Raga:Pantuvarali
ಮೊದಲಕಲ್ಲು ಶ್ರೀ ಶೇಷದಾಸರ ಕೃತಿ
(ಗುರುವಿಜಯವಿಠ್ಠಲ ಅಂಕಿತ)
ಸೋಮವಾರದ ಸುಳಾದಿ
ರಾಗ: ಪಂತುವರಾಳಿ
ಧ್ರುವತಾಳ
ನಿನ್ನ ಕಾಂಬುವದೆನಗೆ ನಿಖಿಳ ಸೌಭಾಗ್ಯ ಪ್ರಾಪ್ತಿ |
ನಿನ್ನ ಕಾಂಬುವದೆ ನಿತ್ಯಾನಂದ |
ನಿನ್ನ ಕಾಂಬುವದೆ ಶುಭದಿನ ವೆನಿಪದು |
ನಿನ್ನ ಕಂಡದ್ದೆ ಪರಮ ಮಂಗಳವೂ |
ನಿನ್ನ ಕಾಂಬುವದೆ ಘನ ಯಶಸ್ಸು ಎನಗೆ |
ನಿನ್ನ ಕಾಂಬುವದೆ ನಿತ್ಯೋತ್ಸವ |
ನಿನ್ನ ಕಾಂಬುವದೆ ದೇಹ ಪುಷ್ಟತ್ವ ಎನಗೆ |
ನಿನ್ನ ಕಾಂಬುವದೆ ನಿಶ್ಚಿಂತವೂ |
ನಿನ್ನ ಕಾಂಬುವದೆ ಪರಮ ಪವಿತ್ರ ಎನಗೆ |
ನಿನ್ನ ಕಾಂಬುವದೆ ಆರೋಗ್ಯವು|
ನಿನ್ನ ಕಾಂಬುವದೆ ಗಂಗಾದಿ ಸ್ನಾನ ಎನಗೆ |
ನಿನ್ನ ಕಂಡದ್ದನೇಕ ಜಪತಪ ಹೋಮವೊ |
ನಿನ್ನ ಕಾಂಬುವದೆ ಅಪರಿಮಿತಾನ್ನದಾನ |
ನಿನ್ನ ಕಂಡದ್ದನೇಕ ಕ್ರತು ವಿಶೇಷ |
ನಿನ್ನ ಕಾಂಬುವದೆ ಷೋಡಶ ಮಹಾದಾನ |
ನಿನ್ನ ಕಾಂಬುವದೆ ಸಕಲ ವೃತವೊ |
ನಿನ್ನ ಕಾಂಬುವದೆ ತೇಜಸ್ಸು ಎನಗದು |
ನಿನ್ನ ಕಾಂಬುವದೆ ಶೌರ್ಯ ಧೈರ್ಯ |
ನಿನ್ನ ಕಾಂಬುವದೆ ಇಹಪರ ಸೌಖ್ಯವೆಲ್ಲ |
ನಿನ್ನ ಕಂಡದ್ದು ಮುಕ್ತಿ ನಿಜಾವಿದು |
ಅನ್ಯಥಾ ಇದಕ್ಕಿಲ್ಲ ನಿನ್ನ ಪಾದವೆ ಸಾಕ್ಷಿ |
ಪನ್ನಂಗಶಯನ ಗುರುವಿಜಯವಿಠ್ಠಲರೇಯ |
ನಿನ್ನ ಕಾಂಬುವದೆ ಇಷ್ಟ ಎನಗೆ || ೧ ||
ಮಟ್ಟತಾಳ
ನಿನ್ನ ಕಾಣದ ದಿನ ಅಶುಭ ದುರ್ದಿನ |
ನಿನ್ನ ಕಾಣದ ಜ್ಞಾನ ಅಡವಿಯ ರೋದನ |
ನಿನ್ನ ಕಾಣದ ಭಕುತಿ ರೋಗಿಷ್ಟನ ಶಕುತಿ |
ನಿನ್ನ ಕಾಣದ ವೈರಾಗ್ಯ ದಾರಿದ್ರನ ಭಾಗ್ಯ ||
ನಿನ್ನ ಕಾಣದ ಸುಖ ತ್ರೈತಾಪದ ದುಃಖಾ |
ನಿನ್ನ ಕಾಣದ ಸ್ನಾನ ಬಧಿರ ಕೇಳುವ ಗಾನ |
ನಿನ್ನ ಕಾಣದ ಜಪ ಚಂಡಾರ್ಕನ ತಾಪ |
ನಿನ್ನ ಕಾಣದ ತಪ ನಿರ್ಗತ ಪ್ರತಾಪ |
ನಿನ್ನ ಕಾಣದ ಆಚಾರ ಬಾಧಿಪ ಗ್ರಹಚಾರ |
ನಿನ್ನ ಕಾಣದ ನರ ಕ್ರಿಮಿ ಕೀಟ ವಾನರ |
ನಿನ್ನ ಕಾಣದ ಕರ್ಮ ಅರಿಯದಿಪ್ಪ ಮರ್ಮ |
ನಿನ್ನ ಕಾಣದ ಪುಣ್ಯ ಗತವಾದ ಧಾನ್ಯ |
ನಿನ್ನ ಕಾಣದ ಯಾತ್ರ ಅಂಧಕನ ನೇತ್ರ |
ನಿನ್ನ ಕಾಣದ ಪಾತ್ರ ಕಾಣದಿಪ್ಪ ನೇತ್ರ |
ನಿನ್ನ ಕಾಣದೆ ಬರಿದೆ ಪರಿಪರಿ ಸಾಧನ |
ಅನ್ನಂತ ಮಾಡಿದರು ಅವಗಿಲ್ಲ ಸುಖಸ್ಪರ್ಶ |
ಚಿನ್ಮಯ ಮೂರುತಿ ಗುರುವಿಜಯವಿಠ್ಠಲರೇಯ |
ನಿನ್ನ ಕಾಂಬುವದೆಲ್ಲ ಕರ್ಮಕ್ಕೆ ಸಾರ್ಥಕವೊ || ೨ ||
ತ್ರಿಪುಟತಾಳ
ನಿನ್ನ ಕಂಡವ ಸಕಲ ಸಾಧನ ಮಾಡಿದವ |
ನಿನ್ನ ಕಂಡವನೇ ನಿರ್ಮಲನೊ |
ನಿನ್ನ ಕಂಡವಗುಂಟೆ ಕಲಿಕೃತ ಅಘವನ್ನು |
ನಿನ್ನ ಕಂಡವನೆ ಜೀವನ್ಮುಕ್ತಾ |
ನಿನ್ನ ಕಂಡವರಲ್ಲಿ ಸಕಲ ಸುರರು ಉಂಟು |
ನಿನ್ನ ಕಾಂಬುವ ದೇಹ ಸುಕ್ಷೇತ್ರವೊ |
ನಿನ್ನ ಕಾಂಬುವ ತನುವು ಪಾವನ ವೆನಿಪುದು |
ನಿನ್ನ ಕಾಂಬುವದೆ ವಿಮಲ ಕೀರ್ತಿ |
ನಿನ್ನ ಕಾಂಬುವ ನರಗೆ ನರಕದ ಭಯ ಉಂಟೆ? |
ನಿನ್ನ ಕಾಂಬುವದೆ ಮಾನ್ಯತೆಯೋ |
ಉನ್ನತ ಮಹಿಮೆ ಗುರುವಿಜಯವಿಠ್ಠಲರೇಯ |
