Narasimha Suladi – Veerasimhane

Composer : Shri Vijayadasaru , Raga: Kalyani

By Smt.Nandini Sripad , Blore.

ಶ್ರೀ ವಿಜಯದಾಸಕೃತ ಶ್ರೀ ನರಸಿಂಹ ಸುಳಾದಿ
ರಾಗ : ಕಲ್ಯಾಣಿ
ಧ್ರುವತಾಳ
ವೀರಸಿಂಹನೆ ನಾರಸಿಂಹನೆ ದಯ ಪಾರಾ
ವಾರನೆ ಭಯ ನಿವಾರಣ ನಿರ್ಗುಣ
ಸಾರಿದವರ ಸಂಸಾರ ವೃಕ್ಷದ ಮೂಲ
ಬೇರರಸಿ ಕೀಳುವ ಬಿರಿದು ಭಯಂಕರ
ಘೋರಾವತಾರ ಕರಾಳವದನ ಅ –
ಘೋರದುರಿತಸಂಹಾರ ಮಾಯಾಕಾರ
ಕ್ರೂರ ದೈತ್ಯರ ಶೋಕ ಕಾರಣ ಉದುಭವ
ಈರೇಳು ಭುವನ ಸಾಗರದೊಡಿಯಾ
ಆ ರೌದ್ರ ನಾಮಾ ವಿಜಯವಿಠ್ಠಲ ನರಸಿಂಗ
ವೀರ ರಸಾತುಂಗ ಕಾರುಣ್ಯಪಾಂಗ || ೧ ||

ಮಟ್ಟತಾಳ
ಮಗುವಿನ ರಕ್ಕಸನು ಹಗಲಿರುಳು ಬಿಡದೆ
ಹಗೆಯಿಂದಲಿ ಹೊಯ್ದ ನಗಪನ್ನಗ ವನಧಿ
ಗಗನ ಮಿಗಿಲಾದಅಗಣಿತಬಾಧಿಯಲಿ
ನೆಗೆದು ಒಗದು ಸಾವು ಬಗೆದು ಕೊಲ್ಲುತಿರಲು
ಹೇ ಜಗದವಲ್ಲಭನೆ ಸುಗುಣಾನಾದಿಗನೆ
ನಿಗಮಾವಂದಿತನೆ ಪೊಗಳಿದ ಭಕುತರ
ತಗಲಿ ತೊಲಗನೆಂದೂ ಮಿಗೆ ಕೂಗುತ್ತಿರಲು
ಯುಗಯುಗದೊಳು ದಯಾಳುಗಳ ದೇವರ ದೇವ
ಯುಗಾದಿಕೃತನಾಮಾ ವಿಜಯವಿಠ್ಠಲ ಹೋ ಹೋ
ಯುಗಳಕರವ ಮುಗಿದು ಮಗುವು ಮೊರೆಯಿಡಲು || ೨ ||

ರೂಪಕತಾಳ
ಕೇಳಿದಾಕ್ಷಣದಲ್ಲಿ ಲಾಲಿಸಿ ಭಕ್ತನ್ನ
ಮೌಳಿ ವೇಗದಲಿ ಪಾಲಿಸುವೆನೆಂದು
ತಾಳಿ ಸಂತೋಷವ ತೂಳಿ ತುಂಬಿದಂತೆ
ಮೂಲೋಕದ ಪತಿ ವಾಲಯದಿಂದ ಸು –
ಸ್ಸೀಲ ದುರ್ಲಭನಾಮ ವಿಜಯವಿಠ್ಠಲ ಪಂಚ
ಮೌಳಿಮಾನವಕಂಭ ಸೀಳಿ ಮೂಡಿದ ದೇವ || ೩ ||

ಝಂಪೆತಾಳ
ಲಟ ಲಟಾ ಲಟಲಟಾ ಲಟ ಕಟಿಸಿ ವನಜಜಾಂಡ
ಕಟಹ ಪಟ ಪಟ ಪುಟುತ್ಕಟದಿ ಬಿಚ್ಚುತ ಲಿರಲು
ಪುಟ ಪುಟಾ ಪುಟನೆಗೆದು ಚೀರಿ ಹಾರುತ್ತ ಪ –
ಲ್ಕಟ ಕಟಾ ಕಟ ಕಡಿದು ರೋಷದಿಂದ
ಮಿಟಿ ಮಿಟಿ ಮಿಟನೆ ರಕ್ತಾಕ್ಷಿಯಲ್ಲಿ ನೋಡಿ
ತಟಿತ್ಕೋಟಿ ಊರ್ಭಟಗೆ ಆರ್ಭಟವಾಗಿರಲು
ಕುಟಿಲ ರಹಿತ ವ್ಯಕ್ತ ವಿಜಯವಿಠ್ಠಲ ಶಕ್ತ
ಧಿಟಿ ನಿಟಿಲ ನೇತ್ರ ಸುರಕಟಕ ಪರಿಪಾಲಾ || ೪ ||

