Jayatirtha Stotra Suladi – Vijayadasaru

By Smt.Nandini Sripad , Blore.

ಶ್ರೀ ವಿಜಯದಾಸಾರ್ಯ ವಿರಚಿತ
ಶ್ರೀ ಜಯತೀರ್ಥರ ಸ್ತೋತ್ರ ಸುಳಾದಿ
ರಾಗ: ಕಲ್ಯಾಣಿ

ಧ್ರುವತಾಳ
ಜಯರಾಯ ಜಯರಾಯ ಜಯದೇವಿ ಅರಸನ್ನಾ –
ಶ್ರಯಮಾಡಿಕೊಂಡಿಪ್ಪ ತಪೋವಿತ್ತಪ
ಭಯವ ಪರಿಹರಿಸಿ ಭವದೂರರ ಮಾಡಿ ಹರಿಭ –
ಕ್ತಿಯ ಕೊಡು ಜ್ಞಾನ ವೈರಾಗ್ಯದೊಡನೆ
ದಯ ದೃಷ್ಟಿಯಿಂದ ನೋಡು ಕಾಪಾಡು ಮಾತಾಡು
ಲಯ ವಿವರ್ಜಿತವಾದ ವೈಕುಂಠಕೆ
ಸ್ವಯವಾಗಿ ಮಾರ್ಗ ತೋರು ಸಜ್ಜನರೊಳಗಿಟ್ಟು
ಜಯವ ಪಾಲಿಸು ಎನಗೆ ಯತಿಕುಲರನ್ನ
ಅಯುತಕ್ಕಾದರು ನಾನು ಐಹಿಕ ಸೌಖ್ಯವನೊಲ್ಲೆ
ಬಯಸುವೆ ಸತತದಲ್ಲಿ ಹರಿಯ ನಾಮ –
ತ್ರಯಗಳೆ ನಾಲಿಗೆಲಿ ನೆನೆದು ನೆನೆದು ಕರ್ಮ
ಕ್ಷಯವಾಗುವಂತೆ ಕ್ಷಿಪ್ರದಲ್ಲಿ ಬಿಡದೆ
ಪ್ರಯತ್ನವೆಂಬೋದಿದಕೆ ಸಾರ್ಥಕವಾಗಲಿ
ಪಯೋನಿಧೆ ಸುತೆರಮಣ ಮನದೊಳು ನಿಲ್ಲಲು
ಪಯಃಪಾನದಿಂದಧಿಕ ನಿಮ್ಮ ದರುಶನ ಎನಗೆ
ಪ್ರಿಯ ಮತ್ತೊಂದಾವದಿಲ್ಲ ಇದೇ ಬಲು ಲಾಭ
ಗಯ ಕಾಶಿ ತ್ರಿಸಂಗಮ ಮೊದಲಾದ ತೀರ್ಥ ಕ್ಷೇತ್ರ
ನಯದಿಂದ ಮಾಡಿದ ಫಲಬಪ್ಪುದು
ಪಯೋಧರಗಳ ತಿನದಂತೆ ಮಾಳ್ಪುದು ಹೃ –
ದಯದೊಳಗಿಪ್ಪದೆನೆಗೆ ಇದೇ ಏಕಾಂತ
ಭಯ ಕೃದ್ಭಯನಾಶ ವಿಜಯವಿಠ್ಠಲನ ಸೇ –
ವೆಯ ಮಾಡುವ ಸದ್ಗುಣ ಶೀಲ ಸುಜನ ಪಾಲಾ || ೧ ||

ಮಟ್ಟತಾಳ
ಆವ ಜನುಮದ ಪುಣ್ಯ ಫಲಿಸಿತು ಎನಗಿಂದು
ರಾವುತನಾಗಿದ್ದ ಜಯತೀರ್ಥರ ಕಂಡೆ
ದೇವಾಂಶರು ಇವರ ಸ್ವರೂಪವನ್ನು
ಭಾವದಿಂದಲಿ ತಿಳಿದು ಕೊಂಡಾಡುವ ಬಲು ಧನ್ಯ
ಪಾವಿನ ಪರಿಯಲ್ಲಿ ಇಲ್ಲಿ ಇರುತಿಪ್ಪ
ಕಾವುತ ಭಕುತರ ಪಾವನಗೈಸುವ
ದೇವ ದೇವೇಶ ಸಿರಿ ವಿಜಯವಿಠ್ಠಲನಂಘ್ರಿ
ತಾವರೆ ಭಜಿಸುವ ನಿಷ್ಕಾಮುಕ ಮೌನಿ || ೨ ||

