ಶ್ರೀ ಮೋಹನ ದಾಸಾರ್ಯ ವಿರಚಿತ
ಸಾಧನಾ ವಿಚಾರ ಸುಳಾದಿ
ರಾಗ: ಕಾನಡ
ಧ್ರುವತಾಳ
ಹರಿದಾಸನು ನಾನಲ್ಲ ಹರಿ ಭಕುತಿ ಎನಗಿಲ್ಲ
ಧರೆಯೊಳು ಒಂದು ವೇಷವ ಧರಿಸಿ ತಿರುಗುವೆನು ನಾನು
ತರುಣಿ ಮಕ್ಕಳು ಸಹೋದರ ಮೊದಲಾದವರ
ಪೊರೆವೆನೆನುತ ಡಂಭ ವಿರಚಿಸಿ ಶರಣ ನೆಂತೆಂದು
ಕರೆಸಿಕೊಂಬೆನೊ ಬಹಿರದಲ್ಲಿ ಅನ್ಯರಿಂದಲೆ
ಸಿರಿ ಪತಿ ನಿನ್ನ ಪಾದ ಸ್ಮರಿಸದಲೆ
ಪರಮ ದಯಾಳು ಮೋಹನ್ನವಿಠ್ಠಲ ರೇಯಾ
ಕರಣ ಶುದ್ಧನಾಗದೆ ತಿರುಗಿದೆ ಪೊಟ್ಟಿಗಾಗಿ || ೧ ||
ಮಟ್ಟತಾಳ
ದೇಶ ದೇಶಕೆ ಧನದ ಆಶೆಗಾಗಿ ಪೋಗಿ
ಕಾಶಿಗ್ಹೋಗುವೆನೆಂದು ಕಾಸು ಹಣವ ತಂದು
ಈ ಸಂಸಾರಕ್ಕೆ ನಾ ಸಮರ್ಪಿಸಿ
ತೋಷ ಪಡುವೆ ದುರಿತ ರಾಸಿ ಯಂದರಿಯದಲೆ
ಭೂ ಸುರರು ಎನ್ನ ವಾಸದಲ್ಲಿಗೆ ಬರಲು
ಗ್ರಾಸವೀಯದೆ ಅಪಹಾಸ ಮಾಡುವೇನು
ದೋಷ ವರ್ಜಿತ ನಮ್ಮ ಮೋಹನವಿಠ್ಠಲ
ಘಾಸಿಯಾದೆನೊ ಯಮ ಪಾಶಕ್ಕೆ ಗುರಿಯಾಗಿ || ೨ ||
ತ್ರಿವಿಡಿತಾಳ
ವಿತ್ತವಿದ್ದವನ ಮನಿಯೊಳು ಪೋಗಿ ಕುಳಿತು ಬಲು
ಉತ್ತಮನೆಂದವನ ಸ್ತೋತ್ರವ ಮಾಡಿ
ಹತ್ತೆಂಟು ಪುಸಿ ವಾರ್ತೆ ಪೇಳೆ ಅವನು ಈ
ಹೊತ್ತು ಬನ್ನಿರಿ ಎನ್ನೆ ಹರುಷದಿಂದ
ಹತ್ತೈದು ದೇವತಾರ್ಚನೆಯ ಸಾಮಗ್ರೀಯ
ತತ್ಥಳಿಸುವಂತೆ ವಿರಚಿಸುವೆ
ಸುತ್ತ ಧೂಪ ದೀಪವೆತ್ತಿ ನೈವೇದ್ಯವ
ಹತ್ತಿಲಿರಿಸಿಕೊಂಡು ಮುಸುಕು ಇಟ್ಟು
ಚಿತ್ತ ಶುದ್ಧಿಯಿಲ್ಲದಲೆ ಬಹಿರದಲ್ಲಿ ಕರ
ವೆತ್ತಿ ಪಿಟಿ ಪಿಟಿ ಎಂದು ತುತಿಸುವೆನೊ
ಮತ್ತೇನು ಮಂತ್ರ ತಂತ್ರವು ಬಾರದೆನ್ನೆ
ಹತ್ತೀಲಿ ಸೇರಲೀಸೆನೋ ಸ್ವೋತ್ತುಮರ
ಎತ್ತ ನೋಡಲು ಎನ್ನ ಹತ್ತಿಲಿ ಹೊದ್ದಿದವರು
ಮುತ್ತಿಕೊಂಡು ಕಾಗೆ ಬಳಗದಂತೆ
ಚಿತ್ತಜನಯ್ಯಾ ಮೋಹನವಿಠ್ಠಲ ನಿನ್ನ
ಭೃತ್ಯನೆನಿಸಿ ಸ್ವಸ್ಥ ಚಿತ್ತದಿಂದಿರದ್ಹೋದೆ || ೩ ||
ಅಟ್ಟತಾಳ
ಕಾಮ ಕ್ರೋಧ ಲೋಭ ಮದ ಮತ್ಸರಂಗಳು
ರೋಮ ರೋಮ ಕೂಪದೊಳು ತುಂಬಿಕೊಂಡು
ಭೂಮಿ ಸುರದೇಹ ಬಂದೀಹದೆಂತೆಂಬ
ಈ ಮಹಾ ಗರ್ವದಿಂದಾಡುವೆ ಸುಜನರ
ಶ್ರೀ ಮನೋಹರ ನಿನ್ನ ತಾಮರಸಾಂಘ್ರಿ
ನಿಷ್ಕಾಮದಿಂದಲಿ ಭಜಿಸಿ ಮರೆ ಪೋಗಲಿಲ್ಲವೊ
ಭೂಮಿ ಭಾರಕನಾಗಿ ತನುವ ಪೊರೆದೆ ನಿನ್ನ
ನಾಮಾಮೃತವನು ಪ್ರೇಮದಿ ಸವಿಯದೆ
ಸಾಮಜವರದ ಮೋಹನ್ನವಿಠ್ಠಲ ಅ
ನಾಮಧೇಯನಾದೆ ಪಾಮರರೊಡಗೂಡಿ || ೪ ||
ಆದಿತಾಳ
ಅನ್ಯರ ಪದಾರ್ಥವ ತಂದು ನಿನ್ನ ಮುಂದೆ ಸಮರ್ಪಿಸಲು
ಎನಗೇನು ಬರುವದೊ ಬಲು ಪುಣ್ಯ ಅದರಿಂದ
ತನ್ನ ಕರದಿಂದಲಿ ಉದಕವನ್ನು ತಂದು ತುಲಸಿಯಿಂದ
ನಿನ್ನ ಪೂಜೆ ಮಾಡಲು ಪ್ರಸನ್ನನಾಗಿ ಪಾಲಿಸುವಿ
ಮುನ್ನೆ ಒಬ್ಬ ಕುಚೇಲಂಗೆ ಮನ್ನಿಸಿ ಪದವಿಯನಿತ್ತೆ
ನಿನ್ನ ಮಹಿಮೆ ಎಣಿಪರಾರೊ
ಘನ್ನ ಮಹಿಮ ಮೋಹನ್ನವಿಠ್ಠಲರೇಯಾ
ಅನ್ಯರಲಿ ಪೋಗಿ ಪಾಪಕೊಂಡು ಬರುವೆನೊ || ೫ ||
ಜತೆ
ಕೆರೆ ನೀರು ಕೆರೆಗೆ ಚೆಲ್ಲಿ ವರಗಳು ಪಡೆದಂತೆ
ಕರುಣಾಳು ಮೋಹನ್ನವಿಠ್ಠಲ ನರ್ಚಿಸು ಮನವೆ ||೬||
SrI mOhana dAsArya viracita
sAdhanA vicAra suLAdi
rAga: kAnaDa
dhruvatALa
haridAsanu nAnalla hari Bakuti enagilla
