸೂಕ್ಷ್ಮ ಸೃಷ್ಟಿ
ಪದುಮವ ತೋರಿದ ಮಹಾಮಹಿಮ ಆಗ
ಅದೆ ಪ್ರಥಮ ಪರಾರ್ಧವು ನೇಮ ಮೇಲೆ
ದ್ವಿತೀಯ ಭಾಗಕ್ಕೆಲ್ಲ ಬ್ರಹ್ಮ ||ಆಹಾ||
ಅದರೊಳು ತ್ರಿದಶ ಏಳರ್ಧ ವರುಷವು
ಪದುಮಜನಿಂದ ರಾಜ್ಯವನಾಳಿಸಿದ ಪರಿಯನು (೧)
ದ್ವಾದಶಾರ್ಧವರುಷ ತಾ ಉಳಿಯೆ ಆಗ
ತೋರ್ದ ಅದುಭೂತವಾದ ಮಹಾಪ್ರಳಯ ಸೂಚ-
ನಾದಿ ಕಾರ್ಯವು ತಾ ಮೆರೆಯೆ ಶತ
ಅಬ್ದ ಅನಾವೃಷ್ಟಿ ತೋರಿರೆ ಆಹಾ||
ಪದುಮಜಾಂಡದೊಳಿಹ ಪ್ರಜೆಗಳ ಸಂಹಾರ
ಉದಧಿ ಶೋಷಣೆಯಿಂದ ಸರ್ವಸಂಹಾರವ (೨)
ಮೇರುಪರ್ವತ ಸ್ಥಳದಲ್ಲಿ ಇದ್ದ ವಿ-
ಧಿರುದ್ರಾದಿಗಳೆಲ್ಲರಲ್ಲಿ ಮಹ
ನರಸಿಂಹ ಆನಂದದಿಂದಲಿ ಆನಂದ
ತೋರುತ್ತ ಕುಣಿದಾಡುತಲಿ ||ಆಹಾ||
ಹರುಷೋದ್ರೇಕದಿಂದ ಸಂಗಡ ಕುಣಿಯುವ
ಸುರರವಯವಗಳ ತಾನಲಂಕರಿಸಿದನ (೩)
ನರಹರಿ ನರ್ತನ ಮಾಡಿ ತನ್ನ
ಕರದಿ ತ್ರಿಶೂಲವನು ನೀಡಿ ದಿ-
ಕ್ಕರಿಗಳ ಪೋಣಿಸಿ ಆಡಿ ಸರ್ವರ ಉ-
ದರದೋಳಿಟ್ಟು ಕೂಡಿ ||ಆಹಾ||
ಪರಿಪರಿ ನಟಿಸುವ ನಿಟಿಲನೇತ್ರನ ಗ್ರಾಸ
ತ್ವರಿತದಿ ತಾ ಮಾಡಿ ಕ್ರೀಡಿಸುತಿರ್ಪನ್ನ (೪)
ವಾಯುದೇವರ ಗದಾಪ್ರಹಾರದಿಂದ
ಭಯ ಹುಂಕಾರದಿಂದ ಜೀವರ ಲಿಂಗ
ಕಾಯ ಭಂಗಗೈದವರಾ ಅವರ
ಆಯತ ಸ್ಥಳದಲ್ಲಿಟ್ಟವರಾ ||ಆಹಾ||
ಲಯಕಾಲದಿ ಸಂಕರುಷಣನ ಮುಖದಿಂದ
ಲಯವಾಗಲು ಅಗ್ನಿ ಪೊರಟು ದಹಿಪುದಾ (೫)
ಕರಿಯ ಸೊಂಡಿಲಿನಂತೆ ಮಳೆಯು ಧಾರೆ
ನಿರುತ ಶತವರ್ಷಗರೆಯೆ ನೋಡೆ
ಸರ್ವತ್ರ ಜಲಮಯವಾಗೆ ಆಗ
ನೀರಜಾಂಡವೆಲ್ಲ ಕರಗೆ ||ಆಹಾ||
ಗರುಡ ಶೇಷ ಮಾರ್ಗವರಿತು ಬರುತಿರ್ಪ
ಸರ್ವಜೀವರ ತನ್ನ ಉದರದೊಳಿಟ್ಟನ್ನಾ (೬)
ಅರಿಯೋ ನೀ ಶೇಷಮಾರ್ಗವನ್ನೂ ಇಲ್ಲಿ
ಸುರರು ಕುಬೇರನೊಳಿನ್ನು ಆತ
ವರುಣನಲ್ಲಿ ಲಯವನ್ನೂ ಚಂದ್ರ
ಹರಿಪಾರ್ಷಧರನಿರುದ್ಧನನ್ನು ಆಹಾ
ಅನಿರುದ್ಧ ಸನತ್ಕುಮಾರನ್ನ ತಾವು ಪೊಂದಿ
ಮಾರ ವಾರುಣಿಯು ಹರಿಮಡದಿಯರಲ್ಲಿ ಲಯವನ್ನು (೭)
ಖಗಪನೊಳವಶಿಷ್ಟ ಸುರರು ಮೊದಲು
ಅಗ್ನಿಯೊಳ್ ಲಯವನ್ನೈದುವರು ಆ
ಅಗ್ನಿ ತಾ ಸೂರ್ಯನ್ನ ಸೇರುವನು ಸೂರ್ಯ
ತಾ ಗುರುವನ್ನ ಸೇರುವನು ||ಆಹಾ||
ಆಗಲೇ ಸರ್ವ ಮನುಜರು ಪಿತೃಗಳು
ನಿರಋತಿಯೊಳು ಪೊಕ್ಕು ತಾ ಯಮನಲ್ಲಿ ಸೇರುವಾ (೮)
ಯಮ ಪ್ರಿಯವ್ರತರಾಯರೆಲ್ಲ ಲಯ
ತಮ್ಮ ಸ್ವಾಯಂಭು ಮನುವಿನಲ್ಲಿ ಮತ್ತೆ ಮ-
ಹಿಮ ಭೃಗುವು ದಕ್ಷನಲ್ಲಿ ಲಯವು
ಆ ಮಹಾದಕ್ಷ ಸ್ವಾಯಂಭು ಇಂದ್ರನಲ್ಲೀ-ಆಹಾ
ಅಮರಪತಿಯು ತಾ ಸೌಪರಣಿಯನು ಪೊಂದಿ
ಈ ಮಾರ್ಗದಿ ತಾನು ಗರುಡನ್ನ ಸೇರುವುದ (೯)
ಶೇಷಗರುಡರೊಡಗೂಡಿ ಆಗ
ಸರಸ್ವತಿಯನ್ನೆ ಪೊಂದುವರು ಮತ್ತೆ
ಆಸುವಿರಿಂಚಿ ವಾಯುಗಳು ತಾವು
ಸರಸ್ವತಿಯನ್ನೆ ಪೊಂದುವರು ||ಆಹಾ||