ನಿನ್ನ ಕಾಂಬುವದೇ ನಿಖಿಳ ಸುಖವೋ || ೩ ||
ಅಟ್ಟತಾಳ
ನಿನ್ನ ಕಾಣದೆ ಧನ್ಯನಾಗೇನೆಂಬೋದು |
ಖಿನ್ನ ಮಾತಲ್ಲದೆ ಸಮ್ಮತವಲ್ಲವು |
ಉನ್ನತ ಗುಣನಾರಿ ಪತಿಯುಕ್ತಳಾಗಲು |
ಸನ್ಮಾನ್ಯಳೆನಿಪಳು ಸಂತತ ಸುಖದಿ |
ಅನಂತ ರೂಪನ್ನ ಕಾಂಬುವ ಜನರೆಲ್ಲ ||
ಚಿನ್ಮಯ ರೆನಿಸಿ ಶುಭದಿ ಶೋಭಿಸುವರು |
ಪನ್ನಗಾರಿವಾಹ ಗುರುವಿಜಯವಿಠ್ಠಲರೇಯ |
ನಿನ್ನಿಂದ ಭಕುತರು ವಿಚ್ಛಿನ್ನ ದಾರಿದ್ರರೋ || ೪ ||
ಆದಿತಾಳ
ನಿನ್ನ ಕಾಂಬುವದೆ ಜನ್ಮಕ್ಕೆ ಸಫಲವೊ |
ನಿನ್ನ ಕಾಂಬುವಗೆ ಪುನರಪಿ ಜನ್ಮವಿಲ್ಲ |
ಅನಾದಿ ಪ್ರಾರಬ್ಧ ಸಂಬಂಧ ನಿಮಿತ್ತ |
ಜನ್ಮವು ಒದಗಲು ಅವಗಿಲ್ಲ ಲೇಪವು |
ನಿನ್ನ ಕಾಂಬುವನ್ನ ಸುರರೆಲ್ಲ ಮನ್ನಿಪರು |
ನಿನ್ನ ಕಾಂಬುವದೆ ಷಡುರಸ ಭೋಜನವು |
ಉನ್ನತ ಭಕ್ತರಿಗೆ ಅನ್ನವೆ ನೀವೆ ನೆನಿಪ |
ಅನ್ನಮಯ ದೇವ ಗುರುವಿಜಯವಿಠ್ಠಲರೇಯ |
ನಿನ್ನ ಕಾಂಬುವಂತೆ ಅಭಿಮುಖನಾಗುವದು || ೫ ||
ಜತೆ
ನಿನ್ನ ಕಾಂಬುವದೆ ನಿತ್ತೈಶ್ವರ್ಯವೊ ದೇವ ಪ್ರ- |
ಸನ್ನನಾಗುವದು ಗುರುವಿಜಯವಿಠ್ಠಲರೇಯಾ ||೬||
modalakallu SrI SEShadAsara kRuti
(guruvijayaviThThala aMkita)
sOmavArada suLAdi
rAga: paMtuvarALi
dhruvatALa
ninna kAMbuvadenage niKiLa sauBAgya prApti |
ninna kAMbuvade nityAnaMda |
ninna kAMbuvade SuBadina venipadu |
ninna kaMDadde parama maMgaLavU |
ninna kAMbuvade Gana yaSassu enage |
ninna kAMbuvade nityOtsava |
ninna kAMbuvade dEha puShTatva enage |
ninna kAMbuvade niSciMtavU |
ninna kAMbuvade parama pavitra enage |
ninna kAMbuvade ArOgyavu|
ninna kAMbuvade gaMgAdi snAna enage |
ninna kaMDaddanEka japatapa hOmavo |
ninna kAMbuvade aparimitAnnadAna |
ninna kaMDaddanEka kratu viSESha |
ninna kAMbuvade ShODaSa mahAdAna |
ninna kAMbuvade sakala vRutavo |
ninna kAMbuvade tEjassu enagadu |
ninna kAMbuvade Saurya dhairya |
ninna kAMbuvade ihapara sauKyavella |
ninna kaMDaddu mukti nijAvidu |
anyathA idakkilla ninna pAdave sAkShi |
pannaMgaSayana guruvijayaviThThalarEya |
ninna kAMbuvade iShTa enage || 1 ||
maTTatALa
ninna kANada dina aSuBa durdina |
ninna kANada j~jAna aDaviya rOdana |
ninna kANada Bakuti rOgiShTana Sakuti |