dhareyoLu oMdu vEShava dharisi tiruguvenu nAnu
taruNi makkaLu sahOdara modalAdavara
porevenenuta DaMBa viracisi SaraNa neMteMdu
karesikoMbeno bahiradalli anyariMdale
siri pati ninna pAda smarisadale
parama dayALu mOhannaviThThala rEyA
karaNa SuddhanAgade tirugide poTTigAgi || 1 ||
maTTatALa
dESa dESake dhanada ASegAgi pOgi
kASig~hOguveneMdu kAsu haNava taMdu
I saMsArakke nA samarpisi
tOSha paDuve durita rAsi yaMdariyadale
BU suraru enna vAsadallige baralu
grAsavIyade apahAsa mADuvEnu
dOSha varjita namma mOhanaviThThala
GAsiyAdeno yama pASakke guriyAgi || 2 ||
triviDitALa
vittaviddavana maniyoLu pOgi kuLitu balu
uttamaneMdavana stOtrava mADi
hatteMTu pusi vArte pELe avanu I
hottu banniri enne haruShadiMda
hattaidu dEvatArcaneya sAmagrIya
tatthaLisuvaMte viracisuve
sutta dhUpa dIpavetti naivEdyava
hattilirisikoMDu musuku iTTu
citta Suddhiyilladale bahiradalli kara
vetti piTi piTi eMdu tutisuveno
mattEnu maMtra taMtravu bAradenne
hattIli sEralIsenO svOttumara
etta nODalu enna hattili hoddidavaru
muttikoMDu kAge baLagadaMte
cittajanayyA mOhanaviThThala ninna
BRutyanenisi svastha cittadiMdirad~hOde || 3 ||
aTTatALa
kAma krOdha lOBa mada matsaraMgaLu
rOma rOma kUpadoLu tuMbikoMDu
BUmi suradEha baMdIhadeMteMba
I mahA garvadiMdADuve sujanara
SrI manOhara ninna tAmarasAMGri
niShkAmadiMdali Bajisi mare pOgalillavo
BUmi BArakanAgi tanuva porede ninna
nAmAmRutavanu prEmadi saviyade
sAmajavarada mOhannaviThThala a
nAmadhEyanAde pAmararoDagUDi || 4 ||
AditALa
anyara padArthava taMdu ninna muMde samarpisalu
enagEnu baruvado balu puNya adariMda
tanna karadiMdali udakavannu taMdu tulasiyiMda
ninna pUje mADalu prasannanAgi pAlisuvi
munne obba kucElaMge mannisi padaviyanitte
ninna mahime eNiparAro
Ganna mahima mOhannaviThThalarEyA
anyarali pOgi pApakoMDu baruveno || 5 ||
jate
kere nIru kerege celli varagaLu paDedaMte
karuNALu mOhannaviThThala narcisu manave ||6||
Leave a Reply