ಈ ಸರಸ್ವತಿ ಕಾಲಬ್ರಹ್ಮನ್ನ ಸೇರುವ
ಈ ಸೂಕ್ಷ್ಮಲಯವನ್ನೆ ಕ್ರಮವರಿತು ನೀನೀಗ (೧೦)
ಸೂತ್ರನಾಮಕ ವಾಯುದೇವ ರುದ್ರ
ಉಮೆಪ್ರದ್ಯುಮ್ನದ್ವಾರ ತ್ರಾತ
ಸಂಕುರುಷಣನಾ ದಯದಿ ಜಗ-
ನ್ಮಾತೆ ಲಕ್ಷ್ಮಿಯೊಳು ಸೇರುವರು ||ಆಹಾ||
ಚತುರಾಸ್ಯ ಜೀವರ ತನ್ನುದರದೊಳಿಟ್ಟು
ಅತಿಮೋದದಿಂದ ವಿರಾಟನ್ನೈದುವುದ (೧೧)
ವಿರಾಟ್ ಬ್ರಹ್ಮನು ತಾನೆಲ್ಲಾ ತನ್ನ ಆ
ವರಣದಲ್ಲಿ ಇಪ್ಪಂಥ ತನ್ನ
ಧರೆಯಲ್ಲಿ ಲೀನವಾಗುತ ಆಗ
ಪರಿಪರಿಯಿಂದ ತನ್ಮಾತ್ರ ||ಆಹಾ||
ಅರಿತು ಶಬ್ದಸ್ಪರ್ಶರೂಪರಸಗಂಧ
ಪರಿಪರಿಯಿಂದಲಿ ಲಯವನ್ನೈದುವುದಾ (೧೨)
ಗಂಧದ್ವಾರ ಲಯತನ್ನ ಬಿಲದಿ ಜಾತ
ವೇದದಲ್ಲಿ ರಸ ಲಯವು ರೂಪ
ದದ್ವಾರ ಲಯ ವಾಯುವಿನೊಳು ಸ್ಪರ್ಶದ
ದ್ವಾರ ಲಯ ಆಕಾಶದೊಳು-ಆಹಾ-
ಶಬ್ದದ್ವಾರ ಲಯತಮ ಅಹಂಕಾರಾದಿ
ತದಾಂತರ್ಗತ ಭಗವದ್ರೂಪದಲ್ಲ್ಯೆಕ್ಯವಾ (೧೩)
ಅಹಂಕಾರತ್ರಯದಲಿ ಬಂದಾ ತತ್ವ
ದೇಹಸೂರರೆಲ್ಲರ ಲಯವು ಇಹ
ತತ್ವಾಂತರ್ಗತ ಭಗವದ್ರೂಪಕೆ ||ಆಹಾ||
ಅಲ್ಲಲ್ಲಿ ತಮ್ಮೊಳೈಕ್ಯವೂ-ಆಹಾ
ಅಹಂಕಾರತ್ರಯ ಮಹತ್ತತ್ವದಲ್ಲಿ ಲಯ
ಮಹತ್ತತ್ವವು ಮೂಲಪ್ರಕೃತಿಯಲ್ಲಿ ಲಯವ (೧೪)
ವಾಸುದೇವಾದಿ ಚತುರ ರೂಪ ಮತ್ಸ್ಯ
ಕೇಶವ ವಿಶ್ವಾದಿ ರೂಪ ಅಜಿತ
ಶ್ರೀಶನನಂತಾದಿರೂಪ ಮತ್ತು
ಶ್ರೀಶನಷ್ಟೋತ್ತರ ರೂಪ ||ಆಹಾ||
ತಾ ಸಕಲರೂಪಗಳು ಮೂಲರೂಪದೊಳೈಕ್ಯ
ಶಾಶ್ವತನಾದ ಶ್ರೀ ಸಚ್ಚಿದಾನಂದನ್ನಾ (೧೫)
ಗುಣಮಾನಿ ಶ್ರೀ ಭೂ ದುರ್ಗಾ ಅಂ-
ಭ್ರಣಿ ರೂಪವನ್ನೆ ತಾ ಧರಿಸೀ ಸಂ-
ಪೂರ್ಣನ್ನ ಸಾಮೀಪ್ಯ ಸೇರಿ ಪೂರ್ಣ
ಕಾಮನ್ನ ಎಡಬಿಡದೆ ನೋಡೀ ||ಆಹಾ||
ಕ್ಷಣ ಬಿಡದೊಡೆಯನ ಅಗಣಿತಗುಣಗಳ
ಕಡೆಗಾಣದೆ ನೋಳ್ಪ ನಿತ್ಯಮುಕ್ತಳ ಸಹಿತಾ (೧೬)
ಏಕೋ ನಾರಾಯಣ ಆಸೀತ ಅ-
ನೇಕ ಜನರ ಸಲಹಲಿನ್ನು ತಾನೆ
ಸಾಕಾರದಲಿ ನಿಂದಿಹನು ಇಂತು
ವೇಂಕಟಾಚಲದಲ್ಲಿ ಇನ್ನು ಮುನ್ನು ||ಆಹಾ||
ಏಕಮನಸಿನಿಂದ ಭಜಿಪ ಭಕ್ತರನ ತಾ ನಿ-
ರಾಕರಿಸದೆ ಕಾಯ್ವ ಶ್ರೀ ವೇಂಕಟೇಶಾ ನಿತ್ಯ (೧೭)
uragAdrivAsaviThaladAsara laya prakaraNa ||
dhEniso SrIhariya mahimeya ||pa||
dhEnisu layada vistAra caturA
nAnakalpada vivarA ||AhA||
dhEnise SatAnaMdage Sata-
mAnakAladalli iddu naDesuva harikArya ||a.pa ||
modalardha SatamAna sUkShma sRuShTi
padumava tOrida mahAmahima Aga
ade prathama parArdhavu nEma mEle
dvitIya BAgakkella brahma ||AhA||
