Composer : Shri Amba bai
ಏಳಮ್ಮ ಕೊಲ್ಹಾಪುರಧೀಶೆ | ಇನ್ನೂ
ಭಾಳ ಹೊತ್ತಾಯಿತು ವೈಕುಂಠವಾಸೆ ||pa||
ಸೃಷ್ಟಿಸೆಂದೆನುತ ಆಂಬ್ರಣಿ ರೂಪದಿಂದ್ಹರಿ
ಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕು
ಅಷ್ಟ ಭುಜದ ಲಕುಮಿ ಪ್ರಕೃತಿ ರೂಪಿಣಿಯಾಗಿ
ಸೃಷ್ಟಿಕಾರ್ಯಕೆ ಅನುವಾಗಬೇಕು ||1||
ಸಕಲ ದೇವತೆಗಳ ಸೃಷ್ಟಿ ಮಾಡಲಿಬೇಕು
ಮುಕುತಿ ಯೋಗ್ಯರ ಸೇವೆ ಕೊಳ್ಳಬೇಕು
ಸಕಲರೂಪದಲಿ ಶ್ರೀಹರಿಯ ಸೇವಿಸಬೇಕು
ಅಕಳಂಕ ಆದಿದೇವತೆ ಎನಿಸಬೇಕು ||2||
ಶ್ರೀ ಪದ್ಮಭವೆ ವೆಂಕಟೇಶನ ಕೂಡುತ
ನೀ ಪರಿಪರಿ ಲೀಲೆಗೈಯ್ಯಬೇಕು
ಗೋಪಾಲಕೃಷ್ಣವಿಠ್ಠಲನ ವಕ್ಷಸ್ಥಳ
ವ್ಯಾಪಿಸಿ ಭಕ್ತರ ಕಾಪಾಡಬೇಕು ||3||
ELamma kolhaapuradheeSe | innoo
bhaaLa hottaayitu vaikuMThavaase ||pa||
sRuShTiseMdenuta aaMbraNi roopadiMd_hari
giShTa stOtrava maaDi ebbisabEku
aShTa bhujada lakumi prakRuti roopiNiyaagi
sRuShTikaaryake anuvaagabEku ||1||
sakala dEvategaLa sRuShTi maaDalibEku
mukuti yOgyara sEve koLLabEku
sakalaroopadali Sreehariya sEvisabEku
akaLaMka aadidEvate enisabEku ||2||
Sree padmabhave veMkaTESana kooDuta
nee paripari leelegaiyyabEku
gOpaalakRuShNaviThThalana vakShasthaLa
vyaapisi bhaktara kaapaaDabEku ||3||
Leave a Reply