Jaya jaya jaya munindra

Composer : Shri Prasannavenkata dasaru

By Smt.Shubhalakshmi Rao

ಜಯ ಜಯ ಜಯಮುನೀಂದ್ರಾ
ಮಾಯಿಗಳಳಿದ ಮರುತಮತ ಚಂದ್ರಾ [ಪ]

ನಿನ್ನನುಪೇಕ್ಷಿಸಿದ ಅನ್ಯಮತದ ಮುನಿ |
ಘನ ವಿದ್ಯೆಗಳ ಅರಣ್ಯನ ಗೆಲಿದಿ ||
ಸನ್ನುತ ಸರ್ವಜ್ಞರಾಯರ ದಯದಿ |
ಉನ್ನತ ಸುಧೆ ಉಣಬಡಿಸಿದಿ ಸುಜನಕೆ [೧]

ತತ್ವವಾದ ಮತ ಸತ್ವ ಸುಧಾರಸ ||
ಭೃತ್ಯರಿಗುಣಿಸಿದ ಸತ್ಕವೀಂದರ ನೀ ||
ಎತ್ತಾಗಿರುತಾ ಮರುತರ ಮಾತನು |
ಚಿತ್ತವಿಟ್ಟು ವಿಸ್ತರಿಸಿದ ಮುನಿ ನೀ [೨]

ದ್ವಾಸುಪರ್ಣ ಮಹಾ ತತ್ವಮಸಿ ಸತ್ಯ |
ಲೇಸಾಗರುಹಿದ ಶೇಷಾವೇಶಿತನು ನೀ- ಶ್ರೀಶಾ
ಶ್ರೀಪ್ರಸನ್ವೆಂಟಕ ಗುಣಾಕಥಾ
ನಿಶಿತಮತರ ಸಾಕಲ್ಯದಿ ಸಾರಿದ
ಜಯಮುನೀಂದ್ರ ಯತಿಚಂದ್ರ [೩]


jaya jaya jayamunIMdrA
mAyigaLaLida marutamata caMdrA [pa]

ninnanupEkShisida anyamatada muni |
Gana vidyegaLa araNyana gelidi ||
sannuta sarvaj~jarAyara dayadi |
unnata sudhe uNabaDisidi sujanake [1]

tatvavAda mata satva sudhArasa ||
BRutyariguNisida satkavIMdara nI ||
ettAgirutA marutara mAtanu |
cittaviTTu vistarisida muni nI [2]

dvAsuparNa mahA tatvamasi satya |
lEsAgaruhida SEShAvESitanu nI- SrISA
SrIprasanveMTaka guNAkathA
niSitamatara sAkalyadi sArida
jayamunIMdra yaticaMdra [3]

Leave a Reply

Your email address will not be published. Required fields are marked *

You might also like

error: Content is protected !!