ತ್ರಿವಿಡಿತಾಳ
ಬೊಬ್ಬಿರಿಯೇ ವೀರ ಧ್ವನಿಯಿಂದ ತನಿಗಿಡಿ
ಹಬ್ಬಿ ಮುಂಜೋಣಿ ಉರಿ ಹೊಗರೆದ್ದು ಸುತ್ತೆ
ಉಬ್ಬಸ ರವಿಗಾಗೆ ಅಬ್ಜ ನಡುಗುತಿರೆ
ಅಬ್ದಿ ಸಪುತ ಉಕ್ಕಿ ಹೊರಚೆಲ್ಲಿ ಬರುತಿರೆ
ಅಬುಜ ಭವಾದಿಗಳು ತಬ್ಬಿಬ್ಬಿಗೊಂಡಾರಿ
ಅಬ್ಬರವೇನೆನುತ ನಭದ ಗುಳಿಯು ತೆಗಿಯೆ
ಶಬ್ದತುಂಬಿತು ಅವ್ಯಾಕೃತಾಕಾಶ ಪರ್ಯಂತ
ನಿಬ್ಬರ ತರು ಗಿರಿ ಝರ್ಝರಿಸಲು
ಒಬ್ಬರಿಗೊಶವಲ್ಲದ ನಮ್ಮ ವಿಜಯವಿಠ್ಠಲ
ಇಬ್ಬಗೆಯಾಗಿ ಕಂಭದಿಂದ ಪೊರಮಟ್ಟಾ || ೫ ||

ಅಟ್ಟತಾಳ
ಘುಡಿ ಘುಡಿಸುತ ಕೋಟಿ ಸಿಡಿಲು ಗಿರಿಗೆ ಬಂದು
ಹೊಡೆದಂತೆ ಚೀರಿ ಬೊಬ್ಬಿಡುತಲಿ ಲಂಘಿಸಿ
ಹಿಡಿದು ರಕ್ಕಸನ್ನ ಕೆಡಹಿ ಮಡುಹಿ ತುಡುಕಿ
ತೊಡಿಯ ಮೇಲಿರಿಸಿ ಹೇರೊಡಲ ಕೂರುಗುರದಿಂದ
ಪಡುವಲ ಗಡಲ ತಡಿಯ ತರಣಿಯ ನೋಡಿ
ಕಡುಕೋಪದಲಿ ಸದೆಬಡಿದು ರಕ್ಕಸನ್ನ ಕೆಡಹಿ
ನಿಡಿಗರುಳನ ಕೊರಳೆಡೆಯಲ್ಲಿ ಧರಿಸಿದ
ಸಡಗರದ ದೈವ ಕಡುಗಲಿ ಭೂರ್ಭೂವ
ವಿಜಯವಿಠ್ಠಲ ಪಾಲ್ಗಡಲೊಡಿಯ
ಶರಣರ ವಡವೆ ಒಡನೊಡನೆ || ೬ ||

ಆದಿತಾಳ
ಉರಿ ಮಸಗೆ ಚರ್ತುದಶ ಧರಣಿ ತಲ್ಲಣಿಸಲು
ಪರಮೇಷ್ಠಿ ಹರಸುರರು ಸಿರಿದೇವಿಗೆ ಮೊರೆ ಇಡಲು
ಕರುಣದಿಂದಲಿ ತನ್ನ ಶರಣನ್ನ ಸಹಿತ ನಿನ್ನ
ಚರಣಕ್ಕೆ ಎರಗಲು ಪರಮ ಶಾಂತನಾಗಿ
ಹರಹಿದೆ ದಯವನ್ನುಸುರರುಕುಸುಮ ವರುಷ
ಗರಿಯಲು ಭೇರಿ ವಾದ್ಯ ಮೋರೆವುತ್ತರರೆ ಎನುತ
ಪರಿಪರಿ ವಾಲಗ ವಿಸ್ತಾರದಿಂದ ಕೈಕೊಳ್ಳುತ್ತ
ಮೆರೆದು ಸುರರುಪದ್ರ ಹರಿಸಿ ಬಾಲಕನ ಕಾಯ್ದ
ಪರದೈವ ಗಭೀರಾತ್ಮ ವಿಜಯವಿಠ್ಠಲ ನಿಮ್ಮ
ಚರಿತೆ ದುಷ್ಟರಿಗೆ ಭೀಕರವೋ ಸಜ್ಜನ ಪಾಲಾ || ೭ ||

