Composer : Shri Purandara dasaru
ಗಂಗಾದಿ ಸಕಲ ತೀರ್ಥಂಗಳ ಫಲವಿದು
ಹರಿಯ ನಾಮಾ |
ಹಿಂಗದೆ ಜನರಿಗೆ ಮಂಗಳ ಕರವಿದು
ಹರಿಯನಾಮಾ ||ಪ||
ವೇದಶಾಸ್ತ್ರಗಳ ಓದಲರಿಯದವಗೆ
ಹರಿಯನಾಮ
ಆದಿ ಪುರುಷನ ಪೂಜಿಸದವಗೆ
ಹರಿಯನಾಮ ||೧||
ಸಾಧಿಸಬೇಕು ಮೋಕ್ಷವೆಂಬುವರಿಗೆ
ಹರಿಯ ನಾಮ
ಶೋಧಿಸಿ ಇಟ್ಟ ,ಚಿನ್ನದ ಗಟ್ಟಿ ಕಾಣಿರೋ
ಹರಿಯ ನಾಮಾ.. ||೨||
ಸ್ನಾನಸಂಧ್ಯಾವಂದನೆ ಮಾಡದವಗೆ
ಹರಿಯ ನಾಮ
ಜ್ಞಾನವು ಇಲ್ಲದ ಮೂಢಾತ್ಮ ಜನರಿಗೆ
ಹರಿಯ ನಾಮ ||೩||
ದಾನಧರ್ಮಕನುಕೂಲ-ವಿಲ್ಲದವಗೆ
ಹರಿಯ ನಾಮ
ಮಾನುಷ ಜನುಮ ಸಫಲ ಮಾಡುವುದೀ
ಹರಿಯನಾಮ ||೪||
ವ್ಯಾಳ ವ್ಯಾಳಕೆ ಎಚ್ಚರಿಕೆಯ ಕೊಡುವುದು
ಹರಿಯನಾಮ
ಜಾಳಿಗೆ ಹೊಣ್ಣು ತುಂಬಿಟ್ಟಂತೆ ಕಾಣಿರೊ
ಹರಿಯ ನಾಮ ||೫||
ಕಾಲನ ದೂತರಿಗಳುಕಿಸದಿಪ್ಪದು
ಹರಿಯ ನಾಮ
ಲೋಲ ಶ್ರೀ ಪುರಂದರ
ವಿಠ್ಠಲರಾಯನ ದಿವ್ಯ ನಾಮ ||೬||
gaMgAdi sakala tIrthaMgaLa Palavidu
hariya nAmA |
hiMgade janarige maMgaLa karavidu
hariyanAmA ||pa||
vEdaSAstragaLa Odalariyadavage
hariyanAma
Adi puruShana pUjisadavage
hariyanAma ||1||
sAdhisabEku mOkShaveMbuvarige
hariya nAma
SOdhisi iTTa ,cinnada gaTTi kANirO
hariya nAmA.. ||2||
snAnasaMdhyAvaMdane mADadavage
hariya nAma
j~jAnavu illada mUDhAtma janarige
hariya nAma ||3||
dAnadharmakanukUla-villadavage
hariya nAma
mAnuSha januma saPala mADuvudI
hariyanAma ||4||
vyALa vyALake eccarikeya koDuvudu
hariyanAma
jALige hoNNu tuMbiTTaMte kANiro
hariya nAma ||5||
kAlana dUtarigaLukisadippadu
hariya nAma
lOla SrI puraMdara
viThThalarAyana divya nAma ||6||
Leave a Reply