adaroLu tridaSa ELardha varuShavu
padumajaniMda rAjyavanALisida pariyanu (1)
dvAdaSArdhavaruSha tA uLiye Aga
tOrda aduBUtavAda mahApraLaya sUca-
nAdi kAryavu tA mereye Sata
abda anAvRuShTi tOrire AhA||
padumajAMDadoLiha prajegaLa saMhAra
udadhi SOShaNeyiMda sarvasaMhArava (2)
mEruparvata sthaLadalli idda vi-
dhirudrAdigaLellaralli maha
narasiMha AnaMdadiMdali AnaMda
tOrutta kuNidADutali ||AhA||
haruShOdrEkadiMda saMgaDa kuNiyuva
suraravayavagaLa tAnalaMkarisidana (3)
narahari nartana mADi tanna
karadi triSUlavanu nIDi di-
kkarigaLa pONisi ADi sarvara u-
daradOLiTTu kUDi ||AhA||
paripari naTisuva niTilanEtrana grAsa
tvaritadi tA mADi krIDisutirpanna (4)
vAyudEvara gadAprahAradiMda
Baya huMkAradiMda jIvara liMga
kAya BaMgagaidavarA avara
Ayata sthaLadalliTTavarA ||AhA||
layakAladi saMkaruShaNana muKadiMda
layavAgalu agni poraTu dahipudA (5)
kariya soMDilinaMte maLeyu dhAre
niruta SatavarShagareye nODe
sarvatra jalamayavAge Aga
nIrajAMDavella karage ||AhA||
garuDa SESha mArgavaritu barutirpa
sarvajIvara tanna udaradoLiTTannA (6)
ariyO nI SEShamArgavannU illi
suraru kubEranoLinnu Ata
varuNanalli layavannU caMdra
haripArShadharaniruddhanannu AhA
aniruddha sanatkumAranna tAvu poMdi
mAra vAruNiyu harimaDadiyaralli layavannu (7)
KagapanoLavaSiShTa suraru modalu
agniyoL layavannaiduvaru A
agni tA sUryanna sEruvanu sUrya
tA guruvanna sEruvanu ||AhA||
AgalE sarva manujaru pitRugaLu
niraRutiyoLu pokku tA yamanalli sEruvA (8)
yama priyavratarAyarella laya
tamma svAyaMBu manuvinalli matte ma-
hima BRuguvu dakShanalli layavu
A mahAdakSha svAyaMBu iMdranallI-AhA
amarapatiyu tA sauparaNiyanu poMdi
