Raga:Saveri
ಶ್ರೀವೇಣುಗೋಪಾಲದಾಸಾರ್ಯ ವಿರಚಿತ
ಶ್ರೀಮುಖ್ಯಪ್ರಾಣದೇವರ ಸ್ತೋತ್ರ ಸುಳಾದಿ
ರಾಗ : ಸಾವೇರಿ
ಧ್ರುವತಾಳ
ಮರುತಾ ನಿನ್ನ ಮಹಿಮೆ ಪರಿಪರಿಯಿಂದ ತಿಳಿದು
ಚರಿಸಿದ ಮನುಜಗೆ ದುರಿತ ಬಾಧೆಗಳ್ಯಾಕೆ
ಸರಸಿಜಾಸನ ಸಮ ಸಿರಿದೇವಿ ಗುರುವೆಂದು
ಪರತತ್ವ ಹರಿಯೆನುತ ವಂದಿಸಿ ಅಖಿಳ
ಭರಿತನಾಗಿಪ್ಪ ಜಗದಿ ಅರಸಿ ಭಾರತಿ ಸಹಿತ
ಹೊರಗಿದ್ದು ನವಾವರಣಗಳಿಗೆ ಜೀವರ ಬೀಜ
ಸರಿಬಂದ ವ್ಯಾಪಾರದಿ ಆಡಿಸುವೆ ಜಡಜೀವರನು
ಪುರಹರ ಮೊದಲಾಗಿ ಅರಿಯರು ಒಂದು ಕಾರ್ಯ
ಗುರುವೆ ನಿನ್ನ ಹೊರತು ಹೊರಗೆ ಬೊಂಬಿಗಳ
ತೋರಿ ಒಳಗೆ ತರತರದಿ ನೀನು
ಇರುವೆ ಸರ್ವರಿಗೆ ಆಧಾರ ರೂಪದಿ ಅತಿ
ಸ್ಥಿರ ಭಕುತಿಯಿಂದ ಹರಿಯ ಧೇನಿಸುತ
ಮಿರಗುವ ಪ್ರಭೆ ನಿನ್ನದು ಪದ
ರೂಪ ಧ್ವನಿ ನಿನ್ನದು ದೇವಾ
ಬರುವ ಹೋಗುವ ವ್ಯಾಪಾರ ನಿನ್ನದು ದೇವ
ಶರಧಿಶಯನ ಸಿರಿ ವೇಣುಗೋಪಾಲರೇಯಾ
ಪರಮ ಹರುಷದ ಲೀಲೆ ತೋರುವ ನಿನ್ನೊಳಿದ್ದು || ೧ ||
ಮಟ್ಟತಾಳ
ಅಖಿಳಾಗಮ ವೇದ್ಯ ಅಖಿಳಾಗಮ ಸ್ತೌತ್ಯ
ಅಖಿಳಾಗಮ ನಿಗಮ ವ್ಯಾಪುತ ದೇವನೆ
ಅಖಿಳದೊಳಗೆ ನಿಂದು ಸಕಲ ಕಾರ್ಯಗಳೆಲ್ಲ
ಅಕುಟಿಲ ನೀನಾಗಿ ಮಾಡಿಸಿ ಮುದದಿಂದ
ಯುಕುತಿಯಿಂದಲಿ ಜಗವ ಅತಿಶಯವನು ತಿಳಿದು
ಲಕುಮಿ ಪತಿಯ ನೀನು ಕಾಣುವೆ ಸರ್ವದಾ
ಶಕತಮೂರುತಿ ನಿನ್ನ ತುತಿಸ ಬಲ್ಲವರಾರು
ಭಕುತಿಯ ಅಭಿಮಾನಿ ಭಾರತಿಗಳವಲ್ಲಾ
ಭ್ರುಕುಟಿಲಾ ವಂದಿತ ನೀನು ವೇಣುಗೋಪಾಲನ್ನ
ಪ್ರಕಟದಿ ಬಲ್ಲದ್ದು ಅರಿಯರು ಉಳಿದವರು || ೨ ||
ತ್ರಿಪುಟತಾಳ
ಪೃಥಿವಿ ಶಬ್ದದಿ ಭೂತ ಮಾತ್ರ ಪರಮಾಣುಗಳಲ್ಲಿ
ಪ್ರತಿಪ್ರತಿ ರೂಪನಾಗಿ ಇರುತಿಪ್ಪ ಮಡದಿ ಸ –
ಹಿತ ಪ್ರಾಕೃತ ಪಿಡಿದು ಸಕಲ ವ್ಯಾಪ್ತ ತಾ –
ತ್ವಿಕರಲ್ಲಿ ವ್ಯಾಪಾರ ನಿನ್ನದಯ್ಯಾ ಲೋಕ ವಂ –
ದಿತ ದೈವಾ ಶಾತಕುಂಭಾರಿಯಿಂದ ನಿರ್ಮಿತ ಬೊಮ್ಮಾಂಡ
ತಾತ ನಿನಗೆ ಎಣಿಯೆನುತ ಲೋಡುವದಯ್ಯಾ ಶ್ರೀ –
ಕಾಂತನಾದ ಸಿರಿ ವೇಣುಗೋಪಾಲನು
ಪ್ರಿತಿಯಿಂದಲಿ ನಿನಗೆ ಒಲಿದಿಪ್ಪ ಅಧಿಕವಾಗಿ || ೩ ||
ಅಟ್ಟತಾಳ
ಈ ರೀತಿಯಲಿ ಜಗದಾಧಾರಕನಾಗಿರುತಿರ್ದು
ಧಾರುಣಿಯೊಳು ಮೂರು ಅವತಾರಗಳ ಧರಿಸಿ
ಕ್ರೂರರ ಸದೆದದ್ದು ಮೀರಿದ ಕಾರ್ಯವೇ
ಮೇರು ನುಂಗುವ ಒಂದು ಚೂರು ನುಂಗಲಿಬಹುದು
ಶೂರತನವೇನೋ ಮಾರಾರಿವಂದ್ಯನೆ
ಆರು ಬಣ್ಣಿಪರೊ ವಿಚಾರಿಸಿ ನಿನ್ನನು
ನಾರಾಯಣ ಕೃಷ್ಣ ವೇಣುಗೋಪಾಲನಾ –
ಧಾರದಿಂದಲಿ ಸೇವೆ ಭಾರಿ ಭಾರಿ ಮಾಳ್ಪೆ || ೪ ||
ಆದಿತಾಳ
ಒಂದು ಅವತಾರದಿ ಅಸುರ ವೃಂದವ ಘಾತಿಸಿದೆ
ನಂದತೀರ್ಥ ರೂಪದಿಂದ ಸಕಲ ದುರುಳ –
ರಂದ ವಚನಗಳ ಕಡಿದಾನಂದದಿಂದಲಿ ಮೆರೆದೆ