ತ್ರಿವಿಡಿತಾಳ
ವೈಷ್ಣವ ಜನ್ಮ ಬಂದುದಕಿದೇ ಸಾಧನ
ವಿಷ್ಣುವಿನ ಭಕುತಿ ದೊರಕಿದುದಕೆ
ನಷ್ಟವಾಯಿತು ಎನ್ನ ಸಂಚಿತಾಗಾಮಿ ಕರ್ಮ
ಕಷ್ಟ ದಾರಿದ್ರಗಳು ಹಿಂದಾದವೋ
ತುಷ್ಟನಾದೆನು ಎನ್ನ ಕುಲಕೋಟಿ ಸಹಿತ ಅ –
ರಿಷ್ಟ ಮಾರ್ಗಕೆ ಇನ್ನು ಪೋಗೆ ನಾನು
ಸೃಷ್ಟಿಯೊಳಗೆ ಇವರ ದರ್ಶನವಾಗದಲೆ
ಸೃಷ್ಟವಾದ ಜ್ಞಾನ ಪುಟ್ಟದಯ್ಯಾ
ಇಷ್ಟು ಕಾಲ ಬಿಡದೆ ಮುಂದೆ ಮಾಡುವ ಬಲು
ನಿಷ್ಟಗೆ ಅನುಕೂಲ ತಾತ್ವಿಕರು
ಶಿಷ್ಟಾಚಾರವನ್ನು ಮೀರದಲೆ ನಿಮ್ಮ
ಇಷ್ಟಾರ್ಥ ಬಯಸುವುದು ಉಚಿತದಲ್ಲಿ
ವೈಷ್ಣವಾಚಾರ್ಯರ ಮತ ಉದ್ಧಾರ ಕರ್ತ
ಭ್ರಷ್ಟವಾದಿಗಳನ್ನು ನುಗ್ಗಲೊತ್ತಿ
ಕೃಷ್ಣೆವಂದಿತ ನಮ್ಮ ವಿಜಯವಿಠ್ಠಲರೇಯನ
ಅಷ್ಟಕತೃತ್ವ ಸ್ಥಾಪಿಸಿದ ಧೀರಾ || ೩ ||

ಅಟ್ಟತಾಳ
ಕುಶರಾಯ ಇಲ್ಲಿ ತಪಸು ಮಾಡಿದಂಥ
ವಸತಿಯ ನೋಡಿ ದಿಗ್ದೇಶ ಜಯಿಸಿ ಮಾ –
ನಸದಲ್ಲಿ ತಿಳಿದು ಅಕ್ಷೋಭ್ಯತೀರ್ಥರು ಇಲ್ಲಿ
ನಸುನಗುತಲೆ ವಾಸವಾದರು ಬಿಡದಲೆ
ಋಷಿ ಕುಲೋತ್ತಮರಾದ ಜಯರಾಯರು ನಿತ್ಯ
ಬೆಸನೆ ಬೆಸನೆ ಬಂದು ಗುಪ್ತದಲ್ಲಿ ಪೂ –
ಜಿಸುವರು ಪ್ರೀತಿಲೆ ಏನೆಂಬೆನಾಶ್ಚರ್ಯ
ಶಶಿ ವರ್ಣದಂತೆ ಪೊಳೆವ ದರುಶನ ಗ್ರಂಥ
ರಸ ಪೂರಿತವಾಗಿ ವಿಸ್ತರಿಸಿದರು ವಿ –
ಕಸಿತವ ಮಾಡಿ ಕರದ ಕನ್ನಡಿಯಂತೆ
ಕುಶಲ ಮಾನವರಿಗೆ ಜ್ಞಾನ ಹೆಚ್ಚುವಂತೆ
ವಸುಧೆಯೊಳಗೆ ನಮ್ಮ ವಿಜಯವಿಠ್ಠಲರೇಯ
ವಶವಾಗುವುದಕ್ಕೆ ಪ್ರಸಾದ ಮಾಡಿದರು || ೪ ||

ಆದಿತಾಳ
ಈ ಮುನಿ ಒಲಿದರೆ ಅವನೆ ಭಾಗ್ಯವಂತ
ಭೂಮಿಯೊಳಗೆ ಮುಕ್ತಿ ಯೋಗ್ಯನೆನಿಸುವನು
ಭೀಮ ಭವಾಂಬುಧಿ ಬತ್ತಿ ಪೋಗುವುದು ನಿ –
ಸ್ಸೀಮನಾಗುವ ಪಂಚಭೇದಾರ್ಥ ಪ್ರಮೇಯದಲ್ಲಿ
ತಾಮಸ ಜನರಿಗೆ ಭಕ್ತಿ ಪುಟ್ಟದು ದುಃ –
ಖ ಮಹೋದಧಿಯೊಳು ಸೂಸುತಲಿಪ್ಪರು
ಸ್ವಾಮಿ ಈಗಲೆ ಬಂದು ದುರುಳ ಮನುಜನ ನೋಡಿ
ನಾ ಮೊರೆ ಇಡುವೆನು ಕಾಯೊ ಕರುಣದಲ್ಲಿ
ಯಾಮ ಯಾಮಕೆ ನಿಮ್ಮ ಸ್ಮರಣೆ ಪಾಲಿಸಿ ಉ –
ತ್ತಮ ಬುದ್ಧಿಕೊಟ್ಟು ಕೃತಾರ್ಥನ್ನ ಮಾಡು
ರಾಮ ಸುಗುಣಧಾಮ ವಿಜಯವಿಠ್ಠರೇಯನ್ನ
ನಾಮ ಕೊಂಡಾಡುವ ಟೀಕಾಚಾರ್ಯ || ೫ ||