I mArgadi tAnu garuDanna sEruvuda (9)
SEShagaruDaroDagUDi Aga
sarasvatiyanne poMduvaru matte
AsuviriMci vAyugaLu tAvu
sarasvatiyanne poMduvaru ||AhA||
I sarasvati kAlabrahmanna sEruva
I sUkShmalayavanne kramavaritu nInIga (10)
sUtranAmaka vAyudEva rudra
umepradyumnadvAra trAta
saMkuruShaNanA dayadi jaga-
nmAte lakShmiyoLu sEruvaru ||AhA||
caturAsya jIvara tannudaradoLiTTu
atimOdadiMda virATannaiduvuda (11)
virAT brahmanu tAnellA tanna A
varaNadalli ippaMtha tanna
dhareyalli lInavAguta Aga
paripariyiMda tanmAtra ||AhA||
aritu SabdasparSarUparasagaMdha
paripariyiMdali layavannaiduvudA (12)
gaMdhadvAra layatanna biladi jAta
vEdadalli rasa layavu rUpa
dadvAra laya vAyuvinoLu sparSada
dvAra laya AkASadoLu-AhA-
SabdadvAra layatama ahaMkArAdi
tadAMtargataÀ BagavadrUpadallyekyavA (13)
ahaMkAratrayadali baMdA tatva
dEhasUrarellara layavu iha
tatvAMtargata BagavadrUpake ||AhA||
allalli tammoLaikyavU-AhA
ahaMkAratraya mahattatvadalli laya
mahattatvavu mUlaprakRutiyalli layava (14)
vAsudEvAdi catura rUpa matsya
kESava viSvAdi rUpa ajita
SrISananaMtAdirUpa mattu
SrISanaShTOttara rUpa ||AhA||
tA sakalarUpagaLu mUlarUpadoLaikya
SASvatanAda SrI saccidAnaMdannA (15)
guNamAni SrI BU durgA aM-
BraNi rUpavanne tA dharisI saM-
pUrNanna sAmIpya sEri pUrNa
kAmanna eDabiDade nODI ||AhA||
kShaNa biDadoDeyana agaNitaguNagaLa
kaDegANade nOLpa nityamuktaLa sahitA (16)
EkO nArAyaNa AsIta a-
nEka janara salahalinnu tAne
sAkAradali niMdihanu iMtu
vEMkaTAcaladalli innu munnu ||AhA||
EkamanasiniMda Bajipa Baktarana tA ni-
rAkarisade kAyva SrI vEMkaTESA nitya (17)
Leave a Reply