ತಂದೆ ಯೀ ಕೃತಿಗಳು ನಿನ್ನಿಂದಾದು ನೋಡಿ
ಮಂದರಾವು ಸುಖವ ಪೊಂದುವೆವಯ್ಯಾ ಬಹು
ಸಿಂಧು ಸಪುತ ಯೇಕಾದಿಂದ ಹಾರುವನು
ಮುಂದಿದ್ದ ಕಾಲಿವೆಯ ನಿಂದು ನಿಂದು ದಾಟಿದಂತೆ
ಮಂದಮತಿಗಳ ಮನಕೇನೆಂಬೆಯೊ ಎಲೊ ದೇವ
ಸುಂದರಾಂಗನೆ ಸುಖದಿಂದ ಪೊರೆಯುತ ವಾಯು –
ನಂದಾ ಹನುಮ ರಾಮನಿಂದ ಆಲಿಂಗಿನಿ ಪಡೆದು
ಬಂದು ವಂದಿಸಿದೆ ಗೋಪಿಕಂದನ್ನ ಬಿಡದೆ ಭೀಮಾ –
ನಂದಮೂರುತಿ ವ್ಯಾಸನಿಂದ ತತ್ವಗಳೆಲ್ಲ
ಅಂದದಿ ಓದುವ ಅಮರೇಂದ್ರ ವಂದಿತ ಮಧ್ವ
ತಂದೆ ಎನ್ನಯ ಬಿನ್ನಪ ಒಂದು ಲಾಲಿಸುವದು
ಪೊಂದಿ ಭೂಪತಿಯ ಪೂಜೊಂದು ಬಿಡದಂತೆ
ಇಂದು ಬೇಡುವೆ ಮನದಿಂದ ವಂದನೆ ಮಾಡಿ
ಕುಂದದೆ ಎನ್ನೊಳಿದ್ದು ಮಂದಿರದೊಳು ನಿನ್ನ
ಅಂದವಾದ ರೂಪ ಇಂದು ತೋರುವದೆನಗೆ
ಸಿಂಧುಶಯನ ಸಿರಿ ವೇಣುಗೋಪಾಲನು
ನಿಂದು ನಿನ್ನೊಳು ಲೀಲೆ ಒಂದೊಂದು ಮಾಳ್ಪ ಚಿತ್ರಾ || ೫ ||
ಜತೆ
ಪವನ ನಿನ್ನಯ ಪಾದ ಪೊಂದಿದ ಮನುಜನು
ಜವನಪುರಕೆ ಸಲ್ಲಾ ವೇಣುಗೋಪಾಲ ಬಲ್ಲಾ ||
SrIvENugOpAladAsArya viracita
SrImuKyaprANadEvara stOtra suLAdi
rAga : sAvEri
dhruvatALa
marutA ninna mahime paripariyiMda tiLidu
carisida manujage durita bAdhegaLyAke
sarasijAsana sama siridEvi guruveMdu
paratatva hariyenuta vaMdisi aKiLa
BaritanAgippa jagadi arasi BArati sahita
horagiddu navAvaraNagaLige jIvara bIja
saribaMda vyApAradi ADisuve jaDajIvaranu
purahara modalAgi ariyaru oMdu kArya
guruve ninna horatu horage boMbigaLa
tOri oLage tarataradi nInu
iruve sarvarige AdhAra rUpadi ati
sthira BakutiyiMda hariya dhEnisuta
miraguva praBe ninnadu pada
rUpa dhvani ninnadu dEvA
baruva hOguva vyApAra ninnadu dEva
SaradhiSayana siri vENugOpAlarEyA
parama haruShada lIle tOruva ninnoLiddu || 1 ||
maTTatALa
aKiLAgama vEdya aKiLAgama stautya
aKiLAgama nigama vyAputa dEvane
aKiLadoLage niMdu sakala kAryagaLella
akuTila nInAgi mADisi mudadiMda
yukutiyiMdali jagava atiSayavanu tiLidu
lakumi patiya nInu kANuve sarvadA
SakatamUruti ninna tutisa ballavarAru