ಜತೆ
ಪ್ರಹ್ಲಾದವರದ ಪ್ರಪನ್ನ ಕ್ಲೇಶ ಭಂಜನ್ನ
ಮಹಹವಿಷೆ ವಿಜಯವಿಠ್ಠಲ ನರಮೃಗವೇಷಾ ||೮||


SrI vijayadAsakRuta SrI narasiMha suLAdi
rAga : kalyANi
dhruvatALa
vIrasiMhane nArasiMhane daya pArA
vArane Baya nivAraNa nirguNa
sAridavara saMsAra vRukShada mUla
bErarasi kILuva biridu BayaMkara
GOrAvatAra karALavadana a –
GOra durita saMhAra mAyAkAra
krUra daityara SOka kAraNa uduBava
IrELu Buvana sAgaradoDiyA
A raudra nAmA vijayaviThThala narasiMga
vIra rasAtuMga kAruNyapAMga || 1 ||

maTTatALa
maguvina rakkasanu hagaliruLu biDade
hageyiMdali hoyda nagapannaga vanadhi
gagana migilAda agaNita bAdhiyali
negedu ogadu sAvu bagedu kollutiralu
hE jagadavallaBane suguNAnAdigane
nigamAvaMditane pogaLida Bakutara
tagali tolaganeMdU mige kUguttiralu
yugayugadoLu dayALugaLa dEvara dEva
yugAdikRutanAmA vijayaviThThala hO hO
yugaLakarava mugidu maguvu moreyiDalu || 2 ||

rUpakatALa
kELidAkShaNadalli lAlisi Baktanna
mauLi vEgadali pAlisuveneMdu
tALi saMtOShava tULi tuMbidaMte
mUlOkada pati vAlayadiMda su –
ssIla durlaBanAma vijayaviThThala paMca
mauLi mAnava kaMBa sILi mUDida dEva || 3 ||

JaMpetALa
laTa laTA laTalaTA laTa kaTisi vanajajAMDa
kaTaha paTa paTa puTutkaTadi biccuta liralu
puTa puTA puTanegedu cIri hArutta pa –
lkaTa kaTA kaTa kaDidu rOShadiMda
miTi miTi miTane raktAkShiyalli nODi
taTitkOTi UrBaTage ArBaTavAgiralu 
kuTila rahita vyakta vijayaviThThala Sakta
dhiTi niTila nEtra surakaTaka paripAlA || 4 ||

triviDitALa
bobbiriyE vIra dhvaniyiMda tanigiDi
habbi muMjONi uri hogareddu sutte
ubbasa ravigAge abja naDugutire
abdi saputa ukki horacelli barutire
abuja BavAdigaLu tabbibbigoMDAri
abbaravEnenuta naBada guLiyu tegiye
SabdatuMbitu avyAkRutAkASa paryaMta
nibbara taru giri JarJarisalu
obbarigoSavallada namma vijayaviThThala
ibbageyAgi kaMBadiMda poramaTTA || 5 ||

aTTatALa
GuDi GuDisuta kOTi siDilu girige baMdu
hoDedaMte cIri bobbiDutali laMGisi
hiDidu rakkasanna keDahi maDuhi tuDuki
toDiya mElirisi hEroDala kUruguradiMda
paDuvala gaDala taDiya taraNiya nODi
kaDukOpadali sadebaDidu rakkasanna keDahi
niDigaruLana koraLeDeyalli dharisida
saDagarada daiva kaDugali BUrBUva 
vijayaviThThala pAlgaDaloDiya
SaraNara vaDave oDanoDane || 6 ||

AditALa
uri masage cartudaSa dharaNi tallaNisalu
paramEShThi harasuraru siridEvige more iDalu
karuNadiMdali tanna SaraNanna sahita ninna
caraNakke eragalu parama SAMtanAgi
harahide dayavannu suraru kusuma varuSha
gariyalu BEri vAdya mOrevuttarare enuta
paripari vAlaga vistAradiMda kaikoLLutta
meredu surarupadra harisi bAlakana kAyda
paradaiva gaBIrAtma vijayaviThThala nimma
carite duShTarige BIkaravO sajjana pAlA || 7 ||

jate
prahlAdavarada prapanna klESa BaMjanna
mahahaviShe vijayaviThThala naramRugavEShA ||8||

Leave a Reply

Your email address will not be published. Required fields are marked *

You might also like

error: Content is protected !!