Composer : Shri Indiresha ankita
ನೇತ್ರಗಳ ಸಾಫಲ್ಯ ಮಾಳ್ಪ ಸುಗಾತ್ರರನು ಕಂಡೆ ( ಪ)
ಪಾತ್ರರಾದವರು ದಾಸರ ಕೀರ್ತಿಸಲು ಪಾಪಗಳು ನಿಲ್ಲವೊ (ಅ.ಪ.)
ವೇದ ಶಾಸ್ತ್ರಗಳ ಪೇಳುತ ಮೋದದಿಂದಿಹರು
ವಾದ ಮಾಡುವರಲ್ಲಿ ಶಮದಮಾದಿ ಗುಣದವರು
ಮೋದ ತೀರ್ಥರ ಮತಾನುಸಾರವ
ಬೋಧಿಸುತ ಪರಮಾನುಗ್ರಹ ಮಾಳ್ಪರ [೧]
ವಾಸುದೇವನ ದಾಸರೊಳಗ್ರೇಸರರು ಇವರು
ಶ್ರೀಶನ ಶುಭಗುಣ ಕರ್ಮಂಗಳು ಚಿಂತಿಸುತಲಿಹರು
ಭೂಸುರಾಂಶರಲ್ಲಿದಾವ ಸುರೇಶರೋ
ಶೇಷದಾಸರಾಗಿ ಇಹರು [೨]
ತಂದೆ ಶ್ರೀ ನರಸಿಂಹನ ಪದ ದ್ವಂದ್ವ ಭಜಿಸುವರು
ಬಂದ ಸಜ್ಜನವೃಂದ ಜನಕಾನಂದಗೈಸುವರು
ಇಂದಿರೇಶನ ಒಂದೆ ಮನದಿ ಆ-
ನಂದ ಬಾಷ್ಪಗಳಿಂದ ಧೇನಿಪರು [೩]
nEtragaLa sAPalya mALpa sugAtraranu kaMDe ( pa)
pAtrarAdavaru dAsara kIrtisalu pApagaLu nillavo (a.pa.)
vEda SAstragaLa pELuta mOdadiMdiharu
vAda mADuvaralli SamadamAdi guNadavaru
mOda tIrthara matAnusArava
bOdhisuta paramAnugraha mALpara [1]
vAsudEvana dAsaroLagrEsararu ivaru
SrISana SuBaguNa karmaMgaLu ciMtisutaliharu
BUsurAMSarallidAva surESarO
SEShadAsarAgi iharu [2]
taMde SrI narasiMhana pada dvaMdva Bajisuvaru
baMda sajjanavRuMda janakAnaMdagaisuvaru
iMdirESana oMde manadi A-
naMda bAShpagaLiMda dhEniparu [3]
Leave a Reply