Composer : Shri Vijayadasaru
ಕೂಗೆಲೋ ಮನುಜ ಕೂಗೆಲೋ || ಪ ||
ಸಾಗರಶಯನನೆ ಜಗಕೆ ದೈವವೆಂದು || ಅ ಪ ||
ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣ
ಸಚ್ಚಿದಾನಂದೈಕ ಸರ್ವೋತ್ತಮ
ಸಚ್ಚರಿತ ರಂಗ ನಾರಾಯಣ ವೇದ
ಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು ||೧||
ನರಹರಿ ಮುಕುಂದ ನಾರಾಯಣ ದೇವ
ಪರಮ ಪುರುಷ ಹರಿ ಹಯವದನ
ಸಿರಿಧರ ವಾಮನ ದಾಮೋದರ ಗಿರಿ
ಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು || ೨ ||
ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ –
ವರದ ಅಪಾರ ಸದ್ಗುಣನಿಲಯ
ಮುರಮರ್ದನ ಮಂಜುಭಾಷಣ ಕೇಶವ
ನಿರ್ಮಲ ದೇವ ಭೂವರಾಹ ಮೂರುತಿಯೆಂದು || ೩ ||
ನಿಗಮವಂದಿತ ವಾರಿಜನಾಭ ಅನಿರುದ್ಧ
ಅಘನಾಶ ಅಪ್ರಾಕೃತ ಶರೀರ
ಸುಗುಣ ಸಾಕಾರ ಜಗದತ್ಯಂತ ಭಿನ್ನ
ತ್ರಿಗುಣವಂದಿತ ನರಮೃಗ ರೂಪನೆಂದು || ೪ ||
ವಟಪತ್ರಶಯನ ಜಗದಂತರ್ಯಾಮಿ
ಕಟಕ ಮುತ್ತಿನಹಾರ ಕೌಸ್ತುಭ ವಿಹಾರ
ತಟಿತ್ಕೋಟಿ ನಿಭಕಾಯ ಪೀತಾಂಬರಧರ
ನಿಟಿಲಲೋಚನ ಬಾಲವಟು ಮೂರುತಿಯೆಂದು || ೫ ||
ವಿಷ್ಣು ಸಂಕರುಷಣ ಮಧುಸೂದನ ಶ್ರೀ –
ಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ
ಜಿಷ್ಣು ಸಾರಥಿ ರಾಮ ಅಚ್ಯುತಾಧೋಕ್ಷಜ
ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು || ೬ ||
ಇಭರಾಜ ಪರಿಪಾಲ ಇಂದಿರೆಯರಸ
ನಭ ಗಂಗಾಜನಕ ಜನಾರ್ದನನೆ
ವಿಭುವೇ ವಿಶ್ವರೂಪ ವಿಶ್ವನಾಟಕ ಋ –
ಷಭ ದತ್ತಾತ್ರೇಯ ಶ್ರೀರಾಮ ಮೂರುತಿಯೆಂದು || ೭ ||
ವೈಕುಂಠ ವಾಮನ ವಾಸುದೇವ ರಂಗ
ಲೋಕೇಶ ನವನೀತಚೋರ ಜಾರ
ಗೋಕುಲವಾಸಿ ಗೋವಳರಾಯ ಶ್ರೀಧರ
ಏಕಮೇವ ಶ್ರೀಕೃಷ್ಣ ಮೂರುತಿಯೆಂದು || ೮ ||
ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ
ಅಸುರ ಭಂಜನ ತ್ರಿವಿಕ್ರಮ ಕಪಿಲ
ಕುಸುಮಶರನಯ್ಯ ಶಾರಂಗಧರಾಚಕ್ರಿ
ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು || ೯ ||
ಸರ್ವನಾಮಕ ಸರ್ವಚೇಷ್ಟಕ ಸರ್ವೇಶ
ಸರ್ವಮಂಗಳ ಸರ್ವಸಾರ ಭೋಕ್ತ
ಸರ್ವಾಧಾರಕ ಸರ್ವ ಗುಣಗಣ ಪರಿಪೂರ್ಣ
ಸರ್ವಮೂಲಾಧಾರ ಕಲ್ಕಿ ಮೂರುತಿಯೆಂದು || ೧೦ ||
ಈ ಪರಿ ಕೂಗಲು ಆಪತ್ತು ಪರಿಹಾರ ಅ –
ಪಾರ ಜನ್ಮ ಬೆಂಬಿಡದಲೆ ಸಪ್ತ –
ದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ
ಅಪವರ್ಗದಲ್ಲಿಟ್ಟು ಆನಂದಪಡಿಸುವ || ೧೧ ||
kUgelO manuja kUgelO || pa ||
sAgaraSayanane jagake daivaveMdu || a pa ||
acyutAnaMta gOviMda mAdhava kRuShNa
saccidAnaMdaika sarvOttama
saccarita raMga nArAyaNa vEda
bacciTTavana koMda matsya mUrutiyeMdu ||1||
narahari mukuMda nArAyaNa dEva
parama puruSha hari hayavadana
siridhara vAmana dAmOdara giri
dharisida surapAla kUrma mUrutiyeMdu || 2 ||
puruShOttama puNyaSlOka puMDarIka –
varada apAra sadguNanilaya
muramardana maMjuBAShaNa kESava
nirmala dEva BUvarAha mUrutiyeMdu || 3 ||
nigamavaMdita vArijanABa aniruddha
aGanASa aprAkRuta SarIra
suguNa sAkAra jagadatyaMta Binna
triguNavaMdita naramRuga rUpaneMdu || 4 ||
vaTapatraSayana jagadaMtaryAmi
kaTaka muttinahAra kaustuBa vihAra
taTitkOTi niBakAya pItAMbaradhara
niTilalOcana bAlavaTu mUrutiyeMdu || 5 ||
viShNu saMkaruShaNa madhusUdana SrI –
kRuShNa pradyumna prathama daivave
jiShNu sArathi rAma acyutAdhOkShaja
sRuShTigoDeya BArgava mUrutiyeMdu || 6 ||
iBarAja paripAla iMdireyarasa
naBa gaMgAjanaka janArdanane
viBuvE viSvarUpa viSvanATaka Ru –
ShaBa dattAtrEya SrIrAma mUrutiyeMdu || 7 ||
vaikuMTha vAmana vAsudEva raMga
lOkESa navanItacOra jAra
gOkulavAsi gOvaLarAya SrIdhara
EkamEva SrIkRuShNa mUrutiyeMdu || 8 ||
hRuShikESa paramAtma muktAmuktASraya
asura BaMjana trivikrama kapila
kusumaSaranayya SAraMgadharAcakri
viShahara dhanvaMtri bauddha mUrutiyeMdu || 9 ||
sarvanAmaka sarvacEShTaka sarvESa
sarvamaMgaLa sarvasAra BOkta
sarvAdhAraka sarva guNagaNa paripUrNa
sarvamUlAdhAra kalki mUrutiyeMdu || 10 ||
I pari kUgalu Apattu parihAra a –
pAra janma beMbiDadale sapta –
dvIpAdhipa namma vijayaviThThalarEya
apavargadalliTTu AnaMdapaDisuva || 11 ||
Leave a Reply