ninna kANada vairAgya dAridrana BAgya ||
ninna kANada suKa traitApada duHKA |
ninna kANada snAna badhira kELuva gAna |
ninna kANada japa caMDArkana tApa |
ninna kANada tapa nirgata pratApa |
ninna kANada AcAra bAdhipa grahacAra |
ninna kANada nara krimi kITa vAnara |
ninna kANada karma ariyadippa marma |
ninna kANada puNya gatavAda dhAnya |
ninna kANada yAtra aMdhakana nEtra |
ninna kANada pAtra kANadippa nEtra |
ninna kANade baride paripari sAdhana |
annaMta mADidaru avagilla suKasparSa |
cinmaya mUruti guruvijayaviThThalarEya |
ninna kAMbuvadella karmakke sArthakavo || 2 ||
tripuTatALa
ninna kaMDava sakala sAdhana mADidava |
ninna kaMDavanE nirmalano |
ninna kaMDavaguMTe kalikRuta aGavannu |
ninna kaMDavane jIvanmuktA |
ninna kaMDavaralli sakala suraru uMTu |
ninna kAMbuva dEha sukShEtravo |
ninna kAMbuva tanuvu pAvana venipudu |
ninna kAMbuvade vimala kIrti |
ninna kAMbuva narage narakada Baya uMTe? |
ninna kAMbuvade mAnyateyO |
unnata mahime guruvijayaviThThalarEya |
ninna kAMbuvadE niKiLa suKavO || 3 ||
aTTatALa
ninna kANade dhanyanAgEneMbOdu |
Kinna mAtallade sammatavallavu |
unnata guNanAri patiyuktaLAgalu |
sanmAnyaLenipaLu saMtata suKadi |
anaMta rUpanna kAMbuva janarella ||
cinmaya renisi SuBadi SOBisuvaru |
pannagArivAha guruvijayaviThThalarEya |
ninniMda Bakutaru vicCinna dAridrarO || 4 ||
AditALa
ninna kAMbuvade janmakke saPalavo |
ninna kAMbuvage punarapi janmavilla |
anAdi prArabdha saMbaMdha nimitta |
janmavu odagalu avagilla lEpavu |
ninna kAMbuvanna surarella manniparu |
ninna kAMbuvade ShaDurasa BOjanavu |
unnata Baktarige annave nIve nenipa |
annamaya dEva guruvijayaviThThalarEya |
ninna kAMbuvaMte aBimuKanAguvadu || 5 ||
jate
ninna kAMbuvade nittaiSvaryavo dEva pra- |
sannanAguvadu guruvijayaviThThalarEyA ||6||
Leave a Reply