Haripada Prarthane Suladi – Mohana dasaru

By Smt.Nandini Sripad,Blore.

ಶ್ರೀ ಮೋಹನದಾಸಾರ್ಯ ವಿರಚಿತ
ಶ್ರೀಹರಿಪಾದ ಪ್ರಾರ್ಥನಾ ಸುಳಾದಿ
( ಇಂದ್ರಿಯಗಳ ದುರ್ವ್ಯಾಪಾರ ಬಿಡಿಸಿ ,
ಹರಿಪಾದದಿ ರತಿ ಕೊಡಲು ಪ್ರಾರ್ಥನೆ )
ರಾಗ: ಕಾಂಬೋಧಿ

ಧ್ರುವತಾಳ

ಶ್ರೋತುರ ನಿನ್ನ ಕತೆ ಕೇಳಲೊಲ್ಲದು ಪರ –
ಮಾತುರದಿಂದ ದುರ್ವಾರ್ತಿ ಕೇಳುತಲಿದೆ
ನೇತುರ ನಿನ್ನ ಮೂರ್ತಿಯ ನೋಡದಲೆ ಗಾಡಿ –
ಕಾರ್ತಿಯರನು ಮನದಣಿಯ ನೋಡುತಲಿದೆ
ಗಾತುರ ನಿನ್ನ ದಾಸರನಪ್ಪದೆ ಕಾ –
ಮಾತುರದಿಂದ ಕಂಡವರನಪ್ಪುತಲಿದೆ
ಪೂತ ಪದಾರ್ಥವ ಭುಂಜಿಸದಲೆ ಜಿಂಹ್ವೆ
ಪಾತಕರ ದುಷ್ಟನ್ನ ಕೊಳುತಲಿದೆ
ಶ್ರೀತುಳಸೀ ಆಘ್ರಾಣಿಸದಲೆ ಮೂಗು
ಬಾತಿ ಬಸಿದ ಕೂಗಂಧ ಕೋಡುತಲಿದೆ
ಯಾತರಿಂದಲಿ ನಿನ್ನ ಮನಕೆ ಬಪ್ಪೆನೆ ದೇವ
ಕೋತಿ ಕೊರವಂಗೆ ಸಿಲ್ಕಿದಂತಾಯಿತು
ಜ್ಯೋತಿರ್ಮಯ ನಮ್ಮ ಮೋಹನವಿಠ್ಠಲ ಬೆ –
ನ್ನಾತು ಸಲಹದಿರೆ ಗತಿ ಯಾವುದು ಎನಗೆ || ೧ ||

ಮಟ್ಟತಾಳ
ಸಂಸಾರವೆಂತೆಂಬೊ ಸಾಗರದೊಳು ಸಿಲ್ಕಿ
ಹಿಂಸೆ ಬಡುತ ತೇಲಿ ಮುಳುಗುವವನ ಕಂಡು
ಕಂಸಾರಿ ನೀ ಕೈಯ ಆನದಿದ್ದರೆ ಇನ್ನು ಕಡೆ ಹಾಯುವದೆಂತೊ
ಹಂಸವಾಹನನೈಯ್ಯಾ ಮೋಹನ್ನವಿಠ್ಠಲ
ಸಂಶಯವೆಂತೆಂಬೊ ಸುಳಿಯೊಳು ಶಿಲ್ಕಿದನ
ಕಡೆ ಹಾಯುವದೆಂತೊ ಕಡೆ ಹಾಯುವದೆಂತೊ || ೨ ||

ತ್ರಿವಿಡಿತಾಳ

ವಾಕು ನಿನ್ನನು ಕೊಂಡಾಡಲೊಲ್ಲದೆ ಕೆಟ್ಟ
ಕಾಕು ಪೋಕರ ಕೂಡ ಕೆಲದಾಡುತಲಿದೆ
ಬೇಕೆಂದು ನಿನ್ನ ಪೂಜೆಯ ಮಾಡದಲೆ ಪಾಣಿ
ಕೂಕರ್ಮಕೊಳಗಾಗಿ ಭ್ರಷ್ಟ ಮಾಡುತಲಿದೆ
ಶ್ರೀಕಾಂತನ ಯಾತ್ರೆ ಮಾಡಲೊಲ್ಲದು ಪಾದ
ಬೇಕೆಂದು ಧನದಾಶೆಗೆ ತುಕ್ಕುತಲಿದೆ
ನೀ ಕೇಳೊ ಎರಡೈದೇಂದ್ರಿಯ ವ್ಯಾಪಾರ
ವಾಕಾಮಗೋಚರ ವಶವಾಗದು ಎನಗೆ
ಕಾಕೋದರ ಶಾಯಿ ಮೋಹನ್ನವಿಠ್ಠಲ
ನೀ ಕೈಯ್ಯ ಹಿಡಿಯದಿರೆ ಗತಿ ಯಾವುದೆನಗೆ || ೩ ||

