Composer : Shri Vyasarajaru
ನಿದ್ರೆ ಬಂತಿದೆಕೋ ಅನಿ- [ಪ]
ರುದ್ಧನ ಸೇವೆಗೆ ವಿಘ್ನವ ಮಾಡುತ್ತ [ಅ]
ಅಸ್ತಮಾನದಿಂದ ಉದಯವಾಗೋತನಕ
ಸ್ವಸ್ಥದಿ ಪಗಡೆ ಪಂಜಿಯನಾಡುತ
ವಿಸ್ತಾರದಿ ವೇಷನೋಡೆ ನಿದ್ರೆಯಿಲ್ಲ
ಪುಸ್ತಕ ಹಿಡಿಯಲು ಮಸ್ತಕ ಮಣಿಸುತ [೧]
ಹರಿಕಥಾ ಶ್ರವಣವ ಮಾಡಬೇಕೆನುತಲಿ
ಪರಮ ಭಕುತಿಯಿಂದ ಕುಳ್ಳಿರಲು
ಕಿರಿಗಣ್ಣ ನೋಟದಿ ಸ್ಮರಣೆ ತಪ್ಪಿಸುತ್ತ
ಗುರುಗುರು ಗುಟ್ಟುತ ಗೊರಳ ತೂಗಿಸುತ [೨]
ಇಲಿಗಳಿಗೆ ಬೆಕ್ಕು ಸಾಧಿಪ ಪರಿಯಂತೆ
ಹಲವು ಪರಿಯಲ್ಲಿ ಈ ನಿದ್ರೆಯು, ಛಲದಿಂದ
ಮನುಜರ ನೇಮ ಕೆಡಿಸುತಿದೆ ಒಲಿದು
ಶ್ರೀಕೃಷ್ಣನ ಜಾಗರ ಮಾಳ್ಪಲ್ಲಿ [೩]
nidre baMtidekO ani- [pa]
ruddhana sEvege viGnava mADutta [a]
astamAnadiMda udayavAgOtanaka
svasthadi pagaDe paMjiyanADuta
vistAradi vEShanODe nidreyilla
pustaka hiDiyalu mastaka maNisuta [1]
harikathA SravaNava mADabEkenutali
parama BakutiyiMda kuLLiralu
kirigaNNa nOTadi smaraNe tappisutta
guruguru guTTuta goraLa tUgisuta [2]
iligaLige bekku sAdhipa pariyaMte
halavu pariyalli I nidreyu, CaladiMda
manujara nEma keDisutide olidu
SrIkRuShNana jAgara mALpalli [3]
Leave a Reply