Composer : Shri Jayesha vittala
ಬುದ್ಧಿಮಾನಿಯೆ ಎನ್ನ ಉದ್ಧರಿಸು ತಾಯೆ [ಪ]
ಶ್ರದ್ಧಾದೇವಿ ನಿನ್ನ ಕೃಪೆಯಾಗೆ ಹರಿ ನಲಿವ [ಅ.ಪ.]
ಮಧ್ವಮುನಿ ಮನದೈವನತಿ ಮುದ್ದು ಪರಿಸರಳೆ
ವಿದ್ಯಾ ಅಸಾದ್ಯ ಕರುಣಾಬ್ಧಿ ದೇವಿ
ಪ್ರಧ್ವಂಸ ಮಾಡು ಮಮ ಹೃದ್ರೋಗ ಮೂಲ ಪ್ರ
ಬುದ್ಧರಲಿ ಪದವಿತ್ತು ಉದ್ಧಾರ ನೀ ವಹಿಸು [೧]
ನಿನ್ನ ಕೃಪೆಯಮೃತ ರಸವಿನ್ನು ದೊರೆಯಲು ನಾವು
ಧನ್ಯ ಧನ್ಯರು ಮಾತೆ ಭಕ್ತಿಮೂರ್ತೆ
ಪನ್ನಗ ವಿಧಿ ರುದ್ರಸೇವ್ಯ ಪದ ಪುಷ್ಕರಳೆ
ಪುಣ್ಯ ಪುರುಷ ಸಮೀರ ಸಂತ ಸಂಸ್ತುತೆ ಪಾಹಿ [೨]
ನೀನೊಲಿಯದ ಜೀವ ಏನು ಸಾಧನೆ ಮಾಡೆ
ಪ್ರಾಣವಿಲ್ಲದ ದೇಹ ಶೃಂಗರಿಸಿದಂತೆ
ವಾನರ ಪ್ರತಿಬಿಂಬ ಜಯೇಶವಿಠಲ
ತಾನೊಲಿಯ ಅವಗೆಂದು ನಿನ್ನವರ ಕರವಶನು [೩]
buddhimAniye enna uddharisu tAye [pa]
SraddhAdEvi ninna kRupeyAge hari naliva [a.pa.]
madhvamuni manadaivanati muddu parisaraLe
vidyA asAdya karuNAbdhi dEvi
pradhvaMsa mADu mama hRudrOga mUla pra
buddharali padavittu uddhAra nI vahisu [1]
ninna kRupeyamRuta rasavinnu doreyalu nAvu
dhanya dhanyaru mAte BaktimUrte
pannaga vidhi rudrasEvya pada puShkaraLe
puNya puruSha samIra saMta saMstute pAhi [2]
nInoliyada jIva Enu sAdhane mADe
prANavillada dEha SRuMgarisidaMte
vAnara pratibiMba jayESaviThala
tAnoliya avageMdu ninnavara karavaSanu [3]
Leave a Reply