ಅಟ್ಟತಾಳ
ಪಂಚ ಜ್ಞಾನೇಂದ್ರಿಯ ಪಂಚ ಕರ್ಮೇಂದ್ರಿಯ
ಪಂಚಭೂತ ಪಂಚ ತನ್ಮಾತ್ರಗಳು ಪ್ರ –
ಪಂಚಕ ಎಳದೊಯ್ದು ಘಾತಿಸುತಲಿವೆ
ಪಂಚಬಾಣನೈಯ್ಯ ಪಂಚಪ್ರಾಣಪ್ರೀಯ
ಪಂಚ ಪಾಂಡವಪಾಲ ಪಾಂಚಾಲಿ ವರದನೆ
ಪಂಚ ರೂಪಾತ್ಮಕ ಮೋಹನವಿಠ್ಠಲ
ಮಿಂಚಿನಂದದಿ ಪೊಳೆಯೋ ದೋಷವ ಕಳೆಯೋ || ೪ ||

ಆದಿತಾಳ

ವೇದಶಾಸ್ತ್ರವ ಸಾಧು ಪುರಾಣ
ಓದಿದವನಲ್ಲ ಕೇಳಿದವನಲ್ಲ
ಮಾಧವನ ಪೂಜಿ ಮಾಡಿದವನಲ್ಲ
ವಾದಿಸುವೆ ಕುತರ್ಕವನು ಮಾಡಿ
ಬೋಧ ಮೂರುತಿ ನಮ್ಮ ಮೋಹನವಿಠ್ಠಲ
ನೀ ದಯದಿ ಕೈ ಪಿಡಿಯದೆಂತೊ || ೫ ||

ಜತೆ
ತನುವೆ ತೀರಲಿ ನಿಚ್ಚಾ ಗುಣವೆ ತೀರಲಿ ಎನ್ನ
ಮನ ನಿನ್ನಂಘ್ರಿಯಲಿಡೊ ಮೋಹನ್ನವಿಠ್ಠಲ ||


SrI mOhanadAsArya viracita
SrIharipAda prArthanA suLAdi
( iMdriyagaLa durvyApAra biDisi ,
haripAdadi rati koDalu prArthane )
rAga: kAMbOdhi

dhruvatALa

SrOtura ninna kate kELalolladu para –
mAturadiMda durvArti kELutalide
nEtura ninna mUrtiya nODadale gADi –
kArtiyaranu manadaNiya nODutalide
gAtura ninna dAsaranappade kA –
mAturadiMda kaMDavaranapputalide
pUta padArthava BuMjisadale jiMhve
pAtakara duShTanna koLutalide
SrItuLasI AGrANisadale mUgu
bAti basida kUgaMdha kODutalide
yAtariMdali ninna manake bappene dEva
kOti koravaMge silkidaMtAyitu
jyOtirmaya namma mOhanaviThThala be –
nnAtu salahadire gati yAvudu enage || 1 ||

maTTatALa
saMsAraveMteMbo sAgaradoLu silki
hiMse baDuta tEli muLuguvavana kaMDu
kaMsAri nI kaiya Anadiddare innu kaDe hAyuvadeMto
haMsavAhananaiyyA mOhannaviThThala
saMSayaveMteMbo suLiyoLu Silkidana
kaDe hAyuvadeMto kaDe hAyuvadeMto || 2 ||

triviDitALa

vAku ninnanu koMDADalollade keTTa
kAku pOkara kUDa keladADutalide
bEkeMdu ninna pUjeya mADadale pANi
kUkarmakoLagAgi BraShTa mADutalide
SrIkAMtana yAtre mADalolladu pAda
bEkeMdu dhanadASege tukkutalide
nI kELo eraDaidEMdriya vyApAra
vAkAmagOcara vaSavAgadu enage
kAkOdara SAyi mOhannaviThThala
nI kaiyya hiDiyadire gati yAvudenage || 3 ||

aTTatALa
paMca j~jAnEMdriya paMca karmEMdriya
paMcaBUta paMca tanmAtragaLu pra –
paMcaka eLadoydu GAtisutalive
paMcabANanaiyya paMcaprANaprIya
paMca pAMDavapAla pAMcAli varadane
paMca rUpAtmaka mOhanaviThThala
miMcinaMdadi poLeyO dOShava kaLeyO || 4 ||

AditALa

vEdaSAstrava sAdhu purANa
Odidavanalla kELidavanalla
mAdhavana pUji mADidavanalla
vAdisuve kutarkavanu mADi
bOdha mUruti namma mOhanaviThThala
nI dayadi kai piDiyadeMto || 5 ||

jate
tanuve tIrali niccA guNave tIrali enna
mana ninnaMGriyaliDo mOhannaviThThala ||

Leave a Reply

Your email address will not be published. Required fields are marked *

You might also like

error: Content is protected !!