Vayu Devara Suladi – Sheshadasaru

Raga:Hindola

Smt.Nandini Sripad , Blore..

ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ
(ಗುರುವಿಜಯವಿಟ್ಠಲ ಅಂಕಿತ)
ಶ್ರೀವಾಯುದೇವರ ಸ್ತೋತ್ರ ಸುಳಾದಿ
( ಶ್ರೀವಾಯುದೇವರ ಅನುಗ್ರಹವೆ ಮುಖ್ಯ ತಾರಕ.
ಹಿಂದೆ ಅರ್ಜುನಾವತಾರದಲ್ಲಿ ವಾಯುನೇವೆ ಭೀಮಸೇನನು. ಜ್ಯೇಷ್ಠನಾಗಿ ಅವತರಿಸಿ ಅನೇಕ ಕಾಲದಲ್ಲಿ
ರಕ್ಷಿಸಿದ್ದು ಆಶ್ಚರ್ಯವಲ್ಲ.
ಈಗ ದುರುಳ ಕಲಿಬಾಧೆಯಿಂದಾದ
ಅಜ್ಞಾನಾಂಧಕಾರವನ್ನು ಪರಿಹರಿಸಿ ರಕ್ಷಿಸು. ಹೃದಯಧ್ವಜಕೇತನದಲ್ಲಿ ಪೊಳೆದು
ಹರಿಯನ್ನು ತೋರಲು ಪ್ರಾರ್ಥನಾ.)
ರಾಗ ಹಿಂದೋಳ

ಧ್ರುವತಾಳ

ಪಿತೃ ಸಮಾನ ಜೇಷ್ಠನೆಂತೆಂಬ ವಿಧದಿಂದ
ಪಿತೃನಿಷ್ಠವಾದ ಕರುಣದಿಂದ
ಅತಿಶಯವಾಗಿ ಎನ್ನ ಪಾಲನ ಮಾಡದಿರೇ
ಪಿತೃ ಸಮಾನ ಜೇಷ್ಠನೆಂಬೋಕ್ತಿಗೆ ವ್ಯಾ –
ಹತಿ ಬಾರದೇನೊ ಶುಭಗಾತ್ರ ಜಗದ ಸೂತ್ರ
ಮತಿ ಪ್ರದಾತೃನೆನಿಪ ಪವನರಾಯಾ
ಈ ತೆರವಾದ ಘನತಿ ವೊಹಿಸದಿರಲು ಇರಲಿ
ಯತಾರ್ಥವಾಗಿ ಎನಗೆ ಭ್ರಾತೃನೆನೆಸಿ
ಭ್ರಾತೃನಿಷ್ಠವಾದ ಕೃಪೆಯ ಮಾಡದೆ ಎನ್ನ
ಪ್ರತಿದಿನದಲ್ಲಿ ಬಿಡದೆ ಬಳಲಿಸಲು
ಭ್ರಾತೃನೆಂಬೋಕ್ತಿಗೆ ವ್ಯಾಹತಿ ಬಾರದೇನೊ ಧರ್ಮ ಪ –
ದ್ಧತಿಯು ತಪ್ಪದಂತೆ ನಡೆವ ಸುಜನ
ಪ್ರತಿತಿಗೆ ಪ್ರಿಯನಾದ ಗುರುವಿಜಯವಿಟ್ಠಲನ್ನ
ಭಕ್ತರ ಶಿರೋಮಣಿ ದಯದ ಖಣಿ || ೧ ||

ಮಟ್ಟತಾಳ

ಗುರು ನಿಷ್ಠವಾದ ಧರ್ಮವ ನಿನ್ನಲ್ಲೀ
ಪರಿನಿಷ್ಠೆಯ ನೋಡಿ ಸುರರೆಲ್ಲರು ನಿನ್ನ
ಗುರು ನೀನೆಂದು ಭಜಿಸಿ ಪರಿಚಾರಕರಾಗಿಹರು
ಪರಮ ಕರುಣಿ ನೀನು (ದ್ವೌ)ದ್ವರನಾಪೇಕ್ಷ
ಗುರುವೆನಿಸಿ ಎನಗೆ ಹಿತ ಮಾಡದಿರಲು
ಗುರುವೆಂಬೋಕ್ತಿಗೆ ಸಾರ್ಥಕವೆಂತಹುದೊ
ಪರಿಪೂರ್ಣ ಕೃಪನಿಧೆ ಗುರುವಿಜಯವಿಟ್ಠಲನ್ನ
ಕರುಣ ಪಡೆವದೆಂತೊ ನೀ ಇನಿತು ನೋಡೆ || ೨ ||