Bakutiya aBimAni BAratigaLavallA
BrukuTilA vaMdita nInu vENugOpAlanna
prakaTadi balladdu ariyaru uLidavaru || 2 ||
tripuTatALa
pRuthivi Sabdadi BUta mAtra paramANugaLalli
pratiprati rUpanAgi irutippa maDadi sa –
hita prAkRuta piDidu sakala vyApta tA –
tvikaralli vyApAra ninnadayyA lOka vaM –
dita daivA SAtakuMBAriyiMda nirmita bommAMDa
tAta ninage eNiyenuta lODuvadayyA SrI –
kAMtanAda siri vENugOpAlanu
pritiyiMdali ninage olidippa adhikavAgi || 3 ||
aTTatALa
I rItiyali jagadAdhArakanAgirutirdu
dhAruNiyoLu mUru avatAragaLa dharisi
krUrara sadedaddu mIrida kAryavE
mEru nuMguva oMdu cUru nuMgalibahudu
SUratanavEnO mArArivaMdyane
Aru baNNiparo vicArisi ninnanu
nArAyaNa kRuShNa vENugOpAlanA –
dhAradiMdali sEve BAri BAri mALpe || 4 ||
AditALa
oMdu avatAradi asura vRuMdava GAtiside
naMdatIrtha rUpadiMda sakala duruLa –
raMda vacanagaLa kaDidAnaMdadiMdali merede
taMde yI kRutigaLu ninniMdAdu nODi
maMdarAvu suKava poMduvevayyA bahu
siMdhu saputa yEkAdiMda hAruvanu
muMdidda kAliveya niMdu niMdu dATidaMte
maMdamatigaLa manakEneMbeyo elo dEva
suMdarAMgane suKadiMda poreyuta vAyu –
naMdA hanuma rAmaniMda AliMgini paDedu
baMdu vaMdiside gOpikaMdanna biDade BImA –
naMdamUruti vyAsaniMda tatvagaLella
aMdadi Oduva amarEMdra vaMdita madhva
taMde ennaya binnapa oMdu lAlisuvadu
poMdi BUpatiya pUjoMdu biDadaMte
iMdu bEDuve manadiMda vaMdane mADi
kuMdade ennoLiddu maMdiradoLu ninna
aMdavAda rUpa iMdu tOruvadenage
siMdhuSayana siri vENugOpAlanu
niMdu ninnoLu lIle oMdoMdu mALpa citrA || 5 ||
jate
pavana ninnaya pAda poMdida manujanu
javanapurake sallA vENugOpAla ballA ||
Leave a Reply