ಜತೆ
ಮೇಘನಾಥಪುರ ಕಕುರ ವೇಣಿವಾಸ
ರಾಘವೇಶ ವಿಜಯವಿಠ್ಠಲನ್ನ ನಿಜದಾಸ ||೬||


SrI vijayadAsArya viracita
SrI jayatIrthara stOtra suLAdi
rAga: kalyANi

dhruvatALa
jayarAya jayarAya jayadEvi arasannA –
SrayamADikoMDippa tapOvittapa
Bayava pariharisi BavadUrara mADi hariBa –
ktiya koDu j~jAna vairAgyadoDane
daya dRuShTiyiMda nODu kApADu mAtADu
laya vivarjitavAda vaikuMThake
svayavAgi mArga tOru sajjanaroLagiTTu
jayava pAlisu enage yatikularanna
ayutakkAdaru nAnu aihika sauKyavanolle
bayasuve satatadalli hariya nAma –
trayagaLe nAligeli nenedu nenedu karma
kShayavAguvaMte kShipradalli biDade
prayatnaveMbOdidake sArthakavAgali
payOnidhe suteramaNa manadoLu nillalu
payaHpAnadiMdadhika nimma daruSana enage
priya mattoMdAvadilla idE balu lABa
gaya kASi trisaMgama modalAda tIrtha kShEtra
nayadiMda mADida Palabappudu
payOdharagaLa tinadaMte mALpudu hRu –
dayadoLagippadenege idE EkAMta
Baya kRudBayanASa vijayaviThThalana sE –
veya mADuva sadguNa SIla sujana pAlA || 1 ||

maTTatALa
Ava janumada puNya Palisitu enagiMdu
rAvutanAgidda jayatIrthara kaMDe
dEvAMSaru ivara svarUpavannu
BAvadiMdali tiLidu koMDADuva balu dhanya
pAvina pariyalli illi irutippa
kAvuta Bakutara pAvanagaisuva
dEva dEvESa siri vijayaviThThalanaMGri
tAvare Bajisuva niShkAmuka mauni || 2 ||

triviDitALa
vaiShNava janma baMdudakidE sAdhana
viShNuvina Bakuti dorakidudake
naShTavAyitu enna saMcitAgAmi karma
kaShTa dAridragaLu hiMdAdavO
tuShTanAdenu enna kulakOTi sahita a –
riShTa mArgake innu pOge nAnu
sRuShTiyoLage ivara darSanavAgadale
sRuShTavAda j~jAna puTTadayyA
iShTu kAla biDade muMde mADuva balu
niShTage anukUla tAtvikaru
SiShTAcAravannu mIradale nimma
iShTArtha bayasuvudu ucitadalli
vaiShNavAcAryara mata uddhAra karta
BraShTavAdigaLannu nuggalotti
kRuShNevaMdita namma vijayaviThThalarEyana
aShTakatRutva sthApisida dhIrA || 3 ||

aTTatALa
kuSarAya illi tapasu mADidaMtha
vasatiya nODi digdESa jayisi mA –
nasadalli tiLidu akShOByatIrtharu illi
nasunagutale vAsavAdaru biDadale
RuShi kulOttamarAda jayarAyaru nitya
besane besane baMdu guptadalli pU –
jisuvaru prItile EneMbenAScarya
SaSi varNadaMte poLeva daruSana graMtha
rasa pUritavAgi vistarisidaru vi –
kasitava mADi karada kannaDiyaMte
kuSala mAnavarige j~jAna heccuvaMte
vasudheyoLage namma vijayaviThThalarEya
vaSavAguvudakke prasAda mADidaru || 4 ||

AditALa
I muni olidare avane BAgyavaMta
BUmiyoLage mukti yOgyanenisuvanu
BIma BavAMbudhi batti pOguvudu ni –
ssImanAguva paMcaBEdArtha pramEyadalli
tAmasa janarige Bakti puTTadu duH –
Ka mahOdadhiyoLu sUsutalipparu
svAmi Igale baMdu duruLa manujana nODi
nA more iDuvenu kAyo karuNadalli
yAma yAmake nimma smaraNe pAlisi u –
ttama buddhikoTTu kRutArthanna mADu
rAma suguNadhAma vijayaviThTharEyanna
nAma koMDADuva TIkAcArya || 5 ||

jate
mEGanAthapura kakura vENivAsa
rAGavESa vijayaviThThalanna nijadAsa ||6||

Leave a Reply

Your email address will not be published. Required fields are marked *

You might also like

error: Content is protected !!