ತ್ರಿವಿಡಿತಾಳ

ಪ್ರತ್ಯಕ್ಷವಾದ ಮೃತ್ಯು ಮನೆಯಿಂದ ಪಾಲಿಸಿದ
ಕೀರ್ತಿ ಆಧಿಕ್ಯವಲ್ಲ ಗುಣನಿಧಿಯೇ
ಮೃತ್ಯು ರೂಪವಾದ ಸಂಸಾರವೆಂತೆಂಬ
ಕತ್ತಲೆ ಮನೆಯಿಂದ ರಕ್ಷಿಸಲು
ಉತ್ತಮೋತ್ತಮವಾದ ಖ್ಯಾತಿ ನಿನಗೆವುಂಟು
ಸತ್ವ ಪ್ರಮಾಣ್ಯವಾದ ಜೀವೋತ್ತಮ
ಪ್ರತ್ಯಕ್ಷವಾದ ರಾತ್ರಿಚರನಿಂದ ವುಳಿಸಿದ್ದು
ಅತ್ಯಾಶ್ಚರ್ಯವಲ್ಲ ಅಸುರಾರಿಯೇ ಅ –
ನುತ್ತಮನಾದ ಕಲಿಯಿಂದ ಬಾಧಿತನಾಗಿ
ನಿತ್ಯ ಪ್ರವಾಹರೂಪವಾದ ದುಃಖ
ಹೊತ್ತು ಹೊತ್ತಿಗೆ ಉಂಟೆ ಅವ್ಯವಧಾನದಿಂದ
ಈ ತೆರವಾದ ಪ್ರಬಲ ದೋಷ ಎನ್ನಿಂದ
ದೈತ್ಯನಿಂದಲಿ ಎನ್ನ ರಕ್ಷಿಸುವದು ಮಹ
ಅತ್ಯಧಿಕವಾದ ಕೀರ್ತಿ ನಿನಗೆ
ನಿತ್ಯತೃಪ್ತ ನಾಮ ಗುರುವಿಜಯವಿಟ್ಠಲನಿಂದ
ಮಿತ್ರನ್ನ ಮಾಡುವದು ಖ್ಯಾತಿ ನಿನಗೆ || ೩ ||

ಅಟ್ಟತಾಳ

ತನಯನಿಂದಲಿ ಮೂರ್ಛಗೈದಿದ್ದ ಸಮಯದಿ
ಘನಮಹಿಮನೆ ನಿನ್ನ ಕರುಣದಿಂದಲಿ ಹರಿ
ಧೇನು ವತ್ಸ ನ್ಯಾಯದಿಂದ ಬಂದು ಎನ್ನ
ತನವು ರಕ್ಷಿಸಿದ್ದು ಕೀರ್ತಿಯಲ್ಲವೊ ದೇವ ಸು –
ಮನಸರಿಂದಲಿ ಬಂದ ವಾಕ್ಯಾನುಸಾರದಿ
ಮಿನಗುವ ಸುಜ್ಞಾನದಿಂದ ರಹಿತನಾಗಿ ಅ –
ಜ್ಞಾನವೆಂಬೊವ ಅಸ್ತ್ರದಿಂದ ಮೂರ್ಛಿತನಾಗಿ
ತನುವಿನ ಸ್ಮರಣೆಯು ಇಲ್ಲದಿದ್ದವನಾದೆ
ವಿನಯದಿಂದಲಿ ಈಗ ಬಂದು ರಕ್ಷಿಸಲು
ಎಣಿಕೆಯಿಲ್ಲದ ಕೀರ್ತಿ ಬರುವದೊ ಯಲೊ ದೇವ
ಮುನಿ ಮನಮಂದಿರ ಗುರುವಿಜಯವಿಟ್ಠಲರೇಯ
ಅನುಗ್ರಹ ಮಾಡುವ ನಿನ್ನಿಂದಲಾವಾಗ || ೪ ||

ಆದಿತಾಳ

ವಿಜಯವ ನೀವೆನೆಂದು ಧ್ವಜದಲ್ಲಿ ನೀನಿಂದು
ಕುಜನರ ಹೃದಯವ ನಿರ್ಭಿನ್ನಗೈಸಿ ಅಂದು
ವಿಜಯವ ಪಾಲಿಸಿದ್ದು ಆಶ್ಚರ್ಯವಲ್ಲ ನಿನಗೆ
ರಜತಮೊಗಣದಿಂದ ಬಂಧಿಸಿಕೊಂಡು ಸತತ
ರಜನಿಯ ಚರರಿಂದ ಅಚ್ಛಿನ್ನನಾದೆ ಬಲು
ಕುಜನ ಮಾರುತಿಯಿಂದ ಕರುಣವ ಮಾಡಿ ಹೃದಯ –
ಧ್ವಜದಲ್ಲಿ ನಿಂದು ವೇಗ ವಿಜಯವ ಗೈಸುವದು
ಭಜಕರ ಪ್ರಿಯ ಗುರುವಿಜಯವಿಟ್ಠಲರೇಯ
ವೃಜನಗಳೋಡಿಸುವ ನಿನ್ನಿಂದಲಾವಾಗ || ೫ ||

