Ena Helali Narahari

Composer : Shri Vadirajaru

By Smt.Shubhalakshmi Rao

ಏನ ಹೇಳಲಿ ನರಹರಿ ನಿನ್ನ ಮಹಿಮೆಯನು || ಪ ||
ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ || ಅ.ಪ ||

ಸಚ್ಚಿದಾನಂದನ ಪಾದಾರವಿಂದವ |
ಮೆಚ್ಚಿ ಹಸನಾಗಿರುವೆಂದಡೆ ||
ಹುಚ್ಚೆದ್ದ ಕಪಿಯಂತೆ ವಿಷಯವೆಂಬಡವಿಯಲಿ |
ಕಿಚ್ಚು ಕೊಂಗೊಂಡು ಎನ್ನ ಕಾಡುತಿದೆ ರಂಗ || ೧ ||

ವಾಸುದೇವನ ಗುಣಂಗಳ ಸ್ತುತಿಸದೆ ದು – |
ರಾಸೆಯೊಳು ಬಿದ್ದು ಕಾಡಿಸುವದೆ ||
ಲೇಸಾಗಿ ನಾಯಿಬಾಲಕೆ ನಾರಾಯಣ ತೈಲ |
ಏಸು ಬಾರಿ ತೀಡಿದರೆ ನೀಟಾಗುವುದೇ || ೨ ||

ಸಾಧು ಸಜ್ಜನರ ಸಂಗವ ಮಾಡಲೊಲ್ಲದೆ |
ಬಾಧಿಸುತಿದೆ ದುಷ್ಟ ಸಂಗದಿಂದ ||
ಮಾಧವ ಭಕ್ತವತ್ಸಲ ಹಯವದನನೆ |
ನೀ ದಯಮಾಡಿ ನಿನ್ನಂತೆ ಮಾಡೆನ್ನ ಮನ || ೩ ||


Ena hELali narahari ninna mahimeyanu || pa ||
ninna dhyAna mADEneMdare nillagoDadu mana || a.pa ||

saccidAnaMdana pAdAraviMdava |
mecci hasanAgiruveMdaDe ||
huccedda kapiyaMte viShayaveMbaDaviyali |
kiccu koMgoMDu enna kADutide raMga || 1 ||

vAsudEvana guNaMgaLa stutisade du – |
rAseyoLu biddu kADisuvade ||
lEsAgi nAyibAlake nArAyaNa taila |
Esu bAri tIDidare nITAguvudE || 2 ||

sAdhu sajjanara saMgava mADalollade |
bAdhisutide duShTa saMgadiMda ||
mAdhava Baktavatsala hayavadanane |
nI dayamADi ninnaMte mADenna mana || 3 ||

Leave a Reply

Your email address will not be published. Required fields are marked *

You might also like

error: Content is protected !!