ಜತೆ

ಅಂದು ಮಾಡಿದ್ದೇನು ಆಶ್ಚರ್ಯವಲ್ಲ ನಿನಗೆ
ಇಂದು ಪಾಲಿಸು ಗುರುವಿಜಯವಿಟ್ಠಲ ಪ್ರೀಯಾ ||


SrImodalakallu SEShadAsArya viracita
(guruvijayaviTThala aMkita)
SrIvAyudEvara stOtra suLAdi
( SrIvAyudEvara anugrahave muKya tAraka.
hiMde arjunAvatAradalli vAyunEve BImasEnanu. jyEShThanAgi avatarisi anEka kAladalli
rakShisiddu AScaryavalla.
Iga duruLa kalibAdheyiMdAda
aj~jAnAMdhakAravannu pariharisi rakShisu. hRudayadhvajakEtanadalli poLedu
hariyannu tOralu prArthanA.)
rAga hiMdOLa

dhruvatALa

pitRu samAna jEShThaneMteMba vidhadiMda
pitRuniShThavAda karuNadiMda
atiSayavAgi enna pAlana mADadirE
pitRu samAna jEShThaneMbOktige vyA –
hati bAradEno SuBagAtra jagada sUtra
mati pradAtRunenipa pavanarAyA
I teravAda Ganati vohisadiralu irali
yatArthavAgi enage BrAtRunenesi
BrAtRuniShThavAda kRupeya mADade enna
pratidinadalli biDade baLalisalu
BrAtRuneMbOktige vyAhati bAradEno dharma pa –
ddhatiyu tappadaMte naDeva sujana
pratitige priyanAda guruvijayaviTThalanna
Baktara SirOmaNi dayada KaNi || 1 ||

maTTatALa

guru niShThavAda dharmava ninnallI
pariniShTheya nODi surarellaru ninna
guru nIneMdu Bajisi paricArakarAgiharu
parama karuNi nInu (dvau)dvaranApEkSha
guruvenisi enage hita mADadiralu
guruveMbOktige sArthakaveMtahudo
paripUrNa kRupanidhe guruvijayaviTThalanna
karuNa paDevadeMto nI initu nODe || 2 ||

triviDitALa

pratyakShavAda mRutyu maneyiMda pAlisida
kIrti Adhikyavalla guNanidhiyE
mRutyu rUpavAda saMsAraveMteMba
kattale maneyiMda rakShisalu
uttamOttamavAda KyAti ninagevuMTu
satva pramANyavAda jIvOttama
pratyakShavAda rAtricaraniMda vuLisiddu
atyAScaryavalla asurAriyE a –
nuttamanAda kaliyiMda bAdhitanAgi
nitya pravAharUpavAda duHKa
hottu hottige uMTe avyavadhAnadiMda
I teravAda prabala dOSha enniMda
daityaniMdali enna rakShisuvadu maha
atyadhikavAda kIrti ninage
nityatRupta nAma guruvijayaviTThalaniMda
mitranna mADuvadu KyAti ninage || 3 ||

aTTatALa

tanayaniMdali mUrCagaididda samayadi
Ganamahimane ninna karuNadiMdali hari
dhEnu vatsa nyAyadiMda baMdu enna
tanavu rakShisiddu kIrtiyallavo dEva su –
manasariMdali baMda vAkyAnusAradi
minaguva suj~jAnadiMda rahitanAgi a –
j~jAnaveMbova astradiMda mUrCitanAgi
tanuvina smaraNeyu illadiddavanAde
vinayadiMdali Iga baMdu rakShisalu
eNikeyillada kIrti baruvado yalo dEva
muni manamaMdira guruvijayaviTThalarEya
anugraha mADuva ninniMdalAvAga || 4 ||

AditALa

vijayava nIveneMdu dhvajadalli nIniMdu
kujanara hRudayava nirBinnagaisi aMdu
vijayava pAlisiddu AScaryavalla ninage
rajatamogaNadiMda baMdhisikoMDu satata
rajaniya carariMda acCinnanAde balu
kujana mArutiyiMda karuNava mADi hRudaya –
dhvajadalli niMdu vEga vijayava gaisuvadu
Bajakara priya guruvijayaviTThalarEya
vRujanagaLODisuva ninniMdalAvAga || 5 ||

jate

aMdu mADiddEnu AScaryavalla ninage
iMdu pAlisu guruvijayaviTThala prIyA ||

Leave a Reply

Your email address will not be published. Required fields are marked *

You might also like

